ಬೀದರ್:ಭಾರತ ದೇಶದ ಹೆಮ್ಮೆಯ ಗಡಿ ಭದ್ರತಾ ಪಡೆಗೆ ವೈದ್ಯಾಧಿಕಾರಿಯಾಗಿ (Asst Commandant) ನೇಮಕಗೊಂಡು ದೇಶದ ಸೇವೆಗಾಗಿ ತಂದೆಯ ಹಾದಿಯನ್ನೇ ಹಿಡಿದ ಬೀದರ ಜಿಲ್ಲಾ ಪೊಲೀಸ್ ಪೆದೆಯಾಗಿರುವ ಶ್ರೀ ರಾಜಪ್ಪರವರ ಮಗಳಾದ ಕು.ಡಾ: ದಿವ್ಯಾ ಅವರಿಗೆ ಅಭಿನಂದನೆಗಳು.
ಮಹಿಳೆ ಮತ್ತು ಪುರುಷರು ಸಮಾಜದಲ್ಲಿ ಸಮಾನರು,ಎಂಬಂತೆ ಬೀದರ ಜಿಲ್ಲಾ ಪೊಲೀಸ್ ಜನವಾಡಾ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ರಾಜಪ್ಪಾ ಇವರು Army Medical Corps ದಲ್ಲಿ ದೇಶದ ರಕ್ಷಣೆಯಲ್ಲಿ 1986 ರಿಂದ 2003 ರ ವರೆಗೆ ಸೇವೆ ಸಲ್ಲಿಸಿ ಅಸ್ಸಾಂ ತೇಜಪೂರದಿಂದ 2003 ರಲ್ಲಿ ನಾಯಕ ಹುದ್ದೆಯಿಂದ ನಿವೃತ್ತಿ ಹೊಂದಿ ಬೀದರ ಜಿಲ್ಲಾ ಪೊಲೀಸ್ ನೇಮಕಾತಿಯಲ್ಲಿ 2007 ನೇ ಸಾಲಿನಲ್ಲಿ ಸಿ.ಪಿ.ಸಿ ಹುದ್ದೆಗೆ ನೇಮಕಗೊಂಡು ಜನವಾಡಾ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ರಾಜಪ್ಪಾ ರವರ ಹಿರಿಯ ಮಗಳಾದ ಕು.ಡಾ: ದಿವ್ಯಾ ರವರು ಬೀದರಿನ ಬ್ರೀಮ್ಸ್ ದಿಂದ 2022 ರಲ್ಲಿ ತಮ್ಮ ವೈದ್ಯಕೀಯ ಶಿಕ್ಷಣ ಮುಗಿಸಿಕೊಂಡು 2023 ರಲ್ಲಿ ಭಾರತೀಯ ಭದ್ರತಾ ಪಡೆಯಲ್ಲಿ ವೈದ್ಯಾಧಿಕಾರಿಯಾಗಿ (Assistant commandant) ಹುದ್ದೆಗೆ ನೇಮಕಗೊಂಡು ಇಂದು ಮಧ್ಯಪ್ರದೇಶದ ಟೆಕ್ಕನಪುರ್ ನ ತರಬೇತಿ ಶಾಲೆಯಿಂದ ಪಥ ನಿರ್ಗಮನ ನಡೆದಿದ್ದು, ಅಸಾಂ ರಾಜ್ಯದ ಬಿಎಸ್ಎಫ್ ನ 16 ನೇ ಬಟಾಲಿಯನ್ ನಲ್ಲಿ ಮಗಳು ವೈದ್ಯಾಧಿಕಾರಿಯಾಗಿ ನೇಮಕಗೊಂಡಿರುತ್ತಾರೆ.ದೇಶದ ಸೇವೆಗಾಗಿ ತಂದೆಯ ಹೆಜ್ಜೆಯನ್ನೆ ಅನುಸರಿಸಿದ ಮಗಳ ಈ ಸಾಧನೆ ಬೀದರ್ ಜಿಲ್ಲೆಯ ಮಕ್ಕಳಿಗೆ ಪ್ರೇರಣೆಯಾಗಲಿ ಎಂದು ಕುಟುಂಬಸ್ತರೆಲ್ಲರು ಸಂತಸ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಕು.ಡಾ.ದಿವ್ಯಾ ಅವರ ತಾಯಿ ಪ್ರಭಾವತಿ ಸಹೋದರಿಯರಾದ ಪ್ರಿಯಾ,ಭವ್ಯಾ ಸಹೋದರನಾದ ದರ್ಶನ ಮತ್ತು ಹಿರಿಯರು ಉಪಸ್ಥಿತರಿದ್ದರು.
ವರದಿ:ಸಾಗರ್ ಪಡಸಲೆ