ಬದಲಾವಣೆಯ ಪರಿಸ್ಥಿತಿಗಳು ಇಂದಿನ ಮುಖ್ಯ ವಿಷಯವಾಗಿದ್ದು,ನಿತ್ಯದ ಸಮಸ್ಯೆಗಳು ಸಾವಿರಾರು, ಮಾನವೀಯ ತೊಳಲಾಟಗಳು ಇಂದಿನ ವಸ್ತುಸ್ಥಿತಿಯು ಕೇವಲ ಆಹಾರ,ಬಟ್ಟೆ, ವಸತಿಗಳಾಗಿದ್ದು ಹಣ ಸಂಪಾದನೆಯ ದಾರಿಗಳು ಹಲವು,ರಾಜಕೀಯ ಸ್ಥಿತಿಯು ಸುಧಾರಿಸುವ ನಿಟ್ಟಿನಲ್ಲಿ ಹಲವು ಯೋಜನಾ ಕಾರಿ ಅಂಶಗಳು ಎದ್ದು ಕಾಣುತ್ತದೆ. ಜನರ ಸೇವೆಗೆ ಹಗಲಿರುಳು ಶ್ರಮಿಸುವವರಿಂದ,”ಒಂದು ಕಡೆ ನೆಲೆ ನಿಂತ ನೀರಿಗೆ ದಾರಿ ತೋರುವದಾಗಿರುತ್ತದೆ”.
ಬರದ ಈ ಪರಿಸ್ಥಿತಿಯಲ್ಲಿ ಜಲ ಎಷ್ಟು ಮುಖ್ಯವೆಂಬುದನ್ನರಿತವರು,ಪರಿಸ್ಥಿತಿಗಳ ಬದಲಾವಣೆಯನ್ನು ಅರಿತವರು,ಸಾಧ್ಯ ಅಸಾಧ್ಯ ಎಂಬುದು ಪ್ರಶ್ನೆಗಳಾಗಿ ಕಾಡುವ ಅಂಶಗಳು. ಬದಲಾವಣೆಯು “ನಿಂತ ನೀರಾಗಬಾರದು’ ನಂತರ ಮತ್ತೊಂದುಕ್ಕೆ ಅನುವು ಮಾಡುವ ಹಾಗೆ ಹಾಗಿರಬೇಕು ಆರ್ಥಿಕತೆ ಬಹುದೊಡ್ಡ ಸಮಸ್ಯೆಯಾಗಿ ಎಲ್ಲರಿಗೂ ಕಾಡುತ್ತಿರುವ ಅಂಶ ಅಸಮಾನತೆಯ ನಿವಾರಣೆಯು ಇನ್ನೊಂದು ಪ್ರಶ್ನೆಯಾಗಿದೆ.
ಪರಿಹಾರ ಎಂಬುದು ಅಲ್ಪ ಪ್ರಮಾಣದ್ದಾಗಿದ್ದು ಹಲವು ನಿವಾರಣೆ ಸಾದ್ಯತೆಗೆ ಶೋಧನೆ ಅಗತ್ಯ.ಸಮಸ್ಯೆ ಸಮಸ್ಯೆಯಾಗಿರದೆ, ಪರಿಹಾರತೆಗೆ ಪ್ರಾಮುಖ್ಯ ನೀಡಿ,ಅದು ಎಷ್ಟಾಗಿದೆ ಎಂಬುದರ ಕಡೆ ಇರಬೇಕು ಜನಸಾಮಾನ್ಯರ ಕಡೆಗೆ ಒಲವು ತೋರಿಸುತ್ತಾ ಯೋಜನೆಗಳು ಸಕಾರಗೊಳ್ಳಬೇಕು.ಕೆಳಹಂತದ ಜನರು ತಮ್ಮ ನಿಲುವುಗಳಿಗೆ ಇಚ್ಛೆಯನುಸಾರ ಮತಗಳನ್ನು ಹಾಕುವುದ್ದಾಗಿದ್ದು,ಯಾವುದೇ ಒತ್ತಡಗಳಿಗೆ ಒಳಗಾಗಬಾರದು.ಸಮಸ್ಯೆಗಳು ಹಲವಿದ್ದು ನಿವಾರಣೆ ತಮ್ಮಲ್ಲಿ ಅಡಗಿದ್ದು,ಪರಿಹಾರತೆಯು ಒದಗಿಸುವ ಸಾಮರ್ಥ್ಯಗಳನ್ನು ಸರಕಾರದ ನಿಲುವುಗಳಾಗಿರಬೇಕು.”ಹಿಂದಿನ ಸರಿದಾರಿಯ ಅಂಶಗಳು ಇಂದಿನ ಸಮಸ್ಯೆಗಳ ನಿವಾರಣೆಯತ್ತ ಇರಬೇಕಾಗಿದೆ”ಎದುರಿಸುವ ಪರೀಕ್ಷೆಗಳು ವಿದ್ಯಾರ್ಥಿಗಳ ಗಮನಕೇಂದ್ರಿತವಾಗಿರಬೇಕು. ಪರೀಕ್ಷೆಗಳೇ ಸಮಸ್ಯೆಗಳಾಗಿ ಕಾಡುವ ಇಂದಿನ ಪರಿಸ್ಥಿತಿ ಬದಲಾಗಬೇಕು.
ಲೇಖನ:ಚೇತನ್ ಕುಮಾರ್ ಎಂ.ಕೆ.ಮೈಸೂರು