ಸೊರಬ:ರಾಷ್ಟ್ರದ ಅಭಿವೃದ್ಧಿಗೆ ಹೆಣ್ಣು ಮಕ್ಕಳ ಶಿಕ್ಷಣ ಅತ್ಯವಶ್ಯಕವಾಗಿದ್ದು,ಸುಸ್ಥಿರ ಅಭಿವೃದ್ಧಿಯ ಗುರಿ ಸಾಧಿಸಬೇಕಾದರೂ ಎಲ್ಲರೂ ಶಿಕ್ಷಣ ಮತ್ತು ಕೌಶಲ್ಯವನ್ನು ಕಲಿತು ಅದನ್ನು ತಮ್ಮ ಬದುಕಿನಲ್ಲಿ ಆಳವಡಿಸಿಕೊಳ್ಳುವಂತೆ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಮತ್ತು ಸಮಾಜ ಸೇವಕ ಡಿ.ಎಸ್.ಶಂಕರ್ ಶೇಟ್ ಕರೆ ನೀಡಿದರು.
ಗುರುವಾರ ಪಟ್ಟಣದ ಗುರುಕುಲ ವಿದ್ಯಾ ಸಂಸ್ಥೆಯಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ದ್ವಿತೀಯ ಪಿಯುಸಿಯಲ್ಲಿ ತಾಲೂಕಿನಲ್ಲಿ ಅತೀ ಹೆಚ್ಚು ಅಂಕ ಗಳಿಸಿ,ಕೀರ್ತಿಗೆ ಭಾಜನರಾದ ಅನವಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅನುಷ ತಲಗಡ್ಡೆ (ವಾಣಿಜ್ಯ-96.16),ದಿವ್ಯ ಕುಣೆತೆಪ್ಪ (ಕಲಾ-96) ಮತ್ತು ಬಿಂದು ಬೆಟ್ಟದಕೂರ್ಲಿ (ವಿಜ್ಞಾನ-94.66) ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಸಾಧಿಸುವ ಛಲ ಬೆಳೆಸಿಕೊಂಡರೆ ಸಾಧನೆ ಯಶಸ್ವಿಯಾಗಲು ಸಹಾಯಕವಾಗುತ್ತದೆ.ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಸಾಧನೆ ಮೆಚ್ಚುವಂತದ್ದು. ಪ್ರತಿ ಬಾರಿಯೂ ಫಲಿತಾಂಶದಲ್ಲಿ ಆನವಟ್ಟಿ ಸರ್ಕಾರಿ ಕಾಲೇಜು ಉತ್ತಮ ಸಾಧನೆ ಮಾಡುತ್ತಾ ಬರುತ್ತಿದೆ. ಸಾಧನೆ ಮಾಡಲು ಸಹಕರಿಸಿದ ಎಲ್ಲರಿಗೂ ಅಭಿನಂದಿಸಿದರು.ಪಿಯು ಪರೀಕ್ಷೆಯಲ್ಲಿ ಹೆಣ್ಣು ಮಕ್ಕಳ ಸಾಧನೆ ಹೆಚ್ಚಳವಾಗಿದೆ.ಹೆಣ್ಣು ಮಕ್ಕಳನ್ನು ಅತ್ಯಂತ ನಿಕೃಷ್ಟವಾಗಿ ಅಸಡ್ಡೆಯಿಂದ ಕಾಣುತ್ತಿರುವ ಸಂದರ್ಭಗಳು ಇದ್ದವು ಇವುಗಳನ್ನು ಮೆಟ್ಟಿ ನಿಲ್ಲುವ ಮೂಲಕ ಆತ್ಮ ವಿಶ್ವಾಸದಿಂದ ಸಾಧನೆ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ಎಂದರು.
ಸಂಗೀತ ವಿದುಷಿ ಲಕ್ಷ್ಮೀ ಮುರುಳೀಧರ್ ಮಾತನಾಡಿ, ವಿದ್ಯಾದಿ ದೇವತೆ ಶಾರದೆಯು ಸ್ತೀಯಾಗಿದ್ದಾಳೆ. ವಿದ್ಯೆ ಸಾಧನೆ ಮಾಡುವವರ ಸ್ವತ್ತಾಗಿದ್ದು, ಕಠಿಣ ಪರಿಶ್ರಮದಿಂದ ಇದು ಸಾಧ್ಯ.ಸಾಧನೆ ಮಾಡಿದ ಮಕ್ಕಳು ವಿನಯದಿಂದ ಇನ್ನು ಹೆಚ್ಚಿನ ಸಾಧನೆ ಮಾಡಲು ಮುಂದಾಗಬೇಕು ಎಂದರು.
ಉಪನ್ಯಾಸಕ ಉಮೇಶ ಭದ್ರಾಪುರ ಮಾತನಾಡಿ, ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಇದು ತಿರುವಿನ ಘಟ್ಟವಾಗಿದ್ದು,ಮುಂದೆ ಹೆಚ್ಚಿನ ಶಿಕ್ಷಣ ಪಡೆಯಲು ಮುಂದಾಗುವOತೆ ಕರೆ ನೀಡಿದರು.
ಅಕ್ಕನ ಬಳಗದ ರೇಣುಕಮ್ಮ ಗೌಳಿ ಮಾತನಾಡಿ, ಸಾಧನೆಗೈದ ಈ ಮಕ್ಕಳಿಗೆ ಪೋಷಕರು ಇನ್ನೂ ಹೆಚ್ಚಿನ ಕೊಡಿಸಿ ರಾಷ್ಟ್ರದ ಅಭಿವೃದ್ಧಿಗೆ ಕಾರಣಕರ್ತರಾಗಬೇಕೆಂದರು.
ಗುರುಕುಲ ವಿದ್ಯಾ ಸಂಸ್ಥೆಯ ಸತೀಶ್ ಬೈಂದೂರು ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಮಹೇಶ್ ಖಾರ್ವಿ, ರಂಗನಾಥ ಮೊಗವೀರ,ಸಂಪತ್ ಕುಮಾರ್,ಲಕ್ಷ್ಮಿ ಮುರಳೀಧರ, ರೇಣುಕಮ್ಮ ಗೌಳಿ,ನೇತ್ರಾವತಿ,ಪೋಷಕರಾದ ಅಶೋಕ್,ಸವಿತಾ,ಯಲ್ಲಪ್ಪ,ಲೀಲಾ,ಶೈಲಜಾ, ಭೀಮಪ್ಪ,ಜಗದೀಶ್ ಮತ್ತಿತರರಿದ್ದರು.
-ಸಂದೀಪ ಯು.ಎಲ್,ಕರುನಾಡ ಕಂದ ನ್ಯೂಸ್ ಸೊರಬ