ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶಾಂತಿ ಸೌಹಾರ್ದತೆಯ ಪ್ರತೀಕವಾದ ರಂಜಾನ್ ಯುಗಾದಿ

ಒ೦ದು ತಿಂಗಳ ಉಪವಾಸ ಆಚರಣೆ ಬಳಿಕ ಬರುವ ಈದ್ ಉಲ್ ಫಿತರ್ ಅಥವಾ ರಮಝಾನ್ ಹಬ್ಬ ಮುಸ್ಲಿಮರ ಪಾಲಿಗೆ ಅತ್ಯಂತ ಪ್ರಮುಖ ಮತ್ತು ಸಂಭ್ರಮದ ಹಬ್ಬ ಒಂದು ತಿಂಗಳು ಉಪವಾಸದ ಮೂಲಕ ಸ್ವತಃ ಹಸಿವನ್ನು ಅನುಭವಿಸಿದಾಗ ಬಡವರ ಮತ್ತು ನಿರ್ಗತಿಕರ ನೋವನ್ನು ಅರಿಯಲು ಸಾಧ್ಯವಾಗುತ್ತದೆ ಹೀಗಾಗಿ ಹೆಚ್ಚು ಹೆಚ್ಚು ದಾನ ಮಾಡುವ ಮತ್ತು ಜನರ ಕಷ್ಟಗಳಿಗೆ ಸ್ಪಂದಿಸುವ ಮನೋಭಾವ ಮೂಡುತ್ತದೆ. ನೆರೆಮನೆಯವನು ಹಸಿದಿರುವಾಗ ಹೊಟ್ಟೆ ತುಂಬಾ ಉಣ್ಣುವವನು ನಮ್ಮವನಲ್ಲವೆಂದು ಪ್ರವಾದಿ ಮುಹಮ್ಮದ್ (ಸ) ರು ಹೇಳಿದ್ದಾರೆ.

ಹೀಗಾಗಿ ನಮ್ಮಂತೆ ಬಡವರು ಸಹ ಹಬ್ಬ ಆಚರಿಸಲು ಸಾಧ್ಯವಾಗಲೂ ಪ್ರತಿಯೊಬ್ಬರು ಕಡ್ಡಾಯವಾಗಿ ಸದಖತುಲ್ ಫಿತ್ ರೂಪದಲ್ಲಿ ಎರಡೂವರೆ ಕೆಜಿ ಧಾನ್ಯ ಅಥವಾ ಅಷ್ಟೇ ಮೌಲ್ಯದ ಹಣವನ್ನು ದಾನದ ರೂಪದಲ್ಲಿ ಕೊಡದೆ ಹೋದಲ್ಲಿ ಅವನ ಈದ್ ಅಥವಾ ಹಬ್ಬ ಪರಿಪೂರ್ಣವಾಗುವುದಿಲ್ಲ.ಅದೇ ರೀತಿ ಝಕಾತ್ ಅಂದರೆ ಕಡ್ಡಾಯ ದಾನದ ರೂಪದಲ್ಲಿ ನಮ್ಮ ಭಾರತ ದೇಶದಲ್ಲೇ ಕೋಟಿಗಟ್ಟಲೆ ಹಣವನ್ನು ಬಡವರಿಗೆ ಈ ತಿಂಗಳಲ್ಲಿ ನೀಡಲಾಗುತ್ತದೆ.ಸರ್ವಧರ್ಮಿಯರು ತಮ್ಮ ತಮ್ಮ ಹಬ್ಬಗಳನ್ನು ಮತ್ತು ಧಾರ್ಮಿಕ ನಂಬಿಕೆಗಳನ್ನು ಮುಕ್ತವಾಗಿ ಆಚರಿಸಿಕೊಂಡು ಅದೇ ವೇಳೆ ಇತರ ಧರ್ಮಿಯರ ಆಚರಣೆ,ನಂಬಿಕೆ ಹಾಗೂ ಹಬ್ಬಗಳನ್ನು ಗೌರವಿಸಿಕೊಂಡು ಬಂದಿರುವ ಇತಿಹಾಸ ನಮ್ಮ ದೇಶದ್ದು ಆದರೆ ಇತ್ತೀಚೆಗೆ ರಾಜಕೀಯ ಮತ್ತು ಇನ್ನಿತರ ಕಾರಣಗಳಿಂದಾಗಿ ಪರಸ್ಪರ ಸ್ನೇಹ ಮತ್ತು ಪ್ರೀತಿಯ ಸಂಕೇತಗಳಾದ ಹಬ್ಬಗಳನ್ನೇ ಜನರಲ್ಲಿ ದ್ವೇಷ ಮತ್ತು ಅಸಹನೆ ಹರಡಲು ಮತ್ತು ಸಮುದಾಯಗಳ ನಡುವೆ ಕಂದಕಗಳನ್ನು ಸೃಷ್ಟಿಸಲು ಬಳಸಿಕೊಳ್ಳುತ್ತಿರುವುದು ದುರದುಷ್ಟಕರ ಮತ್ತು ದುಃಖದ ವಿಷಯವಾಗಿದೆ. ವಿವಿಧ ಧರ್ಮಿಯರು ಮತ್ತು ಸಮುದಾಯದವರು ಹೆಚ್ಚು ಹೆಚ್ಚು ಬೆರೆತು ಪರಸ್ಪರ ಅರಿತು ಪ್ರೀತಿ ವಿಶ್ವಾಸ ಬೆಳೆದಲ್ಲಿ

ಮಾತ್ರ ನಮ್ಮ ನಡುವಿನ ಅಪನಂಬಿಕೆಗಳು ಕಡಿಮೆಯಾಗಲು ಸಾಧ್ಯ. ಇಡೀ ಮನುಕುಲವು ಒಬ್ಬ ಪುರುಷ ಮತ್ತು ಸ್ತ್ರೀಯಿಂದ ಸೃಷ್ಟಿಸಲಾಗಿದ್ದು, ನಮ್ಮನ್ನು ವಿವಿಧ ಜನಾಂಗ ಮತ್ತು ಪಂಗಡಗಳಾಗಿ ರೂಪಿಸಿರುವುದು ಪರಸ್ಪರ ಗುರುತಿಸಲು ಹೊರತು ಅದರ ಆಧಾರದ ಮೇಲೆ ಯಾರೂ ಕೀಳು ಮತ್ತು ಶ್ರೇಷ್ಠರಲ್ಲವೆಂದು ಪವಿತ್ರಕುರ್ ಆನ್ ನಮಗೆ ತಿಳಿಸುತ್ತದೆ.
‘ಮಾನವರೇ, ಖಂಡಿತವಾಗಿಯೂ ನಾವು ನಿಮ್ಮೆಲ್ಲರನ್ನೂ ಒಬ್ಬ ಪುರುಷ ಹಾಗೂ ಒಬ್ಬ ಸ್ತ್ರೀಯಿಂದ ಸೃಷ್ಟಿಸಿರುವೆವು.ತರುವಾಯ,ನೀವು ಪರಸ್ಪರ ಗುರುತಿಸುವಂತಾಗಲು ನಿಮ್ಮನ್ನು (ವಿವಿಧ) ಜನಾಂಗಗಳಾಗಿ ಹಾಗೂ ಪಂಗಡಗಳಾಗಿ ರೂಪಿಸಿರುವೆವು. ಅಲ್ಲಾಹನ ದೃಷ್ಟಿಯಲ್ಲಿ ನಿಮ್ಮ ಪೈಕಿ ಅತ್ಯಧಿಕ ಧರ್ಮನಿಷ್ಠನಾಗಿರುವವನೇ ನಿಮ್ಮಲ್ಲಿನ ಅತ್ಯುತ್ತಮನಾಗಿರುವನು.ಅಲ್ಲಾಹನು ಖಂಡಿತವಾಗಿಯೂ ಬಲ್ಲವನು ಹಾಗೂ ಅರಿವು ಉಳ್ಳವನಾಗಿದ್ದಾನೆ.(ಪವಿತ್ರ ಕುರ್ ಆನ್) ದೇಶವೆಂದರೆ ಕೇವಲ ಭೂಪಟದಲ್ಲಿಈದ್
ಎಳೆದುಕೊಂಡಿರುವ ಕೆಲವು ರೇಖೆಗಳು ಮಾತ್ರವಲ್ಲ ಬದಲಾಗಿ ಅಲ್ಲಿ ವಾಸವಾಗಿರುವ ವಿವಿಧ ಜನರ ಐಕ್ಯತೆಯ ಸಂಕೇತ. ಅವರಲ್ಲಿ ಪ್ರೀತಿ ಮತ್ತು ವಿಶ್ವಾಸ ಮೂಡಿಸುವುದು ಮತ್ತು ಪ್ರತಿಯೊಬ್ಬರನ್ನು ಜೊತೆಯಲ್ಲಿ ಕೊಂಡೊಯ್ಯುವುದೇ ನೈಜ ದೇಶಪ್ರೇಮ ತಮ್ಮದೇ ದೇಶದ ಜನರನ್ನು ದ್ವೇಷಿಸಿ ಯಾರೂ ಸಹ ದೇಶಪ್ರೇಮಿಗಳಾಗಲು ಸಾಧ್ಯ ವಿಲ್ಲ. ಜನರಲ್ಲಿ ಶಾಂತಿ ಮತ್ತು ಸಹಬಾಳ್ವೆ ಇಲ್ಲದೇ ಯಾವ ದೇಶವೂ ಒಂದು ಜಾಗತಿಕ ಶಕ್ತಿಯಾಗಿ ಬೆಳೆಯಲು ಸಾಧ್ಯವಿಲ್ಲ. ಐಕ್ಯತೆ ಎಂದರೆ ಎಲ್ಲಾ ಜನರ ಸಂಸ್ಕೃತಿ, ಆಚರಣೆ, ನಂಬಿಕೆಗಳು ಒಂದೇ ಆಗಿರಬೇಕೆಂದಲ್ಲ ಬದಲಾಗಿ ವಿವಿಧ ಸಂಸ್ಕೃತಿ,ಆಚರಣೆ ಹಾಗೂ ನಂಬಿಕೆಗಳೊಂದಿಗೆ ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಗೌರವದೊಂದಿಗೆ ಬಾಳುವುದಾಗಿದೆ.ಹೀಗೆ ವಿವಿಧತೆಯಲ್ಲಿ ಏಕತೆಯನ್ನು ಕಾಣುವುದೇ ನಮ್ಮ ದೇಶದ ವಿಶೇಷತೆ ಯಾಗಿದೆ.ಒಂದು ತಿಂಗಳು ಕಠಿಣ ಉಪವಾಸದ ಬಳಿಕ ಕೇವಲ ಶಾರೀರಿಕ ಕಲ್ಮಷಗಳಷ್ಟೆ ಅಲ್ಲ ಅಸಹನೆ,ಅವಿಶ್ವಾಸ,ಅಸೂಯೆ ಇತ್ಯಾದಿಗಳಂತಹ ಹೃದಯದ ಕಲ್ಮಷ ಗಳು ದೂರವಾಗಿ ಸಂಯಮ,ಸಹನೆ ಮತ್ತು ಎಲ್ಲರಿಗಾಗಿ ಪ್ರೀತಿ ನಮ್ಮಲ್ಲಿ ಮೂಡಿರುತ್ತೆ ಇದು ಕೇವಲ ಒಂದು ತಿಂಗಳಿಗೆ ಸೀಮಿತವಾಗಿರದೆ ಇಡೀ ವರ್ಷದವರೆಗೂ ನಮ್ಮ ಮನಸ್ಸು ಹೀಗೆಯೇ ಶುಭ್ರವಾಗಿರ ಬೇಕೆಂಬುದೇ ಈದುಲ್ ಫಿತ್ ಹಬ್ಬದ ನೈಜ ಸಂದೇಶವಾಗಿದೆ.ಯಾರ ಉಪಟಳದಿಂದ ನೆರೆಮನೆಯವರು ಸುರಕ್ಷಿತರಲ್ಲವೋ ಅವರು ಸತ್ಯವಿಶ್ವಾಸಿಯಲ್ಲ ಎಂದು ಪ್ರವಾದಿ ಮುಹಮ್ಮದ್ (ಸ)ರು ಹೇಳಿದ್ದಾರೆ.ಹೀಗಾಗಿ ನಮ್ಮ ಹಬ್ಬಗಳ ಆಚರಣೆ ಗಳಿಂದ ಯಾರಿಗೂ ಸಣ್ಣಪುಟ್ಟ ತೊಂದರೆಯೂ ಸಹ ಆಗದಿರಲಿ.
ಎರಡು ದಿನಗಳ ಹಿಂದೆ ಹಿಂದೂಗಳು ಹೊಸ ವರ್ಷವೆಂದು ಆಚರಿಸುವ ಯುಗಾದಿ ಹಬ್ಬವು ಬಂದದ್ದು ವಿಶೇಷ ಹೀಗಾಗಿ,ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುವ ಮತ್ತೊಂದು ಸದಾವಕಾಶ ನಮ್ಮದು.ಈದುಲ್ ಫಿತ್‌ನ ಈ ಶುಭ ಸಂದರ್ಭದಲ್ಲಿ ಎಲ್ಲೆಡೆ ಶಾಂತಿ ನೆಲೆಸಲಿ ಮತ್ತು ನಮ್ಮ ದೇಶ ಅಭಿವೃದ್ಧಿಯ ಪಥದಲ್ಲಿ ಮುಂದೆ ಸಾಗಲೆಂದು ಪ್ರಾರ್ಥಿಸೋಣ. ದ್ವೇಷ ಮತ್ತು ಅಪನಂಬಿಕೆಗಳ ಸಣ್ಣಪುಟ್ಟ ಗೋಡೆಗಳನ್ನು ಪ್ರೀತಿ,ವಿಶ್ವಾಸ ಮತ್ತು ಪರಸ್ಪರ ಅರಿಯುವ ಮೂಲಕ ತೊಡೆದು ಹಾಕಲು ನಮ್ಮ ಹಬ್ಬಗಳು ಸಹಕಾರಿಯಾಗಲಿ ಎಂದು ಆಶಿಸೋಣ ಈ ಹಬ್ಬವನ್ನು ಬಹಳ ವರ್ಷಗಳಿಂದಲೂ ಹಿಂದು ಮುಸ್ಲಿಂ ಕೂಡಿ ಚಂದ್ರನು ನೋಡುವ ಕೂಡಿ ಹಬ್ಬ ಮಾಡುವ ಹಬ್ಬವೆಂದರೆ ಅದುವೇ ಮುಸ್ಲಿಮರಿಗೆ ರಂಜಾನ್ ಹಿಂದುಗಳಿಗೆ ಯುಗಾದಿ.

ಫೋಟೋ:
ಈ ಇಬ್ಬರು ಪರಸ್ಪರ ಹಬ್ಬವನ್ನು ಹಂಚಿಕೊಳ್ಳುತ್ತಿರುವ ಕ್ಷಣಗಳು ಜಾಗಿರ್,ಪರಶುರಾಮ್

ವರದಿ-ಪ್ರಭಾಕರ ಡಿ ಎಂ ಹೊನ್ನಾಳಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ