ಯಾದಗಿರಿ:ರಾಜ್ಯದಲ್ಲಿನ ಹುಬ್ಬಳ್ಳಿ ನಗರದ ಬಿವಿಬಿ ಕಾಲೇಜಿನ ವಿದ್ಯಾರ್ಥಿನಿ ನೇಹಾ ಹೀರೆಮಠ ವಿದ್ಯಾರ್ಥಿನಿಗೆ ಹಾಡು ಹಗಲೇ ಕಾಲೇಜ ಆವರಣದಲ್ಲಿ ಕೊಲೆ ಮಾಡಿದ ಆರೋಪಿ ಫಯಾಜ್ ಗೆ ಗಲ್ಲುಶಿಕ್ಷೆ ವಿಧಿಸುವಂತೆ ಸಾಮಾಜಿಕ ಹೋರಾಟಗಾರ ನಾಗರಾಜ್ ರಾಕಂಮಗೇರಾ ಅವರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಅಲ್ಲದೆ ರುಕ್ಸಾನಾ ಎಂಬ ಯುವತಿಯನ್ನು ಪ್ರದೀಪ್ ಎಂಬುವನು ಪ್ರೀತಿಸಿ ಗರ್ಭಿಣಿ ಮಾಡಿ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿ ಆದರೆ ಮದುವೆಯಾಗಿದೆ ಬಾಣಂತಿಯನ್ನು ತುಮಕೂರು ಜಿಲ್ಲೆ ಹತ್ತಿರ ಕೊಲೆಗೈದು ಸುಟ್ಟು ಹಾಕಿದ್ದ ಇಂತಹ ಆರೋಪಿಗಳಿಗೆ ಯಾವುದೇ ಕಾರಣಕ್ಕೂ ಯಾರೂ ಕೂಡಾ ಕ್ಷಮಿಸಲು ಸಾಧ್ಯವಿಲ್ಲ,ಜೀವನದಲ್ಲಿ ಆಸೆಗಳನ್ನು ಹೊತ್ತುಕೊಂಡು ಬಾಳಿ ಬದುಕಬೇಕಾದ ಸಣ್ಣ ವಯಸ್ಸಿನ ಯುವತಿಯರು ತಮ್ಮ ಜೀವ ಕಳೆದುಕೊಂಡಿದ್ದಾರೆ.
ಈ ಯುವತಿಯರ ಸಾವಿನಿಂದ ಕರ್ನಾಟಕ ರಾಜ್ಯ ಜನತೆ ತುಂಬಾ ನೋವಿನಲ್ಲಿದ್ದಾರೆ ಇಂತಹ ಕೃತ್ಯಗಳಿಂದ ರಾಜ್ಯದ ಜನರು ಭಯ ಭೀತಿರಾಗಿದ್ದಾರೆ.ಕೂಡಲೇ ರಾಜ್ಯ ಸರ್ಕಾರ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಆರೋಪಿಗಳಿಗೆ ಗಲ್ಲು ಶಿಕ್ಷ ವಿಧಿಸುವಂತೆ ಸಾಮಾಜಿಕ ಹೋರಾಟಗಾರ ನಾಗರಾಜ್ ರಾಕಂಮಗೇರಾ ಅವರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ವರದಿ ರಾಜಶೇಖರ ಮಾಲಿ ಪಾಟೀಲ್