ಬೆಂಗಳೂರು:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಧ್ವನಿ ಸಂಘಟನೆ ವತಿಯಿಂದ ನೆಲಮಂಗಲ ಎಂ ವಿ ಎಮ್ ಸಭಾಭವನದಲ್ಲಿ ಎರಡನೇ ರಾಜ್ಯ ಪತ್ರಕರ್ತರ ಸಮ್ಮೇಳನ ನಡೆಯಿತು.
ಕಾರ್ಯಕ್ರಮ ಉದ್ಘಾಟನೆಯನ್ನು ಶ್ರೀ ಬಸವಾನಂದ ಶ್ರೀಗಳು,ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಮಂಜಮ್ಮ ಜೋಗತಿ, ಶಾಸಕ ಶ್ರೀನಿವಾಸ್,ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ,ಕ ನಿ ಪ ಸಂಘದ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ನೆರವೇರಿಸಿದರು
ಜಾನಪದ ಗಾಯಕ ಗುರುರಾಜ್ ಹೊಸಕೋಟೆ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಶ್ರೀ ಗಳು ಮಾತನಾಡಿ ಇಂದಿನ ದಿನಗಳಲ್ಲಿ ಪತ್ರಕರ್ತರಿಗೆ ಯಾವುದೇ ರೀತಿಯ ರಕ್ಷಣೆಗೆ ಇಲ್ಲ ಪತ್ರಕರ್ತರು ಆಡಳಿತ ಸರ್ಕಾರಕ್ಕೆ ವಿರೋಧ ಪಕ್ಷದ ಹಾಗೆ ಕೆಲಸ ಮಾಡಬೇಕು ಸಮಾಜದಲ್ಲಿನ ಎಲ್ಲಾ ತಪ್ಪುಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು ಎಂದು ಹೇಳಿದರು.
ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಮಾತನಾಡಿ ಎಲ್ಲಾ ಖಾಯಿಲೆಗಳಿಗೆ ಚಿಕಿತ್ಸೆ ಇದೆ ಆದರೆ ದುರಾಸೆಗೆ ಚಿಕಿತ್ಸೆ ಇಲ್ಲ ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ,ಭ್ರಷ್ಟಾಚಾರದ ವಿರುದ್ದ ಹೋರಾಡಿದರೆ ಹಲವಾರು ಹಿಂಸೆ
ಭ್ರಷ್ಟಾಚಾರದ ಮಾಡಿದವರಿಗೆ ರಾಜಮರ್ಯಾದೆ ರಾಜಕೀಯ ಬೆಂಬಲ ಇದೆ ಎಂದರು.
ಪ್ರವೀಣ್ ಶೆಟ್ಟಿ ಕ ರ ವೇ ರಾಜ್ಯಾಧ್ಯಕ್ಷ ಮಾತನಾಡಿ ನಿಜವಾದ ಪತ್ರಕರ್ತರಿಗೆ ಮತ್ತು ಸತ್ಯ ಹೇಳುವಂತವರಿಗೆ ಜೀವ ಬೆದರಿಕೆ ಇದೆ ಎಂದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಮಂಜಮ್ಮ ಜೋಗತಿ ಮಾತನಾಡಿ ನನ್ನ ಈ ಮಟ್ಟಕ್ಕೆ ಬೆಳೆಸಿದ್ದು ಜಾನಪದ ಕಲೆ ಪತ್ರಕರ್ತರು ಮನಸು ಮಾಡಿದರೆ ಒಬ್ಬ ವ್ಯಕ್ತಿಯನ್ನು ಬೆಳೆಸಲು ಬಹುದು
ನಾಶ ಮಾಡಲೂಬಹುದು
ಎಂದು ಹೇಳಿದರು.
ವರದಿ ಪ್ರಭಾಕರ್ ಡಿ ಎಂ ಹೊನ್ನಾಳಿ