ಹನೂರು:ತಾಲೂಕಿನಲ್ಲಿ ಕಳೆದ ಎರಡು ದಶಕಗಳಿಂದ ಡಾಂಬರನ್ನು ಕಾಣದೆ ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ವಾಹನ ಸವಾರರಿಗೆ ಕಾಡುತ್ತಿದ್ದ ರಸ್ತೆಗೆ ಲೋಕೋಪಯೋಗಿ ಇಲಾಖೆಯ ಅನುದಾನದ ಅಡಿಯಲ್ಲಿ 25 ಕೋಟಿ ವೆಚ್ಚದಲ್ಲಿ ರಾಮಪುರದಿಂದ ಗರಿಕೆಕಂಡಿ ತನಕ 14 ಕಿಮೀ ರಸ್ತೆಗೆ ಕ್ಷೆತ್ರದ ಶಾಸಕ ಎಂ ಆರ್ ಮಂಜುನಾಥ್ ಗುದ್ದಲಿ ಪೂಜೆ ನೆರವೇರಿಸಿದರು.
ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಮಂಜುನಾಥ್ ಇಂದಿನ ರಸ್ತೆ ಕಾಮಗಾರಿ ನಮ್ಮ ಕ್ಷೇತ್ರದ ಬದಲಾವಣೆ ತರುವಂತದಾಗಿದೆ ಕಳೆದ 15-20 ವರ್ಷದಿಂದ ಅಭಿವೃದ್ಧಿ ಕಾಣದೆ ವಾಹನ ಸವಾರರಿಗೆ ಈ ಭಾಗದ ಸಾರ್ವಜನಿಕರಿಗೆ ಹಲವಾರು ಅಪಘಾತಗಳಾಗಿ ಸಂಕಷ್ಟ ತಂದಿದ್ದ ರಸ್ತೆಗೆ ಇವತ್ತು ಗುದ್ದಲಿ ಪೂಜೆ ನಡೆಸಿರುವುದು ನನಗೆ ತುಂಬಾ ಸಂತೋಷವಾಗಿದೆ ಈ ರಸ್ತೆ ವಿಚಾರವಾಗಿ ಅನುದಾನ ನೀಡಲು ಲೋಕೋಪಯೋಗಿ ಇಲಾಖೆ ಸಚಿವರಾದ ಜಾರಕಿಹೊಳಿ ಅವರಿಗೆ ಹೇಳಿಕೊಂಡಾಗ ಸ್ಪಂದಿಸಿ ಅನುಮೋದನೆ ನೀಡಿ ತುಂಬಾ ಉಪಕಾರ ಮಾಡಿದ್ದಾರೆ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು. ಹನೂರಿನಿಂದ ರಾಮಪುರ-ಗರಿಕೆಕಂಡಿ ಮಾರ್ಗವಾಗಿ ತಮಿಳುನಾಡು ಸಂಪರ್ಕ ನೀಡುವ ರಸ್ತೆ ಇದಾಗಿದ್ದು.ರಾಷ್ಟ್ರೀಯ ಹೆದ್ದಾರಿಯಾಗಿ ಮಾಡಲು ಸರಕಾರಕ್ಕೆ ಒತ್ತಾಯ ಮಾಡುವ ಕೆಲಸ ಮಾಡುತ್ತಿರುವುದಾಗಿ ತಿಳಿಸಿ. ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಗೆ ಕಾಮಗಾರಿಯು ಉತ್ತಮ ಗುಣಮಟ್ಟದಿಂದ ಕೂಡಿರಲಿ ಇನ್ನೇನು ವಾರದೊಳಗೆ ಟೆಂಡರ್ ಆಗಲಿದೆ ಮಾರ್ಚ್ 12 ರಿಂದ ಲೋಕಸಭಾ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿ ಇರುವ ಕಾರಣ ಈ ರಸ್ತೆ ಕಾಮಗಾರಿ ವಿಳಂಬ ಆಗದಿರಲಿ ಎಂದು ಭೂಮಿ ಪೂಜೆ ಮಾಡಿದ್ದೇವೆ. ಇನ್ನು ನಮ್ಮ ಕ್ಷೆತ್ರದಲ್ಲಿ ವಿವಿದೆಡೆ ಗುಂಡಿ ಬಿದ್ದಿರುವ ರಸ್ತೆಗಳು ಆದಷ್ಟು ಬೇಗನೆ ಅಭಿವೃದ್ಧಿ ಆಗುತ್ತದೆ ನಿಮ್ಮೆಲ್ಲರ ಸಹಕಾರದ ಜೊತೆ ನಾನು ಆ ಕೆಲಸವನ್ನು ನಾನು ಮಾಡುತ್ತೇನೆ ಕ್ಷೆತ್ರದ ಅಭಿವೃದ್ಧಿಯೇ ನನ್ನ ಗುರಿ ಕ್ಷೆತ್ರದ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾರ್ಟಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಸಂಧ್ಯಾ,ಎಇಇ ಚಿನ್ನಣ್ಣ,ಸುತ್ತ ಮುತ್ತಲ ಗ್ರಾಮದ ಜೆಡಿಎಸ್ ಮುಖಂಡರುಗಳಾದ,ಕ್ಯಾಂಟ್ರಾಕ್ಟರ್ ಮಹೇಶ್ ಶ್ರೀನಾ,ಮಹದೇವ ಪ್ರಸಾದ್,ಕೇಬಲ್ ರಾಜು, ಪ್ರಸಾದ್ ಮಂಜೇಶ್,ಶಿವಪ್ಪ,ಮುನಿಯಪ್ಪ,ಹುಚ್ಚಯ್ಯ,ಶಾಗ್ಯ ಬಾಬು,ಮಮಂಜಿ,ಮೈಕಲ್,ಗೋವಿಂದೆ ಗೌಡ,ಎಸ್ ಆರ್ ಮಹಾದೇವ,ಇನ್ನು ಮುಂತಾದವರು ಇದ್ದರು.
ವರದಿ:ಉಸ್ಮಾನ್ ಖಾನ್