ಸೇಡಂ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ದಿನಾಂಕ 22-03-2024 ಶುಕ್ರವಾರ ರಂದು ಪೋಲಿಸ್ ಠಾಣೆ ವತಿಯಿಂದ ಆಯೋಜಿಸಿದ್ದ ಹೋಳಿ ಹಬ್ಬ ಶಾಂತಿ ಸಭೆ ಕಾರ್ಯಕ್ರಮ ಜರುಗಿತು.
ಹೋಳಿ ಹಬ್ಬ ಶಾಂತಿ ಸಭೆ ಅಧ್ಯಕ್ಷತೆ ವಹಿಸಿದ್ದ ಸಿಪಿಐ ಮಂಜುನಾಥ್ ಸಿ ಅವರು ಮಾತನಾಡಿ ಹೋದ ವರ್ಷದಂತೆ ಈ ವರ್ಷವೂ ಕೂಡ ಹೋಳಿ ಹಬ್ಬ ಆಚರಣೆ ಶಾಂತಿ ಸೌಹಾರ್ದತೆಯಿಂದ ಎಲ್ಲರೂ ಅಣ್ಣ ತಮ್ಮಂದಿರಂತೆ ಭಾವನೆಯಿಂದ ಆಚರಣೆ ಮಾಡಬೇಕು.
ಹೋಳಿ ಹಬ್ಬ ಮತ್ತು ರಂಜಾನ್ ಹಬ್ಬ ಕೂಡಿಕೊಂಡು ಬಂದಿದ್ದು ಹಾಗಾಗಿ ಯಾವುದೇ ಅಹಿತಕರ ಘಟನೆ ಆಗದಂತೆ ನೋಡಿಕೊಂಡು ಯುವಕರು ಹಬ್ಬವನ್ನು ಆಚರಣೆ ಮಾಡಬೇಕೆಂದರು.
ಒಂದು ವರ್ಷದಲ್ಲಿ ಹೋಳಿ ಹಬ್ಬ,ಯುಗಾದಿ,ದೀಪಾವಳಿ ಸೇರಿದಂತೆ ಹಲವು ಹಬ್ಬಗಳು ಬರುವುದು ಸಹಜ,ಆದರೆ ಯಾವುದೇ ಹಬ್ಬ ಇದರು ಶಾಂತಿ ಸೌಹಾರ್ದತೆ ಯಿಂದ ಹಬ್ಬವನ್ನು ಆಚರಣೆ ಮಾಡಬೇಕು.ತಮ್ಮಲ್ಲೇ ಹೊಟ್ಟೆ ನೋವಿಂದ ಗಲಭೆ ಸೃಷ್ಟಿಸುವ ಹುನ್ನಾರ ಮಾಡಲು ಯತ್ನಿಸುತ್ತಾರೆ. ತಾವು ಮಾಡಿದ ತಪ್ಪಿಗೆ ಕಾನೂನು ಪ್ರಕಾರ ಸೂಕ್ತ ಕ್ರಮ ತೆಗೆದುಕೊಂಡಾಗ ತಮ್ಮ ಜೀವನ ಹಾಳು ಆಗುತ್ತದೆ ಎಂದು ಎಚ್ಚರಿಸಿದರು.
ಹೋಳಿ ಹಬ್ಬ ಸಮಯ ಮೀರಿ ಹಬ್ಬ ಆಚರಣೆ ಮಾಡಬಾರದು ಒತ್ತಾಯ ಪೂರಕವಾಗಿ ಬಣ್ಣ ಹಚ್ಚುವಂತಿಲ್ಲ.ಮದ್ಯ ಪಾನ ಸೇವಿಸಿ ನದಿಯಲ್ಲಿ ಸ್ನಾನ ಮಾಡುವಾಗ ಎಚ್ಚರಿಕೆಯಿಂದ ಸ್ನಾನ ಮಾಡಬೇಕು.
ನಾನು ಬಾಲ್ಯದಲ್ಲಿ ಬಹಳಷ್ಟು ಹಬ್ಬಗಳನ್ನು ವಿಜೃಂಭಣೆಯಿಂದ ಆಚರಣೆ ಮಾಡಿದ್ದು.ಈಗಲೂ ಕೂಡಾ ಹಬ್ಬದಲ್ಲಿ ಪಾಲ್ಗೊಳ್ಳಲು ಆಸಕ್ತಿ ಇದೆ.ಆದರೆ ಸರ್ಕಾರ ಸೇವೆಯಲ್ಲಿ ಇದು,ಯಾವುದೇ ಹಬ್ಬಗಳಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ ಎಂದು ಹೇಳಿದರು.
ಲೋಕಸಭಾ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಘೋಷಣೆಯಾಗಿದ್ದು ಯುವಕರು ಮೊಬೈಲ್ ನಲ್ಲಿ ರಾಜಕೀಯ ನಾಯಕರ ಪೋಸ್ಟ್ ರ್ ಗಳು ವಾಟ್ಸಪ್, ಫೇಸ್ ಬುಕ್ ನಲ್ಲಿ ಹರಿ ಬಿಟ್ಟು ಟೀಕೆ ಮಾಡುವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾನೂನು ವಿರುದ್ಧ ನಡೆದುಕೊಂಡರೆ ಮುಲಾಜಿಲ್ಲದೆ ಅಂಥವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪಿಎಸ್ಐ ತಿರುಮಲೇಶ್ ಅವರು ಮಾತನಾಡಿ ಹೋಳಿ ಹಬ್ಬ ಶಾಂತಿ ಕಾಪಾಡಿಕೊಂಡು ಆಚರಣೆ ಮಾಡಬೇಕು. ಯುವಕರು ಮದ್ಯ ಪಾನ ಸೇವಿಸಿ ಬೈಕ್ ಮೇಲೆ ಮೂವರು ಕುಳಿತುಕೊಂಡು ಅಡ್ಡಾದಿಡ್ಡಿ ವಾಹನ ಚಾಲಯಿಸುವುದು ಕಂಡರೆ ಅಂಥವರ ಮೇಲೆ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪೋಲಿಸ್ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ವರದಿ ಉಸ್ಮಾನಬಾಷಾ ಊಡಗಿ