ತುಮಕೂರು:
“ಸಂವಿಧಾನ ಜಾಗೃತಿ ಜಾಥಾವನ್ನು ವಿಜೃಂಭಣೆಯಿಂದ ಆಚರಿಸಿದ ಮರಿದಾಸನಹಳ್ಳಿ ಗ್ರಾಮ ಪಂಚಾಯ್ತಿ.ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಮರಿದಾಸನಹಳ್ಳಿ ಗ್ರಾಮ ಪಂಚಾಯತಿಗೆ ಸಂವಿಧಾನ ಜಾಗೃತಿ ಜಾಥಾ ಆಗಮಿಸಿ ನಂತರ ರಥ ಗ್ರಾಮ ಪಂಚಾಯತಿಯ ಹನುಮಂತನಹಳ್ಳಿಗೆ ಬಂದ ರಥಕ್ಕೆ ಗ್ರಾಮ ಪಂಚಾಯತಿ ವತಿಯಿಂದ ಮತ್ತು ಗ್ರಾಮಸ್ಥರು ಬಹಳ ವಿಜೃಂಭಣೆಯಿಂದ ಭವ್ಯ ಸ್ವಾಗತ ಮಾಡಿದರು ಮತ್ತು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳ ಗ್ರಾಮಸ್ಥರು ಮತ್ತು ಶಾಲಾ ಮಕ್ಕಳು ಶಿಕ್ಷಕರು ಮತ್ತು ಸ್ತ್ರೀಶಕ್ತಿ ಸಂಘದವರು ಹಾಗೂ ಅಶಾಕಾರ್ಯಕರ್ತೆಯರು ಸೇರಿ ಸಂವಿಧಾನ ಜಾಗೃತಿ ಜಾಥಾವನ್ನು ಹಬ್ಬದಂತೆ ಬಹಳ ಅದ್ದೂರಿಯಾಗಿ ಆಚರಿಸಲಾಯಿತು ಈ ಜಾಥಾದಲ್ಲಿ ತಾಲ್ಲೂಕಿನ ಸಮಾಜಕಲ್ಯಾಣ ಇಲಾಖೆಯ ಅಧಿಕಾರಿಗಳು ಮಲ್ಲಿಕಾರ್ಜುನ ರವರು ಮತ್ತು ವೈ ಎನ್ ಹೊಸಕೋಟೆ ಹೋಬಳಿಯ ಆರ್ ಐ ಗಳಾದ ಕಿರಣ್ ರವರು ಮತ್ತು pwo ಇಲಾಖೆ AEE ಅನಿಲ್ ರವರು ಮತ್ತು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಮುದ್ದಣ್ಣನವರು ಪಂಚಾಯತಿ ಅದ್ಯಕ್ಷರಾದ ಲಲಿತಮ್ಮ ಹನುಮಂತರಾಯಪ್ಪನವರು ಹಾಗೂ ಗ್ರಾಮಪಂಚಾಯ್ತಿಯ ಎಲ್ಲಾ ಸದಸ್ಯರು ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿ ಹಾಗೂ ದಲಿತ ಪರ ಸಂಘಟನೆಯ ಪದಾಧಿಕಾರಿಗಳು ಹಾಗೂ ದಲಿತ ಮುಖಂಡರು ಸೇರಿ ಈ ಕಾರ್ಯಕ್ರಮವನ್ನು “ಸಂವಿಧಾನ ಜಾಗೃತಿ ಜಾಥಾ ರಥವನ್ನು ಗ್ರಾಮಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಬಹಳ ಅದ್ದೂರಿಯಾಗಿ ಯಶಸ್ವಿಯಾಗಿ ನೆರವೇರಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.