ಶ್ರೀ ಮಹಾಲಕ್ಷ್ಮೀ ಮಹಿಳಾ ಕಲಾ ಮತ್ತು ವಾಣಿಜ್ಯ ಪದವಿ ಮಹಾ ವಿದ್ಯಾಲಯದ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಆಯೋಜನೆ
ಗ್ರಾಮೀಣ ಪ್ರದೇಶದಲ್ಲಿ ಮಹಿಳಾ ಶಿಕ್ಷಣ ಹೆಣ್ಣು ಭ್ರೂಣ ಹತ್ಯೆ,ಸಾಮಾಜಿಕ ಸಮಸ್ಯೆಗಳ ಕುರಿತು ವಿಶೇಷ ಉಪನ್ಯಾಸ
ಜೇವರ್ಗಿ ತಾಲೂಕಿನ ದತ್ತು ಗ್ರಾಮವಾದ ಗಂವಾರದಲ್ಲಿ ಶ್ರೀ ಸೋಪಾನನಾಥನ ಮಹಾ ಸನ್ನಿಧಾನದಲ್ಲಿ ಪೂಜ್ಯ ಶ್ರೀ ಗಂಗಾಧರೇಶ್ವರ ಗ್ರಾಮೀಣಾಭಿವೃದ್ಧಿ ವಿದ್ಯಾವರ್ಧಕ ಸಂಘ ಸಂಯುಕ್ತಾಶ್ರಯದಲ್ಲಿರುವ ಶ್ರೀ ಮಹಾಲಕ್ಷ್ಮಿ ಮಹಿಳಾ ಕಲಾ ಮತ್ತು ವಾಣಿಜ್ಯ ಪದವಿ ಮಹಾ ವಿದ್ಯಾಲಯದ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಆಯೋಜನೆ ಮಾಡಲಾಗಿದ್ದು.
ಗ್ರಾಮೀಣ ಪ್ರದೇಶದಲ್ಲಿ ಮಹಿಳಾ ಶಿಕ್ಷಣ ಭ್ರೂಣ ಹತ್ಯೆ ಮತ್ತು ಸಾಮಾಜಿಕ ಸಮಸ್ಯೆಗಳ ಕುರಿತು ವಿಶೇಷ ಉಪನ್ಯಾಸವನ್ನು ನೀಡಲಾಯಿತು.ಈ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಸರಕಾರಿ ಬಾಲಕಿಯರ ಸ್ವತಂತ್ರ ಪದವಿ ಪೂರ್ವ ಕಾಲೇಜು ಹಿರಿಯ ಉಪನ್ಯಾಸಕರು ಹಾಗೂ ಸಾಹಿತಿಗಳಾದ ಡಾ.ಗೋವಿಂದರಾಜ ಆಲ್ದಾಳ,ಡಾ.ಈರಣ್ಣ ಹವಲ್ದಾರ್,ಪಿಡಪ್ಪ ಚನ್ನೂರ್,ಡಾ.ಸಿದ್ದಲಿಂಗಪ್ಪ, ತ್ರಿವಿಕ್ರಮಾನಂದ ಸರಸ್ವತಿ ಮಹಾ ಸಂಸ್ಥಾನದ ವ್ಯವಸ್ಥಾಪಕ ನಿರ್ದೇಶಕರಾದ ಸಂಜೀವ್ ಕುಮಾರ್ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ವೇದಿಕೆ ಮೇಲೆ ಅತಿಥಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪನ್ಯಾಸಕರಾದ ಬಸಯ್ಯ ಸಿ ಹಿರೇಮಠ್, ಅತಿಥಿಗಳಾಗಿ ಗುರುಲಿಂಗಪ್ಪ ದೊಡ್ಮನಿ ಗಂವಾರ್, ಈರಣ್ಣಗೌಡ ಮುದುಗೊಂಡ ದೇವಣ್ಣಗೌಡ ರೂಗಿ ವಹಿಸಿಕೊಂಡಿದ್ದರು.ಇನ್ನುಳಿದಂತೆ
ಶ್ರೀ ಮಹಾಲಕ್ಷ್ಮಿ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲರು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಡಾ.ಧರ್ಮಣ್ಣ ಕೆ ಬಡಿಗೇರ,ಸಂಸ್ಥೆಯ ಅಧ್ಯಕ್ಷರಾದ ಮಂಜುಳಾ ಡಿ ಬಡಿಗೇರ್,ಉಪನ್ಯಾಸಕರಾದ, ಮಲ್ಲಿಕಾರ್ಜುನ ನೇದಲಗಿ ,ಶರಣು ಕುಮ್ಮನ ಸಿರಸಗಿ,ಬಸಯ್ಯ ಸಿ ಹಿರೇಮಠ್,ಸುರೇಶ್ ಕುಮಾರ ಹಿರೇಮಠ,ಜಟ್ಟೆಪ್ಪ ಎನ್ ಪೂಜಾರಿ,ಸಾವಿತ್ರಿ ಜಿ ಮನಗೂಳಿ,ರೂಪಾ ಆರ್ ಕಲ್ಲೂರ್,ಚೈತ್ರಾ.ಪಿ.ಮೊರಟಗಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಶಿಬಿರಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವರದಿ:ಚಂದ್ರಶಾಗೌಡ ಮಾಲಿ ಪಾಟೀಲ್