ಹೆಣ್ಣೇ ನೀನೇನು ಸೌಂದರ್ಯದ ಗಣಿಯಲ್ಲ
ನೀನು ಅಂತರಂಗದಲ್ಲಿ ಸೌಂದರ್ಯದ ಅರಗಿಣಿ
ಹೃದಯವೊಂದು ಚಿನ್ನದ ಗಣಿ
ನಿನ್ನ ಕಣ್ಣುಗಳೇನು ಅಯಸ್ಕಾಂತವಲ್ಲ
ನನ್ನ ಸೋಲಿಸಿದ್ದೆ ನಿನ್ನ ಮಾದಕ ನೋಟ
ನೀನೇನು ಇಂಪಾಗಿ ಗಾನ ಕೋಗಿಲೆಯಲ್ಲ
ನಿನ್ನ ಕಂಠ ಕೋಗಿಲೆ ಹಾಡಿಗಿಂತ ಇಂಪು
ನೀನೇನು ಹಿಮಾಲಯವಲ್ಲ
ನೀನಿದ್ದರೆ ಸುಡುವ ಬಿಸಿಲಿನಲ್ಲಿದ್ದರೂ
ಈ ಜೀವ ತಂಪಾಗಿರುವುದು ಗೆಳತಿ
ಉಳಿದವರು ಕಂಡಂತೆ
ನೀನು ಜ್ಞಾನದ ಪುಸ್ತಕವಲ್ಲ
ನಾನು ಕಂಡಂತೆ ನೀನು
ನನ್ನ ಪಾಲಿನ ಗ್ರಂಥಾಲಯ ಗೆಳತಿ
ಹಿಮಗಿರಿ ನೀನೂಂದು ಜ್ಞಾನ ಸಾಗರ
ನಿನ್ನ ಜೊತೆ ಕಾಲಕಳೆಯುವುದೆ ಬಲುಹಿತ
ಹಿಂದೂ ಸಂಪ್ರದಾಯದಂತೆ
ಹಣೆಗೆ ಕುಂಕುಮ,ಮುಡಿಗೆ ಜಾಜಿಮಲ್ಲಿಗೆ,
ಹಸಿರು ಸೀರೆಯುಟ್ಟಾಗ ನೀನು ಮಹಾಲಕ್ಷ್ಮಿ
ನೀ ನಗು ನಗುತ್ತಿರು ಚೆಲುವೆ ಅನುಗಾಲ
ನಾನಿರುವೆ ನಿನ್ನ ಬಾಳಿನಲ್ಲಿ ಚಿರಕಾಲ
-ವಿ.ಶ್ರೀನಿವಾಸ
ವಾಣಿಗರಹಳ್ಳಿ.