ಬಾಗಲಕೋಟೆ/ರಬಕವಿ ಬನಹಟ್ಟಿ:
ಮುಸ್ಲಿಮರ ಪವಿತ್ರ ತಿಂಗಳುಗಳಲ್ಲಿ ರಂಜಾನ್ ತಿಂಗಳು ಬಹಳ ಮುಖ್ಯವಾದದ್ದು ವಿಶ್ವಾದ್ಯಂತ ಇಡೀ ತಿಂಗಳು ರೋಜಾ ಉಪವಾಸ,ಸೂರ್ಯ ಮುಳುಗಿದ ಮೇಲೆ ಆಹಾರ ಸೇವನೆ,ದಾನ ಧರ್ಮ ಈ ಪವಿತ್ರ ತಿಂಗಳಲ್ಲಿ ವಿಶೇಷವಾಗಿರುತ್ತದೆ.ಈ ಪವಿತ್ರ ತಿಂಗಳಲ್ಲಿ 30 ದಿನ ರೋಜೆ ಉಪವಾಸ ಮುಗಿದ ಮರು ದಿನವೇ ಈದ್ ಉಲ್ ಫಿತರ್ ಹಬ್ಬ ಇವತ್ತು ಗುರುವಾರ ಇಡೀ ರಾಜ್ಯದ್ಯಂತ ಸಂಭ್ರಮ ಸಡಗರದೊಂದಿಗೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಲಕ್ಷ್ಮೀನಗರದ ಅರೇಬಿಕ್ ಶಾಲಾ ಅವರಣದ ಈದ್ಗಾ ಮೈದಾನದಲ್ಲಿ ಅತಿ ಸಂಭ್ರಮದಿಂದ ಹಬ್ಬವನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೌಲಾನ ಮೊಹಮ್ಮದ್ ಜುಬೇರ್ ನಾಯಕ್ ವಾಡಿ ಜಗತ್ತು ಹಾಗೂ ಈಗಿನ ಪರಿಸ್ಥಿತಿಯೂ ನಮಗೆ ಕೈಬೀಸಿ ಕರೆತಾ ಇದೆ ಮುಸ್ಲಿಮರೇ ನಿಮಗೆ ಬೇಕಾಗಿರುವುದು ನಿಮ್ಮ ದಿನನಿತ್ಯ ಜೀವನ ಶೈಲಿಗಳನ್ನು ಬದಲಿಸಬೇಕು ಮುಸ್ಲಿಮರಿಗೆ ಬೇಕಾಗಿರುವುದು ಅಲ್ಲಾಹನ ಆಜ್ಞೆ ಹಾಗೂ ಪೈಗಂಬರರ ತತ್ವ ಸಿದ್ಧಾಂತಗಳನ್ನು ಅವಳಿಸಿಕೊಂಡು ನಿಜವಾದ ಮುಸ್ಲಿಮರು ಆಗಬೇಕು ಹಾಗೂ ಈಗಿನ ಪರಿಸ್ಥಿತಿಯ ಸಂದರ್ಭದಲ್ಲಿ ನಮಗೆ ಅವಕಾಶ ಕೊಡಿ ಬಂದಿದೆ ನಿಜವಾದ ಮುಸ್ಲಿಮನಾಗಬೇಕೆಂದರೆ ನಮ್ಮ ನಡವಳಿಕೆ ನಮ್ಮ ಚಲನವನ,ವ್ಯವಹಾರ,ದಿನನಿತ್ಯದ ಜೀವನ ಶೈಲಿಗಳನ್ನು ಬದಲಿಸಬೇಕಾಗಿದೆ.ಇವತ್ತಿನ ದಿನಮಾನಗಳಲ್ಲಿ ಜಗತ್ತು ಇಸ್ಲಾಂ ಹಾಗೂ ಮುಸ್ಲಿಮರನ್ನು ಕೆಂಗಣ್ಣಿನ ಮೂಲಕ ನೋಡುತ್ತಿದೆ. ಮುಸ್ಲಿಮರ ವಿರುದ್ಧ ಇಡೀ ಜಗತ್ತಿನಲ್ಲಿ ನಾಲ್ಕು ದಿಕ್ಕುಗಳಲ್ಲಿ ಇಸ್ಲಾಂ ಧರ್ಮವು ರಕ್ತಪಾತ , ಭಯೋತ್ಪಾದನೆ,ಕೊಲ್ಲುವುದು,ಬಡಿಯುವುದು ಕೇವಲ ಅಷ್ಟೇ ಬಯಸುತ್ತಿದೆ ಎಂದು ಸುಳ್ಳಿನ ಪ್ರೊಪಗೊಂಡ ಮೂಲಕ ಜಗತ್ತಿನ ಪ್ರತಿಯೊಬ್ಬ ಮನುಷ್ಯನ ಮೆದುಳಿನಲ್ಲಿ ಇಸ್ಲಾಂ ಧರ್ಮದ ವಿರುದ್ಧ ಹಾಗೂ ಮುಸ್ಲಿಮರ ವಿರುದ್ಧ ತಲೆಯಲ್ಲಿ ತುಂಬುತ್ತಿದ್ದಾರೆ ಇಸ್ಲಾಂ ಮತ್ತು ಮುಸ್ಲಿಮರು ಯಾವುದೇ ರೀತಿಯಲ್ಲಿ ಇಸ್ಲಾಂ ಧರ್ಮವು ಅಂತ್ಯವಾಗಬೇಕೆಂದು ಷಡ್ಯಂತ್ರ ಮಾಡಲಾಗುತ್ತಿದೆ . ಇವೆಲ್ಲವೂ ಇಸ್ಲಾಂ ಧರ್ಮದ ವಿರುದ್ಧ ಸುಳ್ಳಿನ ಪ್ರೊಪಗೊಂಡ ಮೂಲಕ ದ್ವೇಷ ಹರಡುಸ್ತಾ ಇದ್ದಾರೆ . ಆದರೆ ಇದಕ್ಕೆಲ್ಲ ಕಾರಣಗಳು ಮುಸ್ಲಿಮರು ನಾವು ಏಕೆಂದರೆ ಸತ್ಯವಾದ ನಿಜವಾದ ಇಸ್ಲಾಂ ಧರ್ಮದ ತತ್ವ ಸಿದ್ಧಾಂತಗಳನ್ನು ಇಡೀ ಜಗತ್ತಿಗೆ ತೋರಿಸಲು ನಾವು ವಿಫಲರಾಗಿದ್ದೇವೆ ಎಂದು ಹೇಳಿದರು.
ಹಬ್ಬದ ಸಂಭ್ರಮದ ನಡುವೆ ಮತ ಚಲಾವಣೆಯ ಕರೆ ಕೊಟ್ಟ ಮೌಲಾನ ಮಹಮ್ಮದ್ ಝುಬೇರ್ ನಾಯಕ್ ವಾಡಿ:
ಭಾರತ ದೇಶದ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಮತದಾನ ಮಾಡುವುದು ಅವಕಾಶ ಮಾಡಕೊಟ್ಟಿದ್ದು ಸಂವಿಧಾನ ನಿಜವಾದ,ಸತ್ಯವಾದ,
ಸಾಮಾಜಿಕ ಸೇವೆಯನ್ನು ಮಾಡುವಂತಹ ವ್ಯಕ್ತಿಯನ್ನು ಸಾಕ್ಷಿ ಹಾಗೂ ಆಯ್ಕೆ ಮೂಲಕ ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ವಾಗಿದೆ ಎಂದು ಒತ್ತಿ ಹೇಳಿದರು.
ವರದಿ:ಮಹಿಬೂಬ್ ಬಾರಿಗಡ್ಡಿ