ಕೊಟ್ಟೂರು:ಪತ್ರಕರ್ತರ ಬದುಕು ಬವಣೆಯ ಸಹಕಾರವಾಗಿ ವಿವಿಧ 11 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ನಿರಂತರವಾಗಿ 3ದಿನಗಳ ಕಾಲ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಿದ್ದ, ಕಾನಿಪ ಧ್ವನಿ ಸಂಘಟನೆ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ.
ಈಗ ಕಾನಿಪ ಧ್ವನಿ ಸಂಘಟನೆಯ 2ನೇ ರಾಜ್ಯ ಸಮ್ಮೇಳನ ಕಾರ್ಯಕ್ರಮ ಮಾರ್ಚ 24 ರ ಭಾನುವಾರ ನೆಲಮಂಗಲದಲ್ಲಿ ನಡೆಸಲು ನಿರ್ಣಯಗೊಂಡಿದ್ದು ಇದರ ಯಶಸ್ವಿಗಾಗಿ ನಿರಂತರವಾಗಿ ರಾಜ್ಯದ ಪ್ರತಿ ಜಿಲ್ಲೆ,ತಾಲೂಕು,ಹೋಬಳಿ ಮಟ್ಟದಲ್ಲಿ ಕಾನಿಪ ಧ್ವನಿ ಸಂಘಟನೆಯನ್ನು ಗಟ್ಟಿಗೊಳಿಸುವ ನಿರಂತರ ಪ್ರಯತ್ನ ಜೊತೆಗೆ ರಾಜ್ಯದ ಎಲ್ಲಾ ಪತ್ರಕರ್ತರ ಒಗ್ಗೂಡಿಸಲು ರಾಜ್ಯದ ಎಲ್ಲಾ ಪದಾಧಿಕಾರಿಗಳಿಗೆ ಆಹ್ವಾನ ನೀಡುವ ಸತತ ಪ್ರಯತ್ನ ರಾಜ್ಯಾಧ್ಯಕ್ಷರ ಜೊತೆ ಜಿಲ್ಲಾ ಮತ್ತು ತಾಲೂಕು ಅಧ್ಯಕ್ಷರ ಮತ್ತು ಪದಾಧಿಕಾರಿಗಳು ಸಂಘಟನೆ ಗಟ್ಟಿಗೊಳಿಸಲು ಕೈ ಜೋಡಿಸಿದ್ದಾರೆ.
ರಾಜ್ಯಾದ್ಯಂತ ಕಾನಿಪ ಧ್ವನಿ ಸಂಘಟನೆ ರಾಜ್ಯಾಧ್ಯಕ್ಷರ ಜೊತೆ ಕೊಟ್ಟೂರು ತಾಲೂಕು ಕಾನಿಪ ಧ್ವನಿ ಸಂಘಟನೆ ಅಧ್ಯಕ್ಷರಾದ ಚಿಗಟೇರಿ ಜಯಪ್ಪ ಇವರು ರಾಜ್ಯದ ಅನೇಕ ಜಿಲ್ಲಾ,ತಾಲೂಕು ಕಾನಿಪ ಧ್ವನಿ ಸಂಘಟನೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಸಂಘಟನೆಗೆ ಮತ್ತಷ್ಟು ಶಕ್ತಿ ತುಂಬುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ.
ನಮ್ಮ ಸಂಘಟನೆ ಮುಂದಿರುವ ಗುರಿ ಒಂದೇ 2 ನೇ ರಾಜ್ಯ ಸಮ್ಮೇಳನ ಕಾರ್ಯಕ್ರಮ ಯಶಸ್ವಿಗೊಳಿಸುವುದು,ಆದ್ದರಿಂದ ಕೊಟ್ಟೂರು ತಾಲೂಕಿನ ಎಲ್ಲಾ ಕಾ.ನಿ.ಪ ಧ್ವನಿ ಸಂಘಟನೆ ಸದಸ್ಯರು ತಪ್ಪದೇ ಮಾರ್ಚ್ 24 ರಂದು ಸಮ್ಮೇಳನದಲ್ಲಿ ಭಾಗವಹಿಸುವಂತೆ ಕೊಟ್ಟೂರು ತಾಲೂಕು ಪತ್ರಕರ್ತರಲ್ಲಿ ಜಾಗೃತಿ ಮೂಡಿಸುವ ಕೆಲಸ ಕಾನಿಪ ಧ್ವನಿ ಸಂಘಟನೆ ಸದಸ್ಯರಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಕೊಟ್ಟೂರು ತಾಲೂಕು ಕಾನಿಪ ಧ್ವನಿ ಸಂಘಟನೆ ಅಧ್ಯಕ್ಷರಾದ ಚಿಗಟೇರಿ ಜಯಪ್ಪ ಇವರು ತಿಳಿಸಿದ್ದಾರೆ.
ವರದಿ:ವೈ.ಮಹೇಶ್ ಕುಮಾರ್ ಕೊಟ್ಟೂರು