ಶಹಾಪುರ:ಹುಬ್ಬಳ್ಳಿ ಎಂ.ಸಿ.ಎ ವಿದ್ಯಾರ್ಥಿನಿ ನೇಹಾ ಹೀರೆಮಠ ಕೊಲೆ ಪ್ರಕರಣ ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆಯಾಗಿದೆ.
ನೇಹಾಳ ಕೊಲೆ ಮಾಡುವ ಮೂಲಕ ಪ್ರೇಮಿ ವಿಕೃತಿ ಮೆರೆದಿರುವ ಫಯಾಜ್ ಆರೋಪಿಗೆ ಉಗ್ರವಾದ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬೋವಿ ವಡ್ಡರ್ ಸಮಾಜದ ತಾಲೂಕ ಅಧ್ಯಕ್ಷ ಪರಶುರಾಮ ವಡ್ಡರ್ ಇದು ಮಾನವ ಕುಲಕ್ಕೆ ಮಾರಕ ಎಂದು ಆಗ್ರಹಿಸಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ನೀಡಿರುವ ಅವರು ಆರೋಪಿ ಫಯಾಜ್ ಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಭವಿಷ್ಯದಲ್ಲಿ ಇನ್ನೂ ಮುಂದೆ ಇಂತಹ ದುರ್ಘಟನೆಗಳು ಮರುಕಳಿಸದಂತೆ ಉಗ್ರವಾದ ಕಠಿಣ ಸಂದೇಶ ರವಾನಿಸಬೇಕು,ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಮತ್ತು ನೇಹಾ ಕುಟುಂಬಕ್ಕೆ ರಾಜ್ಯ ಸರ್ಕಾರ ನ್ಯಾಯ ಒದಗಿಸಬೇಕು,ಈ ದುರ್ಘಟನೆಯಿಂದಾಗಿ ಪ್ರಜ್ಞಾವಂತ ಸಮಾಜವೇ ತಲೆ ತಗ್ಗಿಸುವಂತಾಗಿದೆ ಎಂದು ಹೇಳಿದರು.
ಇಡೀ ಮಹಿಳಾ ವಲಯದಲ್ಲಿ ತೀವ್ರ ಆತಂಕ ಮೂಡಿಸಿದೆ.ಹಿಂದಿನ ದಿನಗಳಲ್ಲಿ ಮಹಿಳೆಯರಿಗೆ ರಕ್ಷಣೆ ನೀಡುವ ಕಾನೂನು ರೂಪಿಸಬೇಕು ಮತ್ತು ಆರೋಪಿಗೆ ಗಂಭೀರ ಸ್ವರೂಪದ ಶಿಕ್ಷೆಗೆ ಒಳಪಡಿಸಬೇಕು, ಕರ್ನಾಟಕ ರಾಜ್ಯ ಸಂಘ ಸಂಸ್ಥೆಗಳು,ಕನ್ನಡ ಪರ ಹೋರಾಟಗಾರರು ಎಲ್ಲರೂ ಸೇರಿ ಆರೋಪಿಗೆ ಕಠಿಣ ಶಿಕ್ಷೆ ಹಾಗೂ ವರೆಗೂ ಹೋರಾಟ ಮಾಡಬೇಕು,ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಈ ಪ್ರಕರಣ ಗಂಭೀರವಾಗಿ ಪರಿಗಣಿಸಿ ಇದರ ಹಿಂದಿರುವ ಆರೋಪಿಗಳನ್ನು ಪತ್ತೆ ಹಚ್ಚಬೇಕೆಂದು ಎಂದು ಪರಶುರಾಮ ಭೋವಿ ವಡ್ಡರ್ ಹಾಗೂ ಸಮಾಜದ ಮುಖಂಡರು ಆಗ್ರಹಿಸಿದರು.
ವರದಿ ರಾಜಶೇಖರ ಮಾಲಿ ಪಾಟೀಲ್