ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿ ಸರಕಾರಿ ಪ್ರೌಢ ಶಾಲೆಯಲ್ಲಿ 2007ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮವನ್ನು ಶ್ರೀ ಶ್ರೀ ಶ್ರೀ ದಾಸೋಹ ರತ್ನ ಬ್ರಹ್ಮಾನಂದ ಸ್ವಾಮಿಗಳು ದುರ್ಗಾದೇವಿ ದೇವಸ್ಥಾನ ಆನೆಗುಂದಿ ಇವರುಗಳ ದಿವ್ಯ ಸಾನಿದ್ಯದಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರವನ್ನು ಉದ್ದೇಶಿಸಿ ಶ್ರೀಗಳು ಮಾತನಾಡಿ ಈ ರೀತಿಯ ಕಾರ್ಯಕ್ರಮಗಳು ಶಾಲೆಯ ಅಭಿವೃದ್ದಿಗೆ ಮಾದರಿ ಶಿಕ್ಷಣವನ್ನು ಬೆಳೆಸುವ ಕಾರ್ಯಕ್ಕೆ ಸ್ಪೂರ್ತಿ ತುಂಬುವಂತ ಕಾರ್ಯಗಳಾಗಿವೆ ಸದಾ ಶಾಲೆಯನ್ನು ಶಿಕ್ಷಕ ವೃಂದವನ್ನು ಅಭಿನಂದಿಸುವ ಕಾರ್ಯಕ್ರಮಗಳು ಮುಂದಿನ ಯುವ ಪೀಳಿಗೆಗಳಿಗೆ ಮಾದರಿಯಾಗುತ್ತವೆ ಎಂದರು.
ಕಾರ್ಯಕ್ರವನ್ನು ಉದ್ದೇಶಿಸಿ ವೆಂಕಟೇಶ ಗಂಗಾವತಿ ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾತನಾಡಿ ನಮ್ಮ ಕೈಯಲ್ಲಿ ಕಲಿತ ಇದೆ ಶಾಲೆಯಲ್ಲಿ ಓದಿ ದೊಡ್ಡವರಾಗಿ ಶಾಲೆಯಲ್ಲಿ ಕಳೆದ ನೆನಪುಗಳನ್ನು ಮೆಲುಕು ಹಾಕುತ್ತಾ ಈ ಒಂದು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು ಖುಷಿ ಆದರೆ ಈ ಶಾಲೆಯಲ್ಲಿ ಕಲಿತು ಉನ್ನತ ಹುದ್ದೆಯಲ್ಲಿ ಇದ್ದು ಕಲಿತ ಶಾಲೆಯನ್ನು ಹಾಗೂ ಶಿಕ್ಷಕರನ್ನು ಗೌರವಿಸುವ ನೆನಪಿಸುವ ಈ ಕಾರ್ಯವು ಶಿಕ್ಷಕರ ಕಾರ್ಯಕ್ಕೆ ಸಾರ್ಥಕತೆ ಮೆರೆಗೂ ತಂದುಕೊಟ್ಟಿತು ಎಂದರು.
ವಿಜಯ ಕುಮಾರ ಸರ್ ಅವರು ಮಾತನಾಡಿ ಈ ಗುರುವಂದನಾ ಕಾರ್ಯಕ್ರಮ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಿಂದ ಹಳೆಯ ನೆನಪುಗಳನ್ನು ಮತ್ತೆ ಮರುಕಳಿಸಿದಂತಾಯಿತು ಎಂದರು.
ಶಾಲೆಯಲ್ಲಿ ಕಲಿತಿರುವ ಸುಕ್ಷಣಗಳನ್ನು ಮೆಲಕು ಹಾಕುತ್ತಾ ವಿದ್ಯಾರ್ಥಿಗಳು ಜೀವನದಲ್ಲಿ ಶಿಕ್ಷಕರೊಂದಿಗೆ ಶಾಲೆಯಲ್ಲಿ ನಡೆದ ಸಿಹಿ ಕಹಿ ವಿಷಯಗಳನ್ನು ಮುಕ್ತ ಮನಸ್ಸಿನಿಂದ ವಿದ್ಯಾರ್ಥಿಗಳು ತಮ್ಮೆಲ್ಲಾ ನೆನಪುಗಳನ್ನು ಕಾರ್ಯಕ್ರಮದಲ್ಲಿ ಹಂಚಿಕೊಳ್ಳುವ ಮೂಲಕ ಶಾಲೆಯ ನೆನಪುಗಳನ್ನು ಮರುಕಳಿಸಿದರು.
ಕೊಡುಗೆ:ತಾವು ಕಲಿತ ಸರಕಾರಿ ಪ್ರೌಢ ಶಾಲೆಗೆ ಹೊಸ ಮಾದರಿಯ ತಂತ್ರಜ್ಞಾನ ಆಧಾರಿತ ಸಮಯಕ್ಕೆ ಸರಿಯಾಗಿ ಬೆಲ್ ಮಾಡುವ ಸಾಧನ ವಿತರಣೆ ಮಾಡಲಾಯಿತು.
ಸಮಾಜ ಮುಖಿಕಾರ್ಯವಾದ ರಕ್ತದಾನ ಶಿಬಿರವನ್ನು ಗಂಗಾವತಿಯ ಗೋಪಿ ರಕ್ತಭಂಡಾರ ನಿಧಿಗೆ ಹಳೆ ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿ ಮತ್ತೊಂದು ಜೀವಗಳಿಗೆ ಸಹಾಯಕರಾಗಿ ಮಾದರಿಯಾದರು.
ಕಾರ್ಯಕ್ರಮದ ನಿರೂಪಣೆಯನ್ನು ಹಳೆಯ ವಿದ್ಯಾರ್ಥಿಗಳಾದ ಆಂಜನೇಯ ಹೆಚ್.ಹಾಗೂ ಶಕುಂತಲಾ ಅವರು ಅಚ್ಚು ಕಟ್ಟಾಗಿ ನಡೆಸಿಕೊಟ್ಟರು, ಕಾರ್ಯಕ್ರಮದ ನಂತರ ಶುಚಿ-ರುಚಿಯಾದ ಭೋಜನವನ್ನು ಎಲ್ಲರೂ ಒಟ್ಟಾಗಿ ಸವಿಯುವ ಮೂಲಕ ಸಂಭ್ರಮಾಚರಣೆಯಿಂದ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯ ಕುಮಾರ ಅವರು ಹಾಗೂ ಮುಖ್ಯ ಅಥಿತಿಗಳಾಗಿ ಬ್ರಹ್ಮಾನಂದ ಸ್ವಾಮಿಗಳು,ಗಂಗಾವತಿ ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವೆಂಕಟೇಶ
ವಹಿಸಿಕೊಂಡಿದ್ದರು.
ಅತಿಥಿಗಳಾಗಿ
ವೀರಾರೆಡ್ಡಿ,ತಿಪ್ಪಯ್ಯ,ವಿಜಯಕುಮಾರ , ಶಾಲೆಯ ಮುಖ್ಯೋಪಾದ್ಯರಾದ ವಿಜಯಕುಮಾರ ಪಾಟೀಲ್ ಹಾಗೂ ಪ್ರಭಯ್ಯ ಹಿರೇಮಠ,ಮಾರೆಪ್ಪ,ವೇಣುಗೋಪಾಲ,ಶ್ರೀಮತಿ ಎ.ಕೆ.ಶ್ರೀಲತಾ,ಸೋಪೀಯಾ,ಜಾನವಿ,ಸಾಧನಾ ಶಾಲೆಯ ಶಿಕ್ಷಕ ವೃಂದ ಮಹಾದೇವಿ ಗ್ರಾಂ.ಪಂ. ಆನೇಗುಂದಿ ಎಸ್.ಡಿ.ಎಂ.ಸಿ ಅಧ್ಯಕ್ಷೆ ಸುಜಾತ ಹಾಗೂ ಶಾಲೆಯ ಹಳೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ-ಹನುಮೇಶ ಭಾವಿಕಟ್ಟಿ