ಅದ್ಯಾಕೋ ರಾಜಕೀಯ ಹೊಲಸು,ಹೊಡೆದಾಟ, ಕಿತ್ತಾಟ ಜಾಸ್ತಿ ಆದಂಗ್ ಕಾಣಿಸ್ತು ರಿ ಅದೊಂದು ಕಾಲ ಇತ್ತು,ಚುನಾವಣೆ ಸ್ಪರ್ದಿಸು ಸಲುವಾಗಿ ಅಭ್ಯರ್ಥಿಗಳೇ ಸಿಕ್ತಿರ್ಲಿಲ್ಲ ಬರ ಬರುತ್ತಾ ಎಲ್ಲರೂ ನಾಯಕರಾಗ್ ಹತ್ಯಾರ್ ರಿ ನಮ್ ಕಡೆ ಬಸ್ ಕಂಡಕ್ಟರ್ ಮಾತ್ರ ” ಟಿಕೆಟ್,ಟಿಕೆಟ್”ಅಂತ ಕಿರಿಚು ತಾನ್ ರಿ,ಈಗ ನೋಡ್ರೆ ಪ್ರಯಾಣಿಕರೆಲ್ಲ ಟಿಕೆಟ್,ಟಿಕೆಟ್ ಅಂತ ಕಿರಿಚಾಕ ಹತ್ತಾರಿ.ಏನ್ರೀ,ಈ ರಾಜಕಾರಣಿಗಳಿಗೆ ರಿಟೈರ್ ಮೆಂಟ್ ಇಲ್ವರಿ !ಎಪ್ಪತ್ತು,ಎಂಬತ್ತು,ತೊಂಬತ್ತು ಆದ್ರೂನೂವೆ ರಾಜಕಾರಣ ಮಾತ್ರ ಬಿಡಲ್ಲರಿ,ಮಕ್ಳು,ಮೊಮ್ಮಕ್ಳು,ಮರಿ ಮಕ್ಳಿಗೂ ಟಿಕೆಟ್ ಕೊಡಿಸ್ತಾರಿ.
ನಮ್ ಕಡೆ ಊರಿನ ಸಂಘ,ಸಂಸ್ಥೆಯಾಗ ಯೆಸ್ಟ್ ಚೊಕ್ಕಾಗಿ ಅಧಿಕಾರ ಹಂಚ್ ಕೊಳ್ತಾರಿ,ಅದು ಎರಡ್ ವರ್ಸಾ ಇರ್ಲಿ,ನಾಕ್ ವರ್ಸಾ ಇರ್ಲಿ,ಸಮಯ ಆದ್ ಕೂಡ್ಲೇ ಮಹಾ ಸಭೆ ಕರ್ದು,ಅಧ್ಯಕ್ಷರು ಮತ್ತೆ ಪದಾಧಿಕಾರಿಗಳ್ನ ಒಮ್ಮತದಾಗ ಆರಿಸ್ ತಾರಿ. ಅಧಿಕಾರ ಎಲ್ಲರೂ ಹಂಚ್ ಕೊಳ್ತಾರಿ.
ಅದ್ ಯಾಕೆ ನಮ್ ರಾಜಕೀಯ ಕ್ಷೇತ್ರ ಇಸ್ಟ್ ಹೊಲಸಾಯಿತ್ ರಿ.ಸಾಮಾನ್ಯ ಕಾರ್ಯಕರ್ತ ಎಂ ಎಲ್ ಎ,ಮುಖ್ಯಮಂತ್ರಿ,ಕೇಂದ್ರದಲ್ಲಿ ಮಂತ್ರಿ ಆಗಿ, ಇನ್ ರಿಟೈರ್ ಮೆಂಟ್ ವಯಸ್ಸಾದ್ರೂ ಹಸಿವೆ ನೀಗಲಿಲ್ಲ ಟಿಕೆಟ್ ಕೊಡ್ಲಿಲ್ಲ ಅಂತ ಬೇಸರ,ಪಕ್ಷ ಬದಲಾವಣೆ,ಮತ್ತೆ ಬೇರೆ ಪಕ್ಷದ್ದಾಗ ಸ್ಪರ್ಧೆ ಗೆದ್ರೆ ಅಲ್ಲಿ ಮಂತ್ರಿ,ಸೋತ್ರೆ ಮತ್ತೆ ಮುಂಚಿನ ಪಕ್ಷಕ್ಕೆ ವಾಪಸ್,ನಿಯತ್ತೇ ಇಲ್ಲ ಕಣ್ರೀ.
ಇವ್ರೆಲ್ಲರ ಮಧ್ಯೆ,ಕೆಲ ಮಧ್ಯಮ ವಯಸ್ಕ ರಾಜಕಾರಣಿಗಲ್ ಟಿಕೆಟ್ ಸಿಗದ್ರೂ,ಯಾವುದೇ ಕಲಹ ಮಾಡದೆ,ಪಕ್ಷ ಕಾರ್ಯ ದಾಗ ತೊಡಗಿಕೊಂಡಿರೋದು ಮಾತ್ರ ಉಳಿದವರಿಗೆ ಆದರ್ಶಪ್ರಾಯ ರಿ.
ಅದೇನೇ ಇದ್ರೂ,ಈ ನಾಯಕ್ರೆಲ್ಲ ಒಂದು ತಿಳ್ಕೊಬೇಕು,ಇವ್ರನ್ನ ಜನ ಆರಿಸಿ ಕಳ್ಸಿರೋದು ಕ್ಷೇತ್ರದ ಜನರ ಸೇವೆಗೆ ಮತ್ತು ಅಭಿವೃದ್ಧಿಗೆ,ಬಿಟ್ಟು ಅವ್ರ ವಯಕ್ತಿಕ ಅಭಿವೃದ್ಧಿಗೆ ಅಲ್ಲ ಅಂತ ಮನವರಿಕೆ ಮಾಡ್ಕೋಬೇಕು.
ಬೀದಿ ನಾಟಕ,ಚಿತ್ರ ಕಲೆ,ಆಟೋಟಗಳು ಒಂದು ಹವ್ಯಾಸ ಹಾಂಗೆ ಈ ರಾಜಕಾರಣ ವೂ ಒಂದು ಹವ್ಯಾಸ ಆಗ್ಬೇಕು.ಒಂದು ನಿಗದಿತ ಅವಧಿಗೆ ಸಕ್ರೀಯ ರಾಜಕಾರಣ ದಾಗ ಜನ ಸೇವೆ,ದೇಶ ಸೇವೆ ಮಾಡಿ, ಇತರ ಸಕ್ರಿಯ ರಾಜಕಾರಣಿಗೆ ಅಧಿಕಾರ ಹಸ್ತಾಅಂತರಿಸುವ ಹವ್ಯಾಸ ಬೆಳೆಯ ಬೇಕು,ಬರಿ ತನಗೆ,ಕುಟುಂಬದವರಿಗೆ ಅವಕಾಶ ಕಲ್ಪಿಸುವ ಬದಲು ಸಮಾಜದಾಗ ಅರ್ಹ ವ್ಯಕ್ತಿಗಳನ್ನ ಗುರ್ತಿಸಿ ನಾಯಕರನ್ನ ಸೃಸ್ಟಿಸ್ ಬೇಕು,ಆಗ ಮಾತ್ರ ರಾಜಕಾರಣ “ತುಂಬಿದ ಕೊಡ” ಆಗಲು ಸಾಧ್ಯ.
ಲೇಖನ:ಚಂದ್ರಶೇಖರ ಹೆಬ್ಬಾರ್ ಕೊಲ್ಯ