ಚಾಮರಾಜನಗರ:ಬಂಡೀಪುರ ಅರಣ್ಯದಲ್ಲಿ ಈಗ ಬೇಸಿಗೆ ಇರುವುದರಿಂದ ಪ್ರಾಣಿ ಪಕ್ಷಿಗಳಿಗೆ ನೀರು ಕುಡಿಯಲು ತುಂಬಾ ಕಷ್ಟವಾಗಿದೆ.ಆದುದರಿಂದ ಅರಣ್ಯ ಅಧಿಕಾರಿಗಳು ಇನ್ನೂ ಸ್ವಲ್ಪ ನೀರಿನ ಸೌಲಭ್ಯ ಹೆಚ್ಚಿಸಲು ಪ್ರಯತ್ನ ಮಾಡಬೇಕು.ನೀರು ಇರುವ ಸಮಯದಲ್ಲಿ ಪ್ರಾಣಿ-ಪಕ್ಷಿಗಳು ಇನ್ನೂ ಜಾಸ್ತಿ ಇರುತ್ತದೆ.ಹುಲಿ ಕೂಡ ಬೇಸಿಗೆ ಇರುವುದರಿಂದ ಕಾಡಿನ ಮಧ್ಯದಲ್ಲಿ ಅಂದರೆ ಪೊದೆ ಮಧ್ಯದಲ್ಲಿ ಇರುತ್ತದೆ. ಆದುದರಿಂದ ಹುಲಿ ಕಣ್ಣಿಗೆ ಬಿದ್ದಿಲ್ಲ.
ಬಂಡೀಪುರ ರಾಷ್ಟ್ರೀಯ ಉದ್ಯಾನವನ ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿ ಇರುವ ಒಂದು ರಾಷ್ಟ್ರೀಯ ಉದ್ಯಾನವನ.ಹುಲಿ,ಆನೆ,ಜಿಂಕೆ,ಕಾಡೆಮ್ಮೆ ಇತ್ಯಾದಿ ಪ್ರಾಣಿಗಳು ಇಲ್ಲಿ ವಾಸಿಸುತ್ತವೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನ 1974 ರಲ್ಲಿ ಸ್ಥಾಪನೆಯಾಗಿದ್ದು.ಇದು ಹಿಂದೊಮ್ಮೆ ಮೈಸೂರು ಸಾಮ್ರಾಜದ ಮಹಾರಾಜರ ಖಾಸಗಿ ಬೇಟೆಗೆ ಮೀಸಲಾಗಿತ್ತು.ಆದರೆ ಈಗ ಹುಲಿ ಸಂರಕ್ಷಣಾ ಪ್ರದೇಶವಾಗಿ ಮಾರ್ಪಾಡಾಗಿ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ.
ವರದಿ ಜೆ ಪ್ರದೀಪ್,ಮೈಸೂರು