ಹನೂರು:ಇಡೀ ಪ್ರಪಂಚವೇ ಭಾರತದತ್ತ ತಿರುಗಿ ನೋಡುವಂತೆ ಹಲವಾರು ಜನಪ್ರಿಯ ಕಾರ್ಯಕ್ರಮಗಳನ್ನು ಮಾಡಿ ಬಡವರ ಪರ ನ್ಯಾಯದ ಪರ ಕೆಲಸ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಮೂರನೇ ಬಾರಿ ಪ್ರಧಾನಿಯಾಗುವುದನ್ನು ಹರಿ ಹರ ಬ್ರಹ್ಮ ಬಂದರೂ ತಪ್ಪಿಸಲು ಸಾಧ್ಯವಿಲ್ಲ ಎಂದು ಹನೂರು ಪಟ್ಟಣದಲ್ಲಿ ನಡೆದ ಬಿಜೆಪಿ ಜೆಡಿಎಸ್ ಮೈತ್ರಿ ಪಕ್ಷದ ರೋಡ್ ಶೋ ಕಾರ್ಯಕ್ರಮದಲ್ಲಿ ಚಾಮರಾಜನಗರ ಲೋಕಸಭಾ ಅಭ್ಯರ್ಥಿ ಎಸ್ ಬಾಲರಾಜ್ ಮಾತನಾಡಿದರು.
ಪಟ್ಟಣದ ಆರ್ ಎಂ ಸಿ ಅವರಣದಿಂದ ಬೃಹತ್ ರೋಡ್ ಶೋ ನಡೆಸಿ ಡಾ ಬಿ ಆರ್ ಅಂಬೇಡ್ಕರ್ ರವರ ಪುತ್ತಳಿಗೆ ಬಿಜೆಪಿ ರಾಜ್ಯಧ್ಯಕ್ಷ ಬಿ ವೈ ವಿಜಯೇಂದ್ರ ಜೆಡಿಎಸ್ ಶಾಸಕ ಎಂ ಆರ್ ಮಂಜುನಾಥ್ ಸೇರಿ ಮುಖಂಡರುಗಳಾದ ಜನಧ್ವನಿ ವೆಂಕಟೇಶ್,ಪ್ರೀತನ್,ನಿಶಾಂತ್ ಇನ್ನಿತರರು ಮಾಲಾರ್ಪಣೆ ಮಾಡಿದರು.
ನಂತರ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಬಿಜೆಪಿ ಅಭ್ಯರ್ಥಿ ಬಾಲರಾಜ್ ಮಾತನಾಡಿ ಬಡವರ ಕಲ್ಯಾಣಕ್ಕಾಗಿ ದುಡಿದ ಕುಟುಂಬ ನನ್ನದು ನಾನು ದಿನದ 24 ಗಂಟೆಯು ನಿಮ್ಮ ಕಷ್ಟಕ್ಕೆ ಜೊತೆಯಾಗಿ ಇರುತ್ತೇನೆ ನಿಮ್ಮ ಉದ್ದಾರಕ್ಕಾಗಿ ನಾನು ಇರ್ತೀನಿ ಎಷ್ಟೋತ್ತಿನ ರಾತ್ರಿ ಸಮಯದಲ್ಲಿ ನನ್ನ ಮನೆಯ ಬಾಗಿಲನ್ನು ತಟ್ಟಿದರು ನಾನು ನಿಮ್ಮ ಸೇವೆ ಮಾಡಲು ಸಿದ್ದನಿದ್ದೇನೆ.ಕಾಂಗ್ರೆಸ್ ಜನರನ್ನು ಹಾಳು ಮಾಡುವುದಕ್ಕೆ ಗ್ಯಾರೆಂಟಿ ಯೋಜನೆಗಳನ್ನು ನೀಡುತ್ತಿದ್ದಾರೆ.ಒಂದು ಕೆಜಿ ಅಕ್ಕಿಯನ್ನು ಕಾಂಗ್ರೆಸ್ ಕೊಟ್ಟಿಲ್ಲ ನಮ್ಮ ಕೇಂದ್ರ ಬಿಜೆಪಿ ಪಕ್ಷ 5 ಕೆಜಿ ಅಕ್ಕಿಯನ್ನು ಕೊಡುತ್ತ ಇರೋದು ದಲಿತರಿಗೆ ಮಿಸಲಿದ್ದ ಎಸ್ ಇ ಪಿ,ಟಿ ಎಸ್ ಪಿ,ಹಣವನ್ನು ಕಾಂಗ್ರೆಸ್ ದುರುಪಯೋಗ ಮಾಡುತ್ತಿದ್ದಾರೆ ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿಯಾಗಿ ಮಾಡಲು ನನ್ನನ್ನು ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಜಯಶೀಲರನ್ನಾಗಿ ಮಾಡಿ ಎಂದು ಮಾತನಾಡಿದರು.
ಬಿಜೆಪಿ ರಾಜ್ಯದಕ್ಷ ಬಿ ವೈ ವಿಜೇಯೇಂದ್ರ ಮಾತನಾಡಿ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕರು ಜೆಡಿಎಸ್ ಅಭ್ಯರ್ಥಿ ಎಂ ಆರ್ ಮಂಜುನಾಥ್ ನವರು ಐತಿಹಾಸಿಕ ಗೆಲುವನ್ನು ಸಾಧಿಸಿದ್ದಾರೆ ಜೆಡಿಎಸ್ ಜೊತೆ ಮೈತ್ರಿಯಾಗಿರುವವುದು ನಮಗೆ ಒಳ್ಳೆಯ ಅವಕಾಶ ಹನೂರು ಕ್ಷೆತ್ರದಲ್ಲಿ ಜೆಡಿಎಸ್ ಬೆಂಬಲಿಸಿ ಮತನೀಡಿ ಮಂಜುನಾಥ್ ಗೆಲ್ಲಿಸಿದ್ದೀರಿ ಅದೇ ರೀತಿ ಬಾಲರಾಜ್ ರವರನ್ನು ಉತ್ತಮ ಲೀಡ್ ನಲ್ಲಿ ಮತಗಳಿಸುವ ನಿಟ್ಟಿನಲ್ಲಿ ಮಂಜುನಾಥ್ ಮತ್ತು ಬೆಂಬಲಿಗರು ಕೆಲಸ ಮಾಡುತ್ತಾರೆ ಎಂದರಲ್ಲದೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದ ಸರ್ಕಾರದಿಂದ ಹನೂರು ಕೊಳ್ಳೇಗಾಲ ರಸ್ತೆ ಅಭಿವೃದ್ಧಿ ಆಗಬೇಕು ಎಂದುಕೊಂಡು 120 ಕೋಟಿ ಅನುದಾನ ನೀಡಿದ್ದರು ಅದು ಈಗ ಪೂರ್ಣಗೊಂಡಿದೆ.ಹಲಗಾಪುರ ಮತ್ತು ಮಾರ್ಟಳ್ಳಿ ಭಾಗದ ರೈತರಿಗೆ 150 ಕೋಟಿ ರೂ ಅನುದಾನದಲ್ಲಿ ಮುಂದಿನ ದಿನಗಳಲ್ಲಿ ಶಾಶ್ವತ ನೀರು ಪೂರೈಸುವ ಭರವಸೆ ನೀಡಿದರು.ರಾಜ್ಯದ 28 ಕ್ಷೇತ್ರದಲ್ಲಿ ನಮ್ಮ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಗೆಲ್ಲುತ್ತೆವೆ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಕಾಂಗ್ರೆಸ್ ಸರ್ಕಾರ ಬಂದಾಗಿಂದ ಜನರನ್ನು ಹಾಳು ಮಾಡುತ್ತಿದ್ದಾರೆ ಉಚಿತ ಬಸ್ ಪ್ರಯಾಣ ಮಾಡಿದ್ದಾರೆ ಗಂಡಸರಿಗೆ ಹೋಗೋದು ಕಷ್ಟವಾಗಿದೆ ಮದ್ಯದ ಬಾಟಲಿಗಳಿಗೆ 50 ರಿಂದ 100 ರೂ ಜಾಸ್ತಿ ಮಾಡಿದ್ದಾರೆ ಒಂದ್ ಕೈಯಲ್ಲಿ ಕಿತ್ತುಕೊಂಡು ಮತ್ತೊಂದು ಕೈಗೆ ಕೊಟ್ಟು
ಗ್ಯಾರಂಟಿ ನಾಟಕ ಆಡಿ ಜನರ ಕಣ್ಣಿಗೆ ಮಣ್ಣು ಏರೆಚುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದರು.
ಜನಧ್ವನಿ ವೆಂಕಟೇಶ್ ಮಾತನಾಡಿ ನರೇಂದ್ರ ಮೋದಿಜಿ ಪ್ರಧಾನಿಯಾದ ಮೇಲೆ ಆರ್ಟಿಕಲ್ 371 ರದ್ದು ಮಾಡಿ ಜಮ್ಮು ಕಾಶ್ಮೀರದಲ್ಲಿ ಹೊರಗಿನವರು ಜಾಗ ಖರೀದಿ ಮಾಡಲು ಆಗುತ್ತಿರಲಿಲ್ಲ ಈಗ ದೇಶದ ಯಾವ ರಾಜ್ಯದವರಾದರೂ ಅಲ್ಲಿ ಜಾಗ ಕೊಂಡುಕೊಳ್ಳಬಹುದು ಅಂತಹ ಐತಿಹಾಸಿಕ ಸಾಧನೆಯನ್ನು ನರೇಂದ್ರ ಮೋದಿ ಮಾಡಿದ್ದಾರೆ.ಚಿಕ್ಕ ಮಕ್ಕಳು ಕೂಡ ಮೋದಿರವರ ಬಿಜೆಪಿ ಸರ್ಕಾರ ನಮಗೆ ಬೇಕು ಅಂತಿದ್ದಾರೆ ಆಗಾಗಿ ಬಿಜೆಪಿ ಪಕ್ಷ ಬೆಂಬಲಿಸಿ ಬಾಲರಾಜ್ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಜಯಶೀಲರನ್ನಾಗಿ ಮಾಡಿ ವಿಜಯೇಂದ್ರ ಅವರ ಕೈ ಬಲ ಪಡಿಸೋಣ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನಿರಂಜನ್ ಕುಮಾರ್,ಮಾಜಿ ಸಚಿವ ಎನ್ ಮಹೇಶ್,ಮಾಜಿ ಶಾಸಕ ಮಲ್ಲಿಕಾರ್ಜುನಪ್ಪ,ಹನೂರು ಶಾಸಕರಾದ ಎಂ ಆರ್ ಮಂಜುನಾಥ್,ಮುಖಂಡರುಗಳಾದ ಡಾ.ದತ್ತೇಶ್ ಕುಮಾರ್,ನಿಶಾಂತ್,ಪ್ರೀತನ್ ನಾಗಪ್ಪ,ಮಲೆ ಮಹದೇಶ್ವರ ಬೆಟ್ಟ ಮಂಡಲ ಅಧ್ಯಕ್ಷ ಚಂಗವಾಡಿ ರಾಜು ಹಾಗೂ ಜೆಡಿಎಸ್ ಬಿಜೆಪಿ ಕಾರ್ಯಕರ್ತರು ಇನ್ನಿತರ ಮುಖಂಡರುಗಳು ಹಾಜರಿದ್ದರು.
ವರದಿ:ಉಸ್ಮಾನ್ ಖಾನ್