ಬಾಗಲಕೋಟೆ:ಕರ್ನಾಟಕ ರಾಜ್ಯ ಸಮಾಜ ಸೇವೆ ಪ್ರಶಸ್ತಿ ಪಡೆದ ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ಶಫೀಕ್ ಎಂ ಬೇಪಾರಿ ಅವರನ್ನು ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಘಟಕದ ಬಾಗಲಕೋಟೆ ಜಿಲ್ಲಾ ಅಧ್ಯಕ್ಷರಾಗಿ,ರಾಷ್ಟ್ರೀಯ ಕಾಂಗ್ರೆಸ್ ಅಲ್ಪಸಂಖ್ಯಾತರ ಅಧ್ಯಕ್ಷರಾದ ಇಮ್ರಾನ್ ಪ್ರತಾಪ್ಗಡ ಅವರು ತಕ್ಷಣ ನೇಮಕವಾಗುವಂತೆ ಆದೇಶ ಹೊರಡಿಸಿದ್ದಾರೆ.
ಮುಧೋಳ ನಗರದಲ್ಲಿ ಸಾಕಷ್ಟು ಸಮಾಜ ಸೇವೆಗಳಲ್ಲಿ ಗುರುತಿಸಿಕೊಂಡ ಶಫೀಕ್ ಎಂ ಬೇಪಾರಿ ಅವರನ್ನು ಕಾಂಗ್ರೆಸ್ ಪಕ್ಷ ಗುರುತಿಸಿ ಮತ್ತಷ್ಟು ಅವರ ಸೇವೆ ಪಕ್ಷಕ್ಕೆ ಬೇಕಾಗಿದೆ ಎಂದು ಉನ್ನತ ಹುದ್ದೆ ಕೊಟ್ಟು ಅವರ ಮೇಲೆ ಹೆಚ್ಚಿನ ಜವಾಬ್ದಾರಿ ವಹಿಸಲಾಗಿದೆ
ಶಫೀಕ್ ಎಮ್ ಬೇಪಾರಿ ಇವರನ್ನು ಪ್ರೋತ್ಸಾಹಿಸಿದ , ಉದಯ್ ಸಿಂಹ ಪಡ್ತಾರೆ,ರಾಜು ಬಾಗವಾನ್,ಹಾಗೂ ದಾನೇಶ್ ತಡೆಸಲೂರ್ ಆಯ್ ಆರ್ ರಾಮದುರ್ಗ್,ಐ ಯಾಚ್ ಅಂಬಿ ವಕೀಲರು,ಕಾಟೆ ಬಸ್ವಂತ್ ಕಾಕಾ,ಆರಿಫ್ ಮೊಮಿನ್,ಪ್ರಶಾಂತ್ ಕಾಳೆ,ಯೂಸುಫ್ ಜಮಾದಾರ್ ಹಾಗೂ ಇನ್ನೂ ಅನೇಕ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಕೃತಜ್ಞತೆಗಳನ್ನು ಹೇಳಿದ್ದಾರೆ.
ವರದಿ ಮಹಿಬೂಬ್.ಎಂ.ಬಾರಿಗಡ್ಡಿ



















