ಕಲಬುರಗಿ ಜಿಲ್ಲೆಯ ಚಿತ್ತಾಪುರ ನಗರದ ಹೃದಯ ಭಾಗದಲ್ಲಿರುವ ವಿಶ್ವಕರ್ಮ ಶಿಕ್ಷಣ ಸಂಸ್ಥೆಯ ಸಂಚಾಲಿತ ದೇವಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಉತ್ಸವ ಹಾಗೂ ದೇವನಾಮ ಪ್ರಿಯ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿದ ಪರಮಪೂಜ್ಯ ಶ್ರೀ ಮ ನಿ ಪ್ರ ಸಿದ್ದಲಿಂಗೇಶ್ವರ ಸ್ವಾಮಿಗಳು ಮಾತನಾಡುತ್ತಾ ಮಕ್ಕಳಿಗೆ ಮನೆಯಿಂದಲೇ ಸಂಸ್ಕಾರ ಸಂಸ್ಕೃತಿ ಸಿಕ್ಕಾಗ ಶಾಲೆಯಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಾಲೆ ಪ್ರಮುಖ ಪಾತ್ರ ನಿರ್ವಹಿಸುತ್ತದೆ.ಅದರೊಂದಿಗೆ ಶಾಲೆಯಲ್ಲಿ ಇಂದು ಪೂರ್ಣ ಸಂಸ್ಕಾರ ನೀಡುವುದು ಅಗತ್ಯ ಎಂದರು.
ಪ್ರಶಸ್ತಿ ಪುರಸ್ಕೃತರಾದಂತಹ ಡಾಕ್ಟರ್ ಚಾಮರಾಜ ಕಮ್ಮಾರ್ ಹಾವೇರಿ ಅವರು ಮಾತನಾಡುತ್ತಾ ಇಂದು ಪ್ರಶಸ್ತಿಗಳು ವ್ಯಾಪಾರೀಕರಣಗೊಳ್ಳುತ್ತಿವೆ ಆದರೆ ಯೋಗ್ಯತೆ ಇರುವ ವ್ಯಕ್ತಿಯನ್ನು ಗುರುತಿಸಿ ದೇವನಾಮ ಪ್ರಿಯ ಪ್ರಶಸ್ತಿ ನೀಡುತ್ತಿರುವ ಹೆಮ್ಮೆಯ ವಿಷಯ ಸರಕಾರ ಮತ್ತು ಸಮಾಜದ ಗಮನ ಸೆಳೆಯುವಂತಹ ಕೆಲಸ ಸಂಸ್ಥೆ ಮಾಡುತ್ತಿದೆ ಎಂದರು ಸಂಸ್ಥೆಯ ಅಧ್ಯಕ್ಷರಾದ ಮತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಯುತ ವೀರೇಂದ್ರ ಇನಾಮ್ದಾರ್ ಅವರು ವಹಿಸಿದರು.ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ್ ಕಾಳಗಿ ಅಧ್ಯಕ್ಷರು ಪುರಸಭೆ ಚಿತಾಪುರ ಶ್ರೀ ನಾಗು ಸಾಹುಕಾರ್ ಬಂಕಲಗಿ ಶ್ರೀ ಶಾಮ್ ಮೇಧಾನ್ ಪುರಸಭೆ ಸದಸ್ಯರು ಶ್ರೀಮತಿ ಕವಿತಾ ದೊಡ್ಮನಿ ಸಿಆರ್ಪಿ ಚಿತ್ತಾಪುರ ನಾರಾಯಣ ಜೋಶಿ ಪತ್ರಕರ್ತರು ಬಸವರಾಜ್ ಶಿರ್ವಾಳ್ ಶೈಖ್ ಯಾಸೀನ್ ವೇದಿಕೆ ಮೇಲೆ ಉಪಸ್ಥಿತರಿದ್ದರು ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣ ಶ್ರೀಮತಿ ಶಶಿಕಲಾ ವೈಜಾಪುರ್, ನಡೆಸಿಕೊಟ್ಟರು ಶ್ರೀಮತಿ ಶ್ವೇತಾ ಬಿ ಶಿರವಾಳ್ ವಂದನಾರ್ಪಣೆ ಮಾಡಿದರು.
ವರದಿ ಮೊಹಮ್ಮದ್ ಅಲಿ