ಬೆಂಗಳೂರು:ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ ನೀರಿಗೆ ಹಾಹಾಕಾರ ಉಂಟಾಗಿದೆ,ಇದೇ ವೇಳೆ ಬಿಸಿಲು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ,ಫೆಬ್ರವರಿಯಿಂದ ಆರಂಭವಾಗಿರುವ ಈ ಬಿಸಿಲು ಜೂನ್ 2ನೇ ವಾರದವರೆಗೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ,ಹವಾಮಾನ ಇಲಾಖೆ ಸೂರ್ಯನ ಬಿಸಿಲು ಮತ್ತು ಬಿಸಿಯ ಗಾಳಿಯೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮುನ್ನೆಚ್ಚರಿಕೆ ನೀಡಿದೆ,ಸೂರ್ಯನ ಶಾಖದ ಪ್ರಖರತೆಯಿಂದ ಸನ್ ಸ್ಟ್ರೋಕ್,ವಿಪರೀತ ತಲೆನೋವು ಸೇರಿದಂತೆ ಅನೇಕ ಕಾಯಿಲೆಗಳು ಬರುತ್ತವೆ ಅದಕ್ಕಾಗಿ ಅನೇಕ ವೈದ್ಯರು ಹಲವಾರು ಸಲಹೆಗಳನ್ನು ನೀಡಿದ್ದಾರೆ. (ಆರೋಗ್ಯ ಕಾಪಾಡಿಕೊಳ್ಳಲು ಎಚ್ಚರಿಕೆ). ಹೊರಗೆ ಹೋಗುವುದನ್ನು ತಪ್ಪಿಸಬೇಕು ಹೆಚ್ಚು ಕಾಟನ್ ಬಟ್ಟೆ ಧರಿಸಬೇಕು,ಕಪ್ಪು, ನೀಲಿ ಬಣ್ಣದ ಬಟ್ಟೆ ಧರಿಸಬಾರದು,ಹಿರಿಯ ನಾಗರಿಕರಿಗೆ,ಮಕ್ಕಳಿಗೆ ಹೆಚ್ಚು ನೀರು ಕುಡಿಯಲು ಕೊಡಬೇಕು. ಬೇಸಿಗೆ ದಿನಗಳಲ್ಲಿ ತಣ್ಣೀರಿನ ಸ್ನಾನ ಒಳ್ಳೆಯದ್ದು. ಆಹಾರದಲ್ಲಿ ಮಸಾಲೆ ಪದಾರ್ಥಗಳನ್ನು ಹೆಚ್ಚಾಗಿ ಬಳಸಬಾರದು.
ವರದಿ ಧರಿಯಪ್ಪ ಎಲ್ ಕೆ