ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶೀರ್ಷಿಕೆ:ಪವಿತ್ರ ರಂಜಾನ್ ಹಬ್ಬ

ಸುಡು ಬಿಸಿಲಿನ ತಾಪವು ತಾರಕೇರಿದರು
ಲೆಕ್ಕಿಸದೆ ಮುಸ್ಲಿಂ ಬಾಂಧವರು
ತಿಂಗಳ ಉಪವಾಸ ಮಾಡುವರು
ಅಲ್ಲಾಹನ ಕೃಪೆಯಿಂದ ಇರುವರು//

ಸೂರ್ಯೋದಯ ಆಗುವ ಮೊದಲು
ಉಪವಾಸ ಆಚರಣೆ ಮಾಡುವವರು
ಸೂರ್ಯಅಸ್ತವಾದಗ ರೋಜಾ ಬಿಡುವರು
ಕರುಣಾಮಯಿ ಅಲ್ಲಾಹನ ಸಂದೇಶ ಸಾರುವರು//

ಈದ್-ಉಲ್-ಫಿತರ್ ಸಾರುವರು
ಸಮಾನತೆ ಸುಖ ಶಾಂತಿ ಬೆಸೆಯಲಿ
ಸಮಸ್ತರಲ್ಲಿ ಭ್ರಾತೃತ್ವದ ಭಾವನೆ ಮೂಡಲಿ
ಬೇಧ ಭಾವ ಮಾಡದೆ ಉಳಿಯಲಿ//

ಕುಟುಂಬದವರು ಸೇರಿ ಪ್ರಾರ್ಥನೆ
ರಹೀಮ್ ರಫೀಕ್ ರಾಜಿಯ ಹಬ್ಬ
ಹೊಸ ಬಟ್ಟೆ ತೊಟ್ಟು ಖುಷಿಪಡುವ ಹಬ್ಬ
ಸಿಂಗರ ಸಡಗರ ಸಂಭ್ರಮಿಸುವ ಹಬ್ಬ//

ಪ್ರೀತಿ ವಿಶ್ವಾಸ ಮಮತೆಯ ಹಬ್ಬ
ದುಃಖವು ಮರೆತು ಬದುಕುವು ಹಬ್ಬ
ಚಂದ್ರನ ದರ್ಶನ ಪಡೆಯುವ ಹಬ್ಬ
ಉಪವಾಸ ಗೆದ್ದ ರಂಜಾನ್ ದಿನದ ಹಬ್ಬ//

-ಮಹಾಂತೇಶ ಖೈನೂರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ