ಅವಳಿ ನಗರ ಎಂದು ಖ್ಯಾತವಾಗಿರುವ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ನಗರಗಳಲ್ಲಿ ಭಾರೀ ಬಿಸಿಲಿನ ತಾಪಮಾನ ದಿನೇ ದಿನೇ ಹೆಚ್ಚಾಗುತ್ತಿದ್ದು , ಸೂರ್ಯ ಜನರ ತಲೆ ಸುಡುವುದರ ಜೊತೆಗೆ ಮೈ ಬೆವರು ಕೂಡಾ ಇಳಿಸುತ್ತಿದ್ದಾನೆ ಬೇಸಿಗೆಯ ಬಿಸಿ ಉಷ್ಣಾಂಶ ಭಾರಿ ಹೆಚ್ಚಳವಾಗಿರುವ ಹಿನ್ನೆಲೆ ಬಿಸಿಲಿನ ದಾಹ ನೀಗಿಸಿ ಕೊಳ್ಳಲು ತಂಪು ಪಾನಿ ಹಾಗೂ ಎಳೆನೀರಿಗೆ ಮೊರೆ ಹೋಗುತ್ತಿದ್ದಾರೆ ಆದ್ದರಿಂದ ತಂಪು ಪಾನಿ ಹಾಗೂ ಎಳನೀರಿನ ಬೇಡಿಕೆ ಹೆಚ್ಚಾಗುತ್ತಿದೆ.
ಜಮಖಂಡಿ ರಬಕವಿ ಬನಹಟ್ಟಿ ತೇರದಾಳ್ ಈ ನಗರಗಳ ಕಲ್ಲಿನ ಗುಡ್ ಗಾಡು ಇರುವಂತಹ ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಬಿಸಿಲು ಜಾಸ್ತಿ ಅಂತಾನೆ ಹೇಳಬಹುದು ಬೆಸುಗೆ ಕಾಲ ಬಂತಂದರೆ ಸಾಕು ಎಳೆ ನೀರಿನ ಕಡೆ ಜನರು ಮೊರೆ ಹೋಗುತ್ತಿದ್ದಾರೆ.
ಭಾರಿ ಬಿಸಿಲಿನ ತಾಪಮಾನದ ನಡುವೆ ರಂಜಾನ್ ಉಪವಾಸ
ಇಸ್ಲಾಮಿನ ಪವಿತ್ರ ತಿಂಗಳು ರಂಜಾನ್,ರಂಜಾನ್ ತಿಂಗಳು ಭಾರಿ ಬಿಸಿಲಿನ ಬೆಸುಗೆ ಕಾಲದಲ್ಲಿ ಕಾಲದಲ್ಲಿ
ಉಪವಾಸ ರೋಜಾ ಆಚರಣೆ ಮಾಡುತ್ತಿದ್ದಾರೆ.ಈ ರೋಜಾ ಉಪವಾಸ ಆಚರಣೆಯನ್ನು ಕಂಡು ಹಿಂದೂ ಬಾಂಧವರು ಅಬ್ಬಬ್ಬಾ ನೀವುಗಳು ಭಾರಿ ಗಟ್ಟಿ ಎಂದು ಆಶ್ಚರ್ಯ ಪಡುತ್ತಿದ್ದಾರೆ.
ತಾಪಮಾನಕ್ಕೆ ಹೆದರಿ ಮನೆಯಿಂದ ಹೊರಗೆ ಹೋಗಲು ಹಿಂದೆಟು
ರಬಕವಿ ಬನಹಟ್ಟಿ ಅವಳಿ ನಗರಗಳ ಕಲ್ಲಿನ ಗುಡ್ಡ ಗಾಡು ಪ್ರದೇಶವಾಗಿರುವುದರಿಂದ ಇಲ್ಲಿನ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಗೆ ದಾಟಿದೆ.ಕಾರಣ ಜನರು ಬಿಸಿಲಿಗೆ ಹೆದರಿ ಮನೆಯಿಂದ ಆಚೆಗೆ ಹೋಗಲು ಹೆದರುತ್ತಿದ್ದಾರೆ ಮಧ್ಯಾಹ್ನ 1 ಗಂಟೆ ನಂತರ ರಸ್ತೆಗಳು ಹಾಗೂ ಮಾರ್ಕೆಟ್ಗಳು ಬಿಕೋ ಎನ್ನುತ್ತಿರುತ್ತವೆ.ಹೆಚ್ಚುತ್ತಿರುವ ಬಿಸಿಲಿನ ಕಾವು ಜೊತೆಗೆ ನಡುವೆ ಲೋಕಸಭಾ ಚುನಾವಣೆಯ ಭಾರಿ ಕಾವು ಏರತೊಡಗಿದೆ.
ವರದಿ:ಮಹಿಬೂಬ್ ಎಂ ಬಾರಿಗಡ್ಡಿ