ಇಂಡಿ-ಜಗತ್ತು ಕಂಡ ಅತ್ಯದ್ಭುತ ವಿಜ್ಞಾನಿ ಥಾಮಸ್ ಅಲ್ವ ಎಡಿಸನ್ ಬಾಲ್ಯದಲ್ಲಿ ಕಲಿಯುವ ಸಂದರ್ಭದಲ್ಲಿ ಶಾಲಾ ಕಲಿಕೆಯಲ್ಲಿ ತುಂಬಾ ಹಿಂದುಳಿದ ವಿಧ್ಯಾರ್ಥಿಯಾಗಿದ್ದನು.
ಆತನ ಶಿಕ್ಷಕರು ಆತನನ್ನು ಕಂಡು ಆತನ ತಾಯಿಗೆ ಪತ್ರ ಬರೆದು ನಿಮ್ಮ ಮಗನಿಗೆ ಶಾಲೆ ಬಿಡಿಸುವುದು ಒಳಿತು ಎಂದರು,ಶಾಲೆಯಲ್ಲಿ ಸಂಪೂರ್ಣವಾಗಿ ನಿರ್ಲಕ್ಷಿತವಾಗಿರುವ ಮಗುವನ್ನು ಕಂಡು ತಾಯಿ ತನ್ನ ಮಗನ ಕುರಿತು ಶಿಕ್ಷಕರು ನೀಡಿದ ಕಾಗದದ ಬಗ್ಗೆ ಏನನ್ನೂ ಹೇಳದೆ,ಅದನ್ನು ಮುಚ್ಚಿಟ್ಟಳು ನಂತರ ಮಗನಿಗೆ ನೀನು ಶಾಲೆಯಲ್ಲಿ ತುಂಬಾ ಜಾಣನಾಗಿರುವೆ.!ನಿನಗೆ ಶಾಲೆಯ ಅಗತ್ಯವಿಲ್ಲವೆಂದು ನಿಮ್ಮ ಶಿಕ್ಷಕರು ಹೇಳಿದ್ದಾರೆ.!ಎಂದು ಹೇಳಿ ಮನೆಯಲ್ಲಿ ಆತನಿಗೆ ಬೋಧನೆ ನೀಡಿ ಆತನನ್ನು ವಿಜ್ಞಾನದ ನೂರಾರು ಆವಿಷ್ಕಾರಗಳನ್ನು ಕಂಡು ಹಿಡಿಯಲು ಪ್ರೇರಣೆಯಾದಳು ಹಾಗಾಗಿ ಪ್ರತಿ ಪಾಲಕರು ಅರ್ಥ ಮಾಡಿಕೊಳ್ಳಬೇಕು ಪ್ರಂಪಚದಲ್ಲಿರುವ ಪ್ರತಿ ಮಗು ಕೂಡಾ ಒಂದು ಬಲವಾದ ಪ್ರತಿಭೆ ಹೊತ್ತು ಬಂದಿರುತ್ತದೆ ಎಂದು ಹೇಳಿದರು.ಪ್ಯಾರಾ ಮೆಡಿಕಲ್ ಕಾಲೇಜು ಮತ್ತು ಎಕ್ಸಲೆಂಟ್ ಹಿರಿಯ ಪ್ರಾಥಮಿಕ ಶಾಲೆ ಇಂಡಿಯಲ್ಲಿ ಜರುಗಿದ ಶಾಲಾ ವಾರ್ಷಿಕೋತ್ಸವದ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಪ್ರೇರಣಾದಾಯಕವಾಗಿ ಮಾತನಾಡಿದರು.ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸಂತೋಷ ಕೆಂಭೋಗಿ ಮಾತನಾಡಿ ಮಕ್ಕಳಲ್ಲಿ ಶಿಸ್ತು,ಸಮಯ ಪ್ರಜ್ಞೆ,ಸಂಶೋಧನಾ ಪ್ರಜ್ಞೆಯನ್ನು ಬೆಳೆಸಬೇಕು ಎಂದರು ಈ ಸಂದರ್ಭದಲ್ಲಿ ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಸೌಮ್ಯ ರೂಗಿ ಪ್ರಾಧ್ಯಾಪಕರಾದ ಮಹಾಂತೇಶ ಪಾಟೀಲ ಶಿಕ್ಷಕರಾದ ಶ್ರೀಶೈಲ್ ಹೂಗಾರ ಅರುಣ ವಠಾರ ಶೃತಿ,ವಾಲಿಕಾರ ಶ್ವೇತಾ ದೋತ್ರೆ,ಶೋಭಾ ಸಾರವಾಡ ಹಾಜರಿದ್ದರು.
ವರದಿ:ಅರವಿಂದ್ ಕಾಂಬಳೆ,ಇಂಡಿ