ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಶರಣ ಪ್ರಭು ಮಡಿವಾಳೇಶ್ವರ 88ನೇ ಜಾತ್ರಾ ಮಹೋತ್ಸವ

ಚಿಟಗುಪ್ಪ:12ನೇ ಶತಮಾನದ ಬಸವಾದಿ ಶರಣರು ಸಮಾಜದ ಎಲ್ಲ ಸ್ತರಗಳಲ್ಲಿನ ಬೇಧ-ಭಾವ,ಹೆಚ್ಚು ಕಡಿಮೆ,ಮೇಲು-ಕೀಳು ಮುಂತಾದ ತಾರತಮ್ಯ ಭಾವನೆಗಳನ್ನು ಹೊಡೆದು ಹಾಕಿ ಸಮಾನತೆ, ಸಹಬಾಳ್ವೆ,ಸಮಬಾಳು ತರುವ ಮೂಲಕ ಸಮ ಸಮಾಜದ ಕನಸು ಕಂಡಿದ್ದರು.ಅವರಂತೆ ತಾಲೂಕಿನ ಕಂದಗೋಳ ಗ್ರಾಮದಲ್ಲಿ ಜನ್ಮವೆತ್ತಿ ಬಸವಾದಿ ಶರಣರ ದಾರಿಯಲ್ಲಿ ಸಾಗಿ,ಅನೇಕ ಜನಪರ ಸೇವೆಗಳು ಗೈದು,ನಿಜ ಶರಣರಾಗಿ ಬಾಳಿ,ಇಂದಿಗೂ ಆದರ್ಶ ಚೇತನ ಮೂರ್ತಿಗಳಾಗಿ ಬೆಳಗುತ್ತಿರುವ ಶ್ರೀ ಪ್ರಭು ಮಡಿವಾಳೇಶ್ವರ ಸೇವಾ ಕೈಂಕರ್ಯಗಳು ಅನನ್ಯ ಮತ್ತು ಅಪಾರವಾಗಿವೆ.ಇಂತಹ ಶರಣರ ಸೇವೆಯಲ್ಲಿ ಇಂದು ಇಡೀ ಗ್ರಾಮವೇ ಸಾಗಿ ಬರುತ್ತಿರುವುದು ಹೆಮ್ಮೆ ಪಡುವ ಸಂಗತಿ.ಪ್ರಯುಕ್ತ ಶರಣರ ಜನ್ಮಸ್ಥಾನವಾದ ಕಂದಗೋಳ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಶ್ರೀ ಗುರು ಶರಣ ಶಿವಯೋಗಿ ಪ್ರಭು ಮಡಿವಾಳೇಶ್ವರ 88ನೇ ಜಾತ್ರಾ ಮಹೋತ್ಸವವೂ ಸಕಲ ರೀತಿಯ ಸಿದ್ಧತೆಯೊಂದಿಗೆ ಶೃಂಗಾರಗೊಂಡಿದೆ. ದಿ.24-03-2024 ರಿಂದ 04-04-2024 ರ ವರೆಗೆ ರಾತ್ರಿ 9 ಗಂಟೆಯಿಂದ ವಿಶೇಷ ಸಂಗೀತ ಕಾರ್ಯಕ್ರಮ ಜರುಗಲಿದ್ದು.31-03-2024 ರಿಂದ 04-04-2024 ರ ಸಾಯಂಕಾಲ 7 ರಿಂದ 8 ಗಂಟೆಯವರೆಗೆ ಶ್ರೀ ಶ್ರೀ ಶ್ರೀ ಶೋ.ಬ್ರ.ನಾಗಲಿಂಗ ಮಾಹಾಸ್ವಾಮಿಗಳು, ಪೀಠಾಧಿಪತಿ ಶ್ರೀ ಶಿವಾನಂದ ಕೈಲಾಸ ಆಶ್ರಮ ಬ್ಯಾಲಹಳ್ಳಿ (ಕೆ) ಇವರಿಂದ ಪ್ರವಚನ ಕಾರ್ಯಕ್ರಮ ನಡೆಯಲಿದೆ.ಶುಕ್ರವಾರ ದಿ.05-04-2024 ರಂದು ಮುಂಜಾನೆ 8 ಗಂಟೆಗೆ ಗ್ರಾಮದಲ್ಲಿ ಶರಣರ ಪಲ್ಲಕ್ಕಿ ಉತ್ಸವದೊಂದಿಗೆ ಭವ್ಯವಾದ ಮೆರವಣಿಗೆ ಹಾಗೂ ವಚನ ಸಂಗೀತ ಭಜನೆಗಳೊಂದಿಗೆ ಐತಿಹಾಸಿಕವಾದಂತ ಪಥ ಸಂಚಲನ ಜರುಗಲಿದೆ. ಅಂದು ಮುಂಜಾನೆ 11 ಗಂಟೆಯಿಂದ ಸಾಯಂಕಾಲದ ವರೆಗೆ ಮಹಾಪ್ರಸಾದ ವ್ಯವಸ್ಥೆ ಇರುತ್ತದೆ. ಸಾಯಂಕಾಲ 7 ಗಂಟೆಯಿಂದ ಶ್ರೀ ಸದ್ಗುರು ಗುರುಬಾಬಾ ಮಾಹಾರಾಜ ಔಸಾಕರ್ ಇವರಿಂದ ಚಕ್ರಿ ಭಜನೆ ಜರುಗಲಿದೆ.ಭಜನೆ ಕಾರ್ಯಕ್ರಮದ ನೇತೃತ್ವವನ್ನು ಶ್ರೀ ಸದಾನಂದ ವಿಶ್ವಕರ್ಮ ರವರು ವಹಿಸಲಿದ್ದು,
ಸುತ್ತಮುತ್ತಲಿನ ಹಳ್ಳಿಗಳಿಂದ ಭಜನಾ ಕಲಾತಂಡಗಳು ಆಗಮಿಸಿ,ಸಂಗೀತ ಸೇವೆ ಉಣಬಡಿಸಲಿದ್ದಾರೆ ಎಂದು
ಸಮಿತಿ ಅಧ್ಯಕ್ಷ ಶಂಕ್ರಪ್ಪ ಶೇರಿ ತಿಳಿಸಿದ್ದಾರೆ.
ಶರಣ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ,ಶರಣರ ಕೃಪಾಶೀರ್ವಾದ ಪಡೆದು
ಪುನಿತರಾಗಿಬೇಕೆಂದು ಸಮಿತಿಯ ಪದಾಧಿಕಾರಿಗಳು ವಿನಂತಿಸಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ