ಚಿತ್ತಾಪುರ:ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಹಾಗೂ ಶಾಲಾ ಶಿಕ್ಷಣ ಕಾರ್ಯಕ್ರಮ ಕಲಬುರಗಿ ಇವರ ಸಹಯೋಗದಲ್ಲಿ ಮಕ್ಕಳ ಸಂತೆ ಕಾರ್ಯಕ್ರಮ ಮಾಡಲಾಯಿತು.
ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಗಾಂಧಿನಗರ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡತ್ ಬಜಾರ್ ಚಿತ್ತಾಪೂರ,ಶಾಲಾ ಮಕ್ಕಳೇ ತರಕಾರಿ ಖರೀದಿಸಿ ಅವನ್ನು ತಂದು ಶಾಲಾ ಆವರಣದಲ್ಲಿ ಸಂತೆಯ ವ್ಯಾಪಾರಿಗಳಾಗಿದ್ದರು.
ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಲಾಭ-ನಷ್ಟದ ವ್ಯವಹಾರ ಜ್ಞಾನ ಬೆಳೆಸುವ ಸದುದ್ದೇಶದಿಂದ ಶಾಲೆಯಲ್ಲಿ ಮಹತ್ವದ ಕಾರ್ಯಕ್ರಮ ನಡೆಸುವ ಮೂಲಕ ಈ ಸಂತೆಯ ಕಾರ‌್ಯಕ್ರಮದಲ್ಲಿ 4,5,6,7ನೇ ತರಗತಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಮಾರುಕಟ್ಟೆಯಲ್ಲಿ ಹೇಗೆ ವ್ಯವಹರಿಸಬೇಕು? ವ್ಯಾಪಾರದಿಂದಾಗುವ ಲಾಭ ನಷ್ಟ ಹ್ಯಾಗೆ ತಿಳಿಯಬೇಕು? ಹಾಕಿದ ಬಂಡವಾಳವನ್ನು ಹೇಗೆ ತೆಗೆಯಬೇಕು?ಇಂತಹ ಜ್ಞಾನವನ್ನು ಮಕ್ಕಳಿಗೆ ತಿಳಿಸುವ ಕಾರ‌್ಯಕ್ರಮದ ಅಕ್ಷರಶಃ ಸಂತೆ ಗದ್ದಲದಂತೆಯೇ ಏರ್ಪಟ್ಟಿತ್ತು.ಕಾಯಿಪಲ್ಲೆ ಜತೆಗೆ ಅಗರಬತ್ತಿ,ಚುಡುವಾ ಕಾಳು,ಬಾಳೆ,ಬಗೆ ಬಗೆಯ ಜ್ಯೂಸ್ ಮತ್ತು ನಾನಾ ವಸ್ತುಗಳು ಇದ್ದವು.ಬದನೆ ಕಾಯಿ,ಉಳ್ಳಾಗಡ್ಡಿ,ಮೆಣಸಿನಕಾಯಿ,ಆಲೂಗಡ್ಡೆ ಹೀಗೆ ಕಾಯಿಪಲ್ಲೆಗಳನ್ನು ತೂಗಿ ಕೊಟ್ಟು ಹಣ ಪಡೆದರು. ಕಾರ್ಯಕ್ರಮದಲ್ಲಿ ECO ಚಿತ್ತಾಪುರ ಶ್ರೀ ಸಂತೋಷ್ ಶಿರನಾಳ,ಶಾಲೆಯ ಮುಖ್ಯ ಗುರುಗಳಾದ ಶ್ರೀ ಅಬ್ದುಲ್ ಸಲೀಂ,ಶ್ರೀಮತಿ ಅನ್ನಪೂರ್ಣ,SVYM ಸಂಸ್ಥೆಯ ಕಾರ್ಯಕ್ರಮ ವ್ಯವಸ್ಥಾಪಕ ಶ್ರೀ ಸಂತೋಷ್ ಎಂ.ಕೆ, ಚಂದ್ರಕಾಂತ್,ಶಿವಕುಮಾರ್,ಸುಧಾಕರ್,ಪ್ರದೀಪ್ ರೆಡ್ಡಿ,ರೇಷ್ಮಾ,ತೋಟೆಂದ್ರ,ಲತಾ ಮತ್ತು ಅನ್ನಪೂರ್ಣ ಇದ್ದರು 200ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದರು.
ವರದಿ ಮೊಹಮ್ಮದ್ ಅಲಿ ಚಿತ್ತಾಪುರ