ವಿರಾಟ ನಗರದಲ್ಲಿ ಅಜ್ಞಾತವಾಸವನ್ನ ಕಳೆದವರು
ತ್ರಿಲೋಕ ಸಂಚಾರಿ ನಾರದರಿಂದ ಸಲಹೆ ಪಡೆದವರು
ವೇಷವದರಸಿ ವಿರಾಟ ರಾಜನ ಬಳಿ ಹೋದವರು
ಎಚ್ಚರಿಕೆಯಿಂದಲೇ ಹೆಜ್ಜೆ ಇಟ್ಟ ಪಾಂಡವರು
ಬ್ರಾಹ್ಮಣ ವೇಷದಲ್ಲಿದ್ದವನು
ಅಡುಗೆಯ ಮನೆಯಲ್ಲಿ ಸೌಟನ್ನು ಹಿಡಿದವನು
ವಿರಾಟರಾಜನ ಮಗಳಿಗೆ ನೃತ್ಯ ಸಂಗೀತವನ್ನು ಕಲಿಸಿದವನು
ದನ ಕರಗಳನ್ನು ಕಾಯುವ ಕೆಲಸದಲ್ಲಿ
ತೊಡಗಿದವನು
ಕುದುರೆಗಳನ್ನು ನೋಡಿಕೊಳ್ಳಲು ಬಯಸಿದವನು
ಅಂತಪುರದಲ್ಲಿ ಸ್ತ್ರೀಯರಿಗೆ ಸೈರಾಂದ್ರಿ ಆಗಿದವಳು
ಕಂಕಭಟ್ಟ ಹೆಸರಿನಿಂದ ಗುರುತಿಸಿಕೊಂಡವನು.
ಪಾಂಡವರ ಆಶ್ರಯದಲ್ಲಿ ಇದ್ದೆವು ಎಂದು ಹೇಳಿದವನು
ಬಲ್ಲವ ಎಂದು ಕರೆಸಿಕೊಂಡವನು
ನಪುಂಸಕನಂತೆ ವೇಷ ಮಾಡಿಕೊಂಡವನು
-ಚಂದ್ರಶೇಖರಚಾರ್ ಎಂ
ಶಿಕ್ಷಕರು ಚಿತ್ರದುರ್ಗ