ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಜಾತಿ ಜನಗಣತಿ ಪ್ರಸ್ತುತವೋ ಅಪ್ರಸ್ತುತವೋ!.

ಆಧುನಿಕ ಪ್ರಪಂಚದಲ್ಲಿ ಭಾರತ ಮಹತ್ತರವಾದ ಸ್ಥಾನವನ್ನು ಗಳಿಸಿಕೊಂಡಿದೆ.ಇಂತಹ ಭವ್ಯ ಭಾರತಕ್ಕೆ ಅನನ್ಯವಾದ ಇತಿಹಾಸವಿರುವುದು ತಿಳಿದಿರುವ ಸಂಗತಿ.ಸಾವಿರಾರು ಜನರ ಬಲಿದಾನಗಳ ಪರಿಶ್ರಮ ಫಲವಾಗಿ ಭಾರತ ಕಂಪನಿ ಆಡಳಿತದಿಂದ ಮುಕ್ತಿಯನ್ನು ಪಡೆದುಕೊಂಡಿತು.ಆ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದಕ್ಕಾಗಿ ನಾವು ಸಂವಿಧಾನವನ್ನು ರಚಿಸಿಕೊಂಡೆವು ಎಲ್ಲಾ ಸಂವಿಧಾನಗಳಿಗಿಂತ ಭಾರತದ ಸಂವಿಧಾನವನ್ನು ಆದರ್ಶ ಸಂವಿಧಾನವೆಂದು ಕರೆಯಲಾಗುತ್ತದೆ.ಕಾರಣ ಭಾರತೀಯ ಸಂವಿಧಾನದಲ್ಲಿ ಜಾತ್ಯತೀತ ತತ್ವವಿರುವುದೇ ಇದಕ್ಕೆ ಮೂಲ ಕಾರಣ.ಆದರೆ ಆಧುನಿಕ ಸರಕಾರಗಳು ತಮ್ಮ ತಮ್ಮ ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳುವುದಕ್ಕಾಗಿ ಜಾತಿಯನ್ನೇ ಬಳಸಿಕೊಳ್ಳುತ್ತಿರುವುದು ಎಲ್ಲೋ ಒಂದು ಕಡೆ ನಮ್ಮ ಆದರ್ಶ ಸಂವಿಧಾನಕ್ಕೆ ಚ್ಯುತಿ ತರುವ ಕೆಲಸವನ್ನು ಪಕ್ಷಗಳು ಮಾಡುತ್ತಿವೆ ಎಂದರೆ ತಪ್ಪಾಗಲಾರದು. ನಮ್ಮ ಕರ್ನಾಟಕವೂ ಸಹ ಇದಕ್ಕೆ ಹೊರತಾಗಿಲ್ಲ. ನಮ್ಮ ರಾಜ್ಯದ ರಾಜಕೀಯದಲ್ಲಿ ಇವಾಗ ಜಾತಿ ಜನಗಣತಿಯದ್ದೇ ದರ್ಬಾರು ಶುರುವಾಗಿದೆ. ರಾಜ್ಯದಲ್ಲಿ ಬರಗಾಲ.ಅನಕ್ಷರತೆ,ಕೋಮುವಾದ, ಭ್ರಷ್ಟಾಚಾರ,ಬಡತನ,ನಿರುದ್ಯೋಗ,ವಲಸೆ,ಹಸಿವು ಇಂತಹ ಅನೇಕ ಸಮಸ್ಯೆಗಳನ್ನು ಚರ್ಚೆ ಮಾಡುವುದನ್ನು ಬಿಟ್ಟು ಜಾತಿ ಜನಗಣತಿಯ ಬಗ್ಗೆ ಆಸಕ್ತಿ ತೋರಿಸುತ್ತಿರುವುದು ಪ್ರಸ್ತುತವೋ-ಅಪ್ರಸ್ತುತವೂ ಎಂಬುದನ್ನು ತಿಳಿಸುವ ಸಣ್ಣ ಪ್ರಯತ್ನವನ್ನು ಈ ಲೇಖನ ಮಾಡುತ್ತಿದೆ.

ಎಚ್ ಕಾಂತರಾಜು ಆಯೋಗ:

ನಮ್ಮ ರಾಜ್ಯ ಸರ್ಕಾರ ಯಾವ ವರ್ಗದವರು ಎಷ್ಟು ಪ್ರಮಾಣದಲ್ಲಿದ್ದಾರೆ ಮತ್ತು ಯಾವ ವರ್ಗ ಆರ್ಥಿಕವಾಗಿ,ರಾಜಕೀಯವಾಗಿ,ಸಾಮಾಜಿಕವಾಗಿ ಹಿಂದುಳಿದಿದ್ದಾರೆ ಎಂಬುದನ್ನು ಗುರುತಿಸಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದಕ್ಕಾಗಿ ಖ್ಯಾತ ನ್ಯಾಯವಾದಿಗಳಾದ ಎಚ್ ಕಾಂತರಾಜು ರವರ ನೇತೃತ್ವದಲ್ಲಿ 2004 ಜೂನ್ 27 ರಂದು ಆಯೋಗವನ್ನು ರಚಿಸಲಾಯಿತು.ಇದು ಸುಮಾರು 5 ವರ್ಷಗಳ ಕಾಲ ಸುದೀರ್ಘವಾದ ಅನೇಕ ಸಮುದಾಯಗಳನ್ನು ಅಧ್ಯಯನ ಮಾಡಿ 2019 ರಲ್ಲಿ ಮೈತ್ರಿ ಸರ್ಕಾರವಿದ್ದಾಗ ತನ್ನ ಅಂತಿಮ ವರದಿಯನ್ನು ಸರಕಾರಕ್ಕೆ ಒಪ್ಪಿಸಿತು.ಆ ಸಂದರ್ಭದಲ್ಲಿ ದೇಶದ ಮೂಲೆ ಮೂಲೆಯಿಂದ ಈ ವರದಿಗೆ ವಿರೋಧ ವ್ಯಕ್ತವಾದಾಗ ಈ ವರದಿಯನ್ನು ಪುನರ್ ಪರಿಶೀಲನೆ ಮಾಡುವುದಕ್ಕಾಗಿ ರಾಜ್ಯ ಸರ್ಕಾರ ಜಯಪ್ರಕಾಶ್ ಹೆಗಡೆ ರವರ ನೇತೃತ್ವದಲ್ಲಿ ಮತ್ತೊಂದು ಸಮಿತಿಯನ್ನು ರಚಿಸಲಾಯಿತು.ಈ ಸಮಿತಿ ಸುಮಾರು ವರ್ಷಗಳ ಕಾಲ ರಾಜ್ಯದ 1932 ಸಮುದಾಯಗಳಿಗೆ 55 ಪ್ರಶ್ನೆಗಳನ್ನು ಕೇಳುವುದರ ಮೂಲಕ ಅವರಿಂದ ಮಾಹಿತಿಯನ್ನು ಸಂಗ್ರಹಿಸಿ ವಿರೋಧದ ನಡುವೆಯೂ 29/02/2024 ಗುರುವಾರ ಹೆಗಡೆಯವರ ನೇತೃತ್ವದ ಸಮಿತಿ ತನ್ನ ಅಂತಿಮ ವರದಿಯನ್ನು ವಿಧಾನಸೌಧದಲ್ಲಿ ಮುಖ್ಯಮಂತ್ರಿಯವರಿಗೆ ಒಪ್ಪಿಸಿತು. ಇಲ್ಲಿಂದ ವಿರೋಧ ಪಕ್ಷದವರು ಇದು ಅವೈಜ್ಞಾನಿಕವಾಗಿದೆ.ರಾಜ್ಯದ ಪ್ರತಿಯೊಂದು ಮನೆ ಮನೆಗೂ ತೆರಳಿ ವರದಿಯನ್ನು ಸಂಗ್ರಹಿಸಿಲ್ಲ ಈ ಆಯೋಗ ಕೆಲವೊಂದಿಷ್ಟು ಸಮುದಾಯಗಳ ಅಭಿಪ್ರಾಯವನ್ನು ಸಂಗ್ರಹಿಸಿಲ್ಲ.ಈ ಜಾತಿ ಜನಗಣತಿ ಸಮಾಜವನ್ನು ಒಡೆಯುವ ಹುನ್ನಾರ ಎಂದು ವಿರೋಧವನ್ನು ವ್ಯಕ್ತಪಡಿಸಿದರೆ ಹಾಗೂ ಆಡಳಿತ ಪಕ್ಷದ ಕೆಲವು ಕೆಳ ವರ್ಗದ ಸದಸ್ಯರು ಇದು ವೈಜ್ಞಾನಿಕವಾದ ವರದಿ ಹಾಗೂ ರಾಜ್ಯದ 224 ಕ್ಷೇತ್ರಗಳಿಗೂ ತೆರಳಿ ಪ್ರತಿಯೊಂದು ಸಮುದಾಯಗಳಿಗೂ 55 ಅಂಶಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುವುದರ ಮೂಲಕ ಮಾಹಿತಿಯನ್ನ ಸಂಗ್ರಹಿಸಿರುವುದರಿಂದ ಇದು ನೈಜ್ಯ ವರದಿಯೆಂದು ಒಪ್ಪಿಕೊಂಡರು.

ಅಂತಿಮವಾಗಿ:
ಓದುಗರೇ ಅಜ್ಜ ಬೆಳೆಸಿದ ಆಲದ ಮರಕ್ಕೆ ಎಷ್ಟು ದಿನ ನಾವು ಹಾಲು ಎರೆಯೋಣ ಹೇಳಿ.ವರ್ಣಾಶ್ರಮ ವ್ಯವಸ್ಥೆಯಿಂದ ಹಿಡಿದು ಕೆಲವು ವರ್ಗಗಳನ್ನು ನಾವು ಮೇಲ್ವರ್ಗಗಳು ಎಂದು ತಿಳಿದು ಅವುಗಳಿಗೆ ರಾಜಕೀಯವಾಗಿ,ಆರ್ಥಿಕವಾಗಿ,ಸಾಮಾಜಿಕವಾಗಿ ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತಾ ಬರುತ್ತಿದ್ದೇವೆ. ಕೆಲವೊಂದಿಷ್ಟು ಕೆಳ ವರ್ಗಗಳು ಯಾವ ಅವಕಾಶಗಳು ಕೂಡ ಸಿಗದೇ ಬಡತನವೆಂಬ ಬಲೆಯಲ್ಲಿ ಸಿಲುಕಿಕೊಂಡಿವೆ.ಆದರೆ ಈ ವರದಿಯಿಂದ ಯಾವ ವರ್ಗದವರು ಎಷ್ಟಿದ್ದಾರೆ ಎಂಬುದನ್ನ ತಿಳಿಯುವುದಕ್ಕಾಗಿ ಸರ್ಕಾರ 187 ಕೋಟಿ ರೂಪಾಯಿ ಹಣವನ್ನು ಖರ್ಚು ಮಾಡಿ ಮಾಡಿಸಿದ ವರದಿಯಲ್ಲಿ ಏನಿದೆ ಎಂಬುದನ್ನು ತಿಳಿಯುವುದಕ್ಕಿಂತ ಮುಂಚಿತವಾಗಿಯೇ ವಿರೋಧಿಸುತ್ತಿರುವುದು ವಿಪರ್ಯಾಸದ ಸಂಗತಿ.

-ಹನುಮೇಶ ಅಗಳಕೇರಿ
ರಾಜ್ಯಶಾಸ್ತ್ರ ಉಪನ್ಯಾಸಕರು,ಶ್ರೀ ಗವಿಸಿದ್ದೇಶ್ವರ ಪದವಿ ಪೂರ್ವ ಕಾಲೇಜು,ಕೊಪ್ಪಳ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ