ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬಾಬು ಜಗಜೀವನರಾಮ್ ಗೆ ಭಾರತ ರತ್ನ ನೀಡಲು ಮನವಿ

ಕಲಬುರಗಿ:ದೇಶದ ಮಾಜಿ ಉಪಪ್ರಧಾನಿ,ಸ್ವಾತಂತ್ರ್ಯ ಹೋರಾಟಗಾರ,ದಲಿತ ನಾಯಕ ಬಾಬು ಜಗಜೀವನರಾಮ ಅವರಿಗೆ ಭಾರತ ರತ್ನ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಬಿಜೆಪಿ ಮುಖಂಡ ರವಿ ಸಿಂಗೆ ಅವರು ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು,ದಲಿತರು ಹಿಂದೂ‌ ಮಡಿಲಲ್ಲಿ ಉಳಿಯಬೇಕೆಂದು ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಿದ ದೇಶದ ತುಳಿತಕ್ಕೊಳಗಾದ ಜನರ ಉನ್ನತಿಗೆ ಮಹಾನ್ ಕೊಡುಗೆ ನೀಡಿ ಇತಿಹಾಸದಲ್ಲಿ ಅನುಕರಣೀಯವಾಗಿರುವ ಜಗಜೀವನರಾಮ ಅವರಿಗೆ ಭಾರತ ರತ್ನ ನೀಡುವುದು ಅತ್ಯಂತ ಅಗತ್ಯವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಂಡಿತ ಮದನ ಮೋಹನ ಮಾಳವೀಯರಿಂದ ಪ್ರೇರಿತರಾಗಿದ್ದ ಅವರು 1925 ರಲ್ಲಿ ಹಿಂದೂ ಬನಾರಸ ವಿಶ್ವವಿದ್ಯಾಲಯ ಸೇರಿ 1935 ರಲ್ಲಿ ಹಿಂದೂ ಮಹಾಸಭಾ ಅಧಿವೇಷನದಲ್ಲಿ ಭಾಗವಹಿಸಿ ಅಸ್ಪೃಶ್ಯರಿಗೆ ದೇವಾಲಯಗಳು ಮತ್ತು ಬಾವಿಗಳನ್ನು ತೆರೆಯಲು ಪ್ರಸ್ತಾಪಿಸಿ ಅದರಲ್ಲಿ ಯಶ್ವಸಿಯಾದ ಕೀರ್ತಿ ಜಗಜೀವನರಾಮ ಅವರಿಗೆ ಸಲ್ಲುತ್ತದೆ.ಕೇಂದ್ರ ಕಾರ್ಮಿಕ,ರಕ್ಷಣಾ,ಸಂವಹನ,ಸಾರಿಗೆ ಮತ್ತು ರೈಲ್ವೆ ಮತ್ತು ಕೃಷಿ ಸಚಿವರಾಗಿ ಅಪ್ರತಿಮ ಸೇವೆ ಸಲ್ಲಿಸಿ ದೇಶವನ್ನು ಸ್ವಾವಲಂಭಿಯನ್ನಾಗಿಸಿ ಹಸಿರುಕ್ರಾಂತಿ ಹುಟ್ಟು ಹಾಕಿ ಸುದೀರ್ಘ 30 ವರ್ಷಗಳ ಕಾಲ ಕೇಂದ್ರದ ಕ್ಯಾಬಿನೆಟ್ ಸಚಿವರಾದ ಹೆಗ್ಗಳಿಕೆಗೆ ಹೊಂದಿರುವ ಜಗಜೀವನರಾಮ ಅವರಿಗೆ ಭಾರತ ರತ್ನ ನೀಡುವುದು ಅತ್ಯಂತ ಸೂಕ್ತವಾಗಿದೆ ಎಂದರು.
ಮಾದಿಗ ಚಮ್ಮಾರ ಸಮುದಾಯಕ್ಕೆ ಸೇರಿ ಕೋಟ್ಯಂತರ ದಲಿತರ ನೋವುಗಳಿಗೆ ಧ್ವನಿಯಾಗಿ ತುಳಿತಕ್ಕೊಳಗಾದ ಬಡವರು,ದಲಿತರು ಮತ್ತು ಹಿಂದುಳಿದ ವರ್ಗಗಳ ಚಾಂಪಿಯನ್ ಎಂದೇ ಖ್ಯಾತರಾಗಿದ್ದ ಜಗಜೀವನರಾಮ ಅವರ ಅವಿಸ್ಮರಣೀಯ ಸೇವೆ ಪರಿಗಣಿಸಿ ಭಾರತ ರತ್ನ ನೀಡಬೇಕೆಂದು ಅವರು ಮನವಿ ಮಾಡಿಕೊಂಡರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ