ಸಿಂಧನೂರು ನಗರದ ಪಿ ಡಬ್ಲ್ಯೂ ಡಿ ಕ್ಯಾಂಪ್ ನ ಸಂಚಾರಿ ಪೋಲಿಸ್ ಠಾಣೆಯ ಆವರಣದಲ್ಲಿ ಸಂಚಾರಿ ಪೊಲೀಸ್ ಇಲಾಖೆ ಹಾಗೂ ವನಸಿರಿ ಫೌಂಡೇಶನ್ ಸಹಯೋಗದೊಂದಿಗೆ ಹುತಾತ್ಮ ಯೋಧರ ಸ್ಮರಣಾರ್ಥವಾಗಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ DYSP ಬಾಳಪ್ಪ ಆದಪ್ಪ ತಳವಾರ(BS ತಳವಾರ) ಅವರು ಸಸಿ ನೆಟ್ಟು ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಸೇನೆಯ ಭದ್ರತಾ ಪಡೆಗಳ ಮೇಲೆ ನಡೆದ ಅತ್ಯಂತ ಭೀಕರ ದಾಳಿಯಲ್ಲಿ 40 ಮಂದಿ ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು.ಈ ಕಹಿ ಘಟನೆ ಎಲ್ಲಾ ಭಾರತೀಯರಿಗೆ ನೋವುಂಟು ಮಾಡಿತು.ಇಂತಹ ಒಂದು ಯುದ್ಧದಲ್ಲಿ ವೀರಮರಣ ಹೊಂದಿದ ಹುತಾತ್ಮ ಯೋಧರ ಸವಿನೆನಪು ಸದಾಕಾಲ ನಮ್ಮ ಜೊತೆಗೆ ಇರಲಿ,ಅವರ ಆದರ್ಶಗಳನ್ನು ನಾವುಗಳೆಲ್ಲರೂ ಮೈಗೂಡಿಸಿಕೊಳ್ಳಬೇಕೆಂಬ ಉದ್ದೇಶದಿಂದ ಹುತಾತ್ಮ ಯೋಧರ ಸ್ಮರಣಾರ್ಥವಾಗಿ ಇಂದು ಸಂಚಾರಿ ಪೋಲಿಸ್ ಠಾಣೆಯ ಆವರಣದಲ್ಲಿ ಹಲವಾರು ಸಸಿಗಳನ್ನು ನೆಟ್ಟು ನೀರುಣಿಸುವ ಮೂಲಕ ಸಸಿ ನೆಡುವ ಕಾರ್ಯಕ್ರಮವನ್ನು ವನಸಿರಿ ಫೌಂಡೇಶನ್ ತಂಡ ಹಾಗೂ ನಮ್ಮ ಸಿಬ್ಬಂದಿಗಳು ಹಮ್ಮಿಕೊಂಡಿರುವುದು ಶ್ಲಾಘನೀಯ ಇಂತಹ ಕಾರ್ಯಗಳು ಇನ್ನೂ ಹೆಚ್ಚು ಹೆಚ್ಚು ನಡೆಯಲಿ,ಹುತಾತ್ಮರ ಸವಿನೆನಪು ಉಳಿಯುವ ಜೊತೆ ಜೊತೆಗೆ ನಮ್ಮ ಸುತ್ತಮುತ್ತಲಿನ ವಾತಾವರಣದಲ್ಲಿ ಶುದ್ಧ ಗಾಳಿ ದೊರೆಯುವಂತಾಗಲು ಪರಿಸರವನ್ನು ಉಳಿಸಲು ಮುಂದಾಗೋಣ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ರೀತಿಯ ತಳಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ಸಸಿಗಳನ್ನು ನೆಟ್ಟು ನೀರುಣಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷರಾದ ಅಮರೇಗೌಡ ಮಲ್ಲಾಪುರ, DYSP ಬಿ.ಎಸ್.ತಳವಾರ,CPI ಸುನಿಲ್ ವಿ ಮೂಲಿಮನಿ,PSI ಕೆ.ಕುಮಾರ ಸ್ವಾಮಿ,ಸಿಬ್ಬಂದಿಗಳಾದ ಮಹಾಂತೇಶ,ಪಂಪಾಪತಿ,ಯಕೋಬ,ಶೋಭಾ,ರಾಧಾ,ಶಿವರಾಜ,ಹನುಮಂತ,ವನಸಿರಿ ಫೌಂಡೇಶನ್ ಸಹಕಾರ್ಯದರ್ಶಿ ರಂಜಾನ್ ಸಾಬ್,ಮಸ್ಕಿ ತಾಲೂಕ ಅಧ್ಯಕ್ಷ ರಾಜು ಪತ್ತಾರ ಬಳಗಾನೂರ,ಸದಸ್ಯ ಮುದುಕಪ್ಪ ಹೊಸಳ್ಳಿ ಕ್ಯಾಂಪ್ ಇನ್ನಿತರರಿದ್ದರು.