ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಭೂರಮೆ ಹೈಕುಗಳ ಒಂದು ಅವಲೋಕನ…

ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಯುವ ಸಾಹಿತಿಎಂ.ಕೆ ಶೇಖ್ ರವರು ಕನ್ನಡ ಸಾರಸ್ವತ ಲೋಕದಲ್ಲಿ ಇಪ್ಪತ್ತೆರಡು ವರುಷದಿಂದ ಸಾಹಿತ್ಯ ಕೃಷಿ ಮಾಡಿದ ಕಾಯಕ ಯೋಗಿಯೆಂದರೆ ತಪ್ಪಗಲಾರದು – ಸೃಜನಶೀಲ ಹಾಗೂ ಹೃದಯವಂತ ಕವಿ ಹೃದಯದ ಎಂ ಕೆ ಶೇಖ್ ಅವರು ಕಾವ್ಯ ಕಥೆ ಕಾದಂಬರಿ ಚುಟುಕು ಆಧುನಿಕ ವಚನಗಳ 8 ಕೃತಿ ಬಿಡುಗಡೆ ಮಾಡಿ ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆ ನೀಡಿದ್ದಾರೆ ನೀಡುತ್ತಿದ್ದಾರೆ ಕೂಡಾ ಬಡತನದ ಬೇಗೆಯಲ್ಲಿ ಬೆಂದು ಅರಳಿದ ಕಮಲದ ಹೂ ಜೀವನದಲ್ಲಿ ನಡೆದ ನೂರಾರು ಸಮಸ್ಯೆಗಳನ್ನು ಎದುರಿಸಿ ನಿಲ್ಲುವ ಎಂ.ಕೆ.ಶೇಖ್ ಯವರನ್ನು ನೋಡಿ ಕಲಿಯಬೇಕಾಗಿದೆ ನಿರಂತರ ಪ್ರಯತ್ನ ಸಾಹಿತ್ಯ ಬಗ್ಗೆ ಕಳಕಳಿ ಪ್ರೇಮ ದಿಂದ ನಾನಾ ಪ್ರಕಾರ ಸಾಹಿತ್ಯದಲ್ಲಿ ಹೈಕುಗಳು ಸಹ ಒಂದು…
ಮಕ್ಕಳಿಗೆಂದು
ಮನೆ ಕಟ್ಟಿದ ಈಗ
ವೃದ್ಧ ಶ್ರಮದಿ..
ತಂದೆ ತಾಯಿಗಳು ತಮ್ಮ ಜೀವನವನ್ನು ಮಕ್ಕಳಿಗೋಸ್ಕರ ದುಡಿದು ಶಿಕ್ಷಣ ಮದುವೆ ವಿವಾಹ ಮಾಡುವುದರಲ್ಲಿ ಅರ್ಧ ವಯಸ್ಸು ಮುಗಿದು ಹೋಗುತ್ತದೆ ಮಕ್ಕಳು ತಂದೆ ತಾಯಿ ಕಟ್ಟಿಸಿದ ಮನೆಯಿಂದ ಹೊರಗೆ ಹಾಕುತ್ತಾರೆ ಅಥವಾ ವೃದ್ದಾಶ್ರಮಕ್ಕೆ ಬಿಟ್ಟು ಬರುತ್ತಾರೆ ನಮ್ಮ ದೇಶ ಹಿರಿಯರಿಗೆ ಆಶ್ರಯ ನೀಡಿ ಪ್ರೀತಿ ವಿಶ್ವಾಸ ಮಮತೆ ತುಂಬಿ ತುಳುಕುತ್ತಿರುವ ಹಿಂದಿನ ಕಾಲದಲ್ಲಿ ನೆಮ್ಮದ್ದಿಯ ತಾಣವಾಗಿತ್ತು ಆದರೆ ದಿನಗಳು ಕಳೆದಂತೆ ತಂದೆ ತಾಯಿಯನ್ನು ಬೀದಿ ಪಾಲು ಮಾಡುವ ಮಕ್ಕಳು
ಹೆಚ್ಚಾಗಿರುವುದು ದೇಶದ ದುರಂತ ಯೆಂದರೆ ತಪ್ಪಗಲಾರದು.
ಖಾಸಗಿ ಶಾಲೆ
ವ್ಯವಹಾರದ ಮಾತೇ
ಕ್ಯಾಷಿಗೆ ಶಾಲೆ…
ಖಾಸಗಿ ಶಾಲೆಗಳು ಇಂದು ದೇಶ ಕಟ್ಟುವ ಕೆಲಸ ಮಾಡದೆ ಹಣ ಗಳಿಸುವ ಬಂಡವಾಳ ಶಾಹಿಗಳ ಪಾಲಿಗೆ ಕಲ್ಪವೃಕ್ಷವೆಂದರೆ ತಪ್ಪಗಲಾರದು ಸರ್ಕಾರಿ ಶಾಲೆಗಳ ಕ್ಕಿಂತ ಖಾಸಗಿ ಶಾಲೆಗಳ ಅರ್ಭಟ ಹೆಚ್ಚಾಗಿದೆ ಕಡಿವಾಣ ಹಾಕಬೇಕಾದ ಶಿಕ್ಷಣ ಇಲಾಖೆ ನಿದ್ದೆಯಲ್ಲಿ ಜಾರಿದೆ. ಮಕ್ಕಳಿಗೆ ಸಾರಿಗೆ ಬಸ್ ಜೊತೆ ಸೌಲಭ್ಯ ನೀಡುತ್ತಿದೆ ಪಾಲಕರಲ್ಲಿ ಖಾಸಗಿ ಶಾಲೆಗಳ ಮೇಲೆ ಪ್ರೀತಿ ಸಹ ಹೆಚ್ಚಾಗಿರುವುದು ಅಷ್ಟೇ ಸತ್ಯ ಲಕ್ಷಾಂತರ ರೂಪಾಯಿ ದಾಖಲಾತಿಗೆ ಕೊಡಬೇಕು ಶಿಕ್ಷಣ ನೀಡಬೇಕಾದ ಖಾಸಗಿ ಶಾಲೆಗಳು ಹಣಗಳಿಸುವ ಕಾಯಕವಾಗಿದೆ.
ಕರುಣೆ ಇಲ್ಲ
ರಕ್ತ ರಕ್ತದ ಮಧ್ಯೆ
ಸಹೋದರರೇ.
ಹುಟ್ಟುವಾಗ ಅಣ್ಣ ತಮ್ಮಂದಿರು ಬೆಳೆಯುವಾಗ ದಾಯಾದಿಗಳು ಮಾತು ಇಂದಿನ ವಾತಾವರಣಕ್ಕೆ ಸೂಕ್ತವಾದದು ಸಹೋದರರ ಮಧ್ಯೆ ಕ್ಷಲಕ ಕಾರಣಕ್ಕೆ ಕೊಲೆಯಾಗುತ್ತಿರುವುದು ನಿಜಕ್ಕೂ ನಾಚಿಕೆಗೇಡು ಮಾನವೀಯತೆ ವಿಶ್ವಾಸ ದಯೆ ಕರುಣೆ ಸೌಹಾರ್ದತೆ ಮಾಯವಾಗಿ ಮೋಸ ವಂಚನೆ ಕೊಲೆ ಅತ್ಯಾಚಾರಗಳಿಂದ ತುಂಬಿ ಹೋಗಿರುವ ಪಾತಕಿ ಲೋಕದಲ್ಲಿ ಏನು ನಿರೀಕ್ಷೆ ಮಾಡಲು ಸಾಧ್ಯ?

ಗ್ರಾಮದಲ್ಲಿ ಕೋಮು ದಳ್ಳುರಿ ದ್ವೇಷ ರಾಜಕಾರಣ
ಇಂದು ದೇಶದಲ್ಲಿ ಧರ್ಮ ಧರ್ಮಗಳ ನಡುವೆ ಜಾತಿಗಳ ನಡುವೆ ಜಗಳ ಹಚ್ಚಿ ರಾಜಕೀಯ ಲಾಭ ಗೋಸ್ಕರ ಅಮಾಯಕರ ಬಲಿದಾನ ಮೇಲೆ ರಾಜಕೀಯ ಸರಾಗವಾಗಿ ನಡೆಯುವುದು ಅಭಿವೃದ್ಧಿ ಕೆಲಸ ಮಾಡದೆ ಮುಗ್ಧ ಜನರನ್ನು ರಾಜಕೀಯ ದಾಳವಾಗಿ ಮಾಡಿಕೊಂಡಿರುವುದು ನಾಚಿಕೆಗೇಡು…
ಮಳೆ ಓಡಿದೆ
ಮರಗಳು ಇಲ್ಲದೆ
ಮುನಿಸಿಕೊಂಡಿದೆ..
ಕಳೆದ ಐದಾರು ವರ್ಷಗಳಿಂದ ಮಳೆ ಪ್ರಮಾಣ ಕಡಿಮೆಯಾಗಿದೆ ಮಿತಿ ಮೀರಿದ ಕೈಗಾರಿಕೆಗಳು ಅರಣ್ಯ ನಾಶದಿಂದ ಇಂದು ನೀರಿಗೆ ಬರ ಬಂದಿದೆ ಸರ್ಕಾರದ ಅವಿವೇಕಿ ಕಾಯಿದೆಗಳಿಂದ ಅರಣ್ಯ ಪ್ರದೇಶ ಇಂದು ಬಯಲು ಪ್ರದೇಶವಾಗಿದೆ ಇದಕ್ಕೆ ಕಾರಣ ಯಾರು ? ಸರ್ಕಾರ ಅಥವಾ ಮನುಷ್ಯ ರಾ? ಎಂಬ ಪ್ರಶ್ನೆ ಸದಾ ಕಾಡುತ್ತಿದೆ ಇದೇ ರೀತಿ ಮುಂದುವರೆದರೆ ನೀರಿಗೆ ಹಾಹಾಕಾರ ಆಗುವುದಲ್ಲಿ ಸಂಶಯವಿಲ್ಲ..
ಕವಿ ಕುವೆಂಪು
ಕವಿಶೈಲದ ರಾಜ
ಕಾವ್ಯ ಮಹರ್ಷಿ …
ನಾಡು ಕಂಡ ಜನ ಮನ್ನಣೆ ಪಡೆದ ರಾಷ್ಟ್ರಕವಿ ಕುವೆಂಪು ಯವರು ಕನ್ನಡ ಸಾಹಿತ್ಯ ಲೋಕಕ್ಕೆ ಅನುಪಮ ಸೇವೆ ಸಲ್ಲಿಸಿರುವ ಕುವೆಂಪು ಯವರು ಕನ್ನಡ ಸಾಹಿತ್ಯವನ್ನು ವಿಶ್ವಕ್ಕೆ ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ ಕುವೆಂಪು ಇಂದಿಗೂ ಕನ್ನಡಿಗರ ಹೃದಯದಲ್ಲಿ ಅಜರಾಮರ…
ಎಂ.ಕೆ ಶೇಖ್ ಯವರು ಪ್ರತಿಯೊಂದು ಹೈಕುಗಳು ಇಂದಿನ ವಾತಾವರಣಕ್ಕೆ ಪೂರಕ ಯೆಂದರೆ
ತಪ್ಪಗಲಾರದು ಅಭಿನಂದನೆಗಳು ಸರ್ ತಮ್ಮ ಸಾಹಿತ್ಯ ಯಾತ್ರೆ: ಹೀಗೆ ನಿರಂತರ ಸಾಗಲಿ …..

ಲೇಖಕರು ದಯಾನಂದ ಪಾಟೀಲ ಅಧ್ಯಕ್ಷರು ಭಾರತೀಯ ಕನ್ನಡ ಸಾಹಿತ್ಯ ಬಳಗ ಮಹಾರಾಷ್ಟ್ರ…

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ