ಕೊಪ್ಪಳ ಜಿಲ್ಲೆಯ ಗಂಗಾವತಿಯ
ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕಾದಂಬರಿಕಾರ,ಕಥೆಗಾರ ಶ್ರೀ ವಿರುಪಣ್ಣ ಡಣಾಪೂರ ಇವರ ಐದನೇ ಕೃತಿ ಕಾನೂನು ಬಿಟ್ಟು ನಡೆದವರ ಕಥೆಗಳು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತ ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ ಅವರು ಮಾತನಾಡಿ ಮೊಬೈಲ್ ಬಿಡಿ ಪುಸ್ತಕ ಓದಿ ಎಂದು ಅಪಾರ ಜ್ಞಾನ ನಮ್ಮದಾಗುತ್ತದೆ ಪುಸ್ತಕದಲ್ಲಿ ಬರೆದಿರುವ ಅಂಶಗಳು ಅನುಭವಗಳನ್ನು ಪುಸ್ತಕಕ್ಕನುಗುಣವಾಗಿ ಸಾರುತ್ತಿರುತ್ತವೆ ಎಂದರು.
ಶರಣಪ್ಪ ಕೊಲ್ಕಾರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಹಳ್ಳಿಯಲ್ಲಿದ್ದು ಕವಿತೆ ಕಾದಂಬರಿಕಾರರಲ್ಲಿ ಒಬ್ಬರಾದ ವಿರುಪಣ್ಣ ಡಣಾಪೂರ ಇವರು ನಮ್ಮ ಜಿಲ್ಲೆಯ ಕಾದಂಬರಿಕಾರರಲ್ಲಿ ಎರಡನೆಯವರಾಗಿದ್ದಾರೆ ನಾನು ನೋಡಿದ ಪ್ರಕಾರ ಎಂದರು.ವೃತ್ತಿಯ ಜೊತೆಗೆ ಸಾಹಿತ್ಯದ ಹವ್ಯಾಸ ಇದು ಬಹಳ ಅಪರೂಪ ಇನ್ನೂ ಅನೇಕ ಪುಸ್ತಕಗಳು ಅವರಿಂದ ಮೂಡಿ ಬರಲಿ ಎಂದರು.
ಪವನಕುಮಾರ ಗುಂಡು ಅವರು ಪುಸ್ತಕ ಪರಿಚಯ ಮಾಡಿಕೊಟ್ಟರು ಸಂಪೂರ್ಣ ಪುಸ್ತಕದಲ್ಲಿ ಅನುಭವಗಳ ಮಾಲೆಯನ್ನೊಳಗೊಂಡ ಮಾಹಿತಿಯನ್ನು ತಿಳಿಸಿಕೊಟ್ಟರು.
ಅಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅದ್ಯಕ್ಷರಾದ ಶರಣೇಗೌಡ ಪೋಲಿಸ ಪಾಟೀಲ್ ಅವರು ವಹಿಸಿದ್ದರು .
ಪುಸ್ತಕ ಲೋಕಾರ್ಪಣೆಯನ್ನು ಡಾ.ಶರಣಬಸಪ್ಪ ಕೊಲ್ಕಾರ,ಪ್ರಾಚಾರ್ಯರು ಹಾಗೂ ಸಂಶೋದಕರು ನೆರೆವೇರಿಸಿದರು.ಮುಖ್ಯ ಅತಿಥಿಗಳಾಗಿ ಶ್ರೀನಿವಾಸ ಅಂಗಡಿ ಅಧ್ಯಕ್ಷರು ಕ.ಸಾ.ಪ.ಗಂಗಾವತಿ,
ಶಿವಾನಂದ ವಂಕಲಕುಂಟಿ,
ಕರಿಯಪ್ಪ ಎಮ್ಮಿಗನೂರ,
ಸತ್ಸಂಗ ತಿಪ್ಪಣ್ಣ ಗಡ್ಡಿ ಹಿರಿಯ ಚಿಂತಕರು ಹಾಗೂ ಡಣಾಪೂರದ ಕವಿ ಹನುಮಂತಪ್ಪ
ರಂಗಭೂಮಿ ಕಲಾವಿದರಾದ ಈ ಚಿದಾನಂದಪ್ಪ ಡಣಾಪೂರ
ಹಾಗೂ ಯಂಪ್ಪ ಬುಡ್ಡಪ್ಪ ಕುಟುಂಬಸ್ಥರು ಹಾಗೂ ಕಲಾವಿದರು ಸಾಹಿತಿಗಳು ಭಾಗಿ ಇದ್ದರು.
ವರದಿ-ಹನುಮೇಶ ಭಾವಿಕಟ್ಟಿ