ಮೈಸೂರು:ಮಹಾಶಿವರಾತ್ರಿ ಪ್ರಯುಕ್ತವಾಗಿ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದು ಶಿವನ ಧ್ಯಾನದಲ್ಲಿ ಕುಳಿತು ಓಂ ನಮಃ ಶಿವಾಯ ಅಂತ ಹೇಳಿ ಪ್ರಾರ್ಥನೆ ಮಾಡಿದರು.ಹಿಂದೂ ಧರ್ಮದಲ್ಲಿ ಶಿವರಾತ್ರಿಗೆ ಅದರದ್ದೇ ಆದ ಮಹತ್ವವಿದೆ.ಶಿವನು ಪಾರ್ವತಿ ದೇವಿಯನು ವಿವಾಹವಾದ ದಿನವಾಗಿ ಶಿವರಾತ್ರಿ ಎಂದು ಪರಿಗಣಿಸಲಾಗುತ್ತದೆ.ಕೈಲಾಸನಾಥನು ಈ ದಿನದಂದು ಭೂಮಿಗೆ ಇಳಿದು ಸಕಲ ಇಷ್ಟಾರ್ಥವನ್ನು ನೆರವೇವೇರಿಸುತ್ತಾರೆ ಎಂಬ ನಂಬಿಕೆ ಹಿಂದೂ ಧರ್ಮದಲ್ಲಿ ಉಳಿದಿದೆ.ಶಿವರಾತ್ರಿಗೆ ಹೆಚ್ಚು ಪ್ರಾಮುಖ್ಯತೆ ಇರುವುದು ಅಂದು ಆಚರಿಸುವ ಉಪವಾಸದಲ್ಲಿ.
ವರದಿ-ಪ್ರದೀಪ್.ಜೆ.