ಸೊರಬ:ಗುತ್ಯಮ್ಮ ನಿನ್ನಾಲಯಕ್ಕೆ ಉದೋ… ಉದೋ…ಎಂಬ ಸಾವಿರಾರು ಭಕ್ತಾದಿಗಳ ಉದ್ಘೋಷದೊಂದಿಗೆ ಇತಿಹಾಸ ಹಾಗೂ ಪುರಾಣ ಪ್ರಸಿದ್ದ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಿಯ ಬ್ರಹ್ಮರಥೋತ್ಸವ ಸೋಮವಾರ ವಿಜೃಂಭಣೆಯಿoದ ಜರುಗಿತು.
ಸಾಗರ ಉಪವಿಭಾಗಾಧಿಕಾರಿ ಆರ್.ಯತೀಶ್ ರಥೋತ್ಸವಕ್ಕೆ ಚಾಲನೆ ನೀಡಿ,ದೇವಿಯು ಉತ್ತಮ ಮಳೆ ಬೆಳೆ ಕೊಟ್ಟು ನಾಡಿನ ಸಮಸ್ತ ಜನತೆಯ ಆರೋಗ್ಯ ಕಾಪಾಡಲಿ ಎಂದು ಸರ್ಕಾರದ ಪರವಾಗಿ ದೇವಿಯನ್ನು ಬೇಡಿಕೊಂಡಿರುವುದಾಗಿ ತಿಳಿಸಿದರು.
ಶ್ರೀ ರೇಣುಕಾಂಬ ದೇವಸ್ಥಾನದ ಗರ್ಭಗುಡಿ,ರಥಬೀದಿ ಸೇರಿದಂತೆ ಕ್ಷೇತ್ರದ ಎಲ್ಲಡೆ ಭಕ್ತರ ದಂಡು ನೆರದಿತ್ತು. ದೇವಿಗೆ ದೀಡ್ ನಮಸ್ಕಾರ,ಪಡ್ಲಿಗೆ ಪೂಜೆ,ಚೌಲ ಮುಂತಾದ ವಿವಿಧ ರೀತಿಯ ಪೂಜಾ ಕೈಂಕರ್ಯಗಳು ಜರುಗಿದವು.ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚಾಗಿ ಉತ್ತರ ಕರ್ನಾಟಕ ಭಾಗದ ಭಕ್ತಾದಿಗಳು ಜಾತ್ರೆಗೆ ಆಗಮಿಸಿ,ದೇವಿಯಲ್ಲಿ ಪ್ರಾರ್ಥಿಸಿ ಭಕ್ತಿಯ ಪರಾಕಾಷ್ಠೆ ಮೆರೆದರು.ಸುತ್ತಮುತ್ತಲಿನ ಗ್ರಾಮಗಳ ರೈತರು ರೈತರು ಎತ್ತಿನ ಗಾಡಿ ಹಾಗೂ ಟ್ಯಾಕ್ಟರ್ ಮೇಲೆ ಜಾತ್ರೆಗೆ ಆಗಮಿಸಿದ್ದ ಭಕ್ತಾದಿಗಳು ಬೆಲ್ಲ,ನೀರು ವಿತರಣೆ ಮಾಡಿದರು.
ವರದಿ-ಸಂದೀಪ ಯು.ಎಲ್.ಕರುನಾಡ ಕಂದ ನ್ಯೂಸ್ ಸೊರಬ