ಯಾದಗಿರಿ ಜಿಲ್ಲೆಯ ಶಹಾಪುರ
ತಾಲೂಕಿನ ಸಿಂಗನಹಳ್ಳಿ ಗ್ರಾಮದ ಸಾನಿಯಾ ಬೇಗಂ ಎನ್ನುವ ಹದಿನೇಳು ವರ್ಷದ ಬಾಲಕಿಯ ಹೊಟ್ಟೆಯಲ್ಲಿ ಐದು ಕೆ.ಜಿ ಅಂಡಾಶಯ ಗಡ್ಡೆ ಬೆಳೆದಿದ್ದು,ಹೊಟ್ಟೆ ನೋವಿನಿಂದ ಬಳಲುತ್ತಿರುವ ಆಕೆಯು ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ನಲ್ಲಿ ಗಡ್ಡೆ ಬೆಳೆದಿದ್ದನ್ನು ತಿಳಿದು ವೈದ್ಯರಾದ ಡಾ||ಯಲ್ಲಪ್ಪ ಪಾಟೀಲ್ ಹುಲ್ಕಲ್ ಅವರು ಶಸ್ತ್ರಚಿಕಿತ್ಸೆ ಮೂಲಕ 5 ಕೆ.ಜಿ ಅಂಡಾಶಯ ಗಡ್ಡೆಯನ್ನು ಹೊರತೆಗೆದಿದ್ದಾರೆ.
ಬಾಲಕಿಗೆ ರಕ್ತ ಕಡಿಮೆ ಇದ್ದುದನ್ನು ಅರಿತ ವೈದ್ಯರು ಎರಡು ಬಾಟಲ್ ರಕ್ತ ಕೊಟ್ಟ ನಂತರ ಯಶಸ್ವಿ ಚಿಕಿತ್ಸೆಯಾಗಿದ್ದು,ಬಾಲಕಿಯು ಆರೋಗ್ಯವಾಗಿದ್ದು ಚಿಕಿತ್ಸೆ ಫಲಕಾರಿಯಾಗಿದೆ ಎಂದು ಪಾಲಕರು ತಿಳಿಸಿದ್ದಾರೆ.ಶಹಾಪುರ ಸರಕಾರಿ ಆಸ್ಪತ್ರೆಯಲ್ಲಿ ಐದು ಕೆ.ಜಿ ಅಂಡಾಶಯ ಗಡ್ಡೆಯ ಶಸ್ತ್ರಚಿಕಿತ್ಸೆಯಾಗಿರುವುದು ಇದು ಎರಡನೇ ಬಾರಿಯಾಗಿದ್ದು,ಯಾದಗಿರಿ ಜಿಲ್ಲಾ ಆಸ್ಪತ್ರೆಯೂ ಸೇರಿದಂತೆ ತಾಲೂಕಿನ ಯಾವುದೇ ಆಸ್ಪತ್ರೆಯಲ್ಲಿ ಈ ತರಹದ ಅಂಡಾಶಯ ಗಡ್ಡೆಗಳ ಶಸ್ತ್ರಚಿಕಿತ್ಸೆಯಾಗಿಲ್ಲ. ಖಾಸಗಿ ಆಸ್ಪತ್ರೆಯಲ್ಲಿ ಇಂತಹ ಅಂಡಾಶಯ ಗಡ್ಡೆಯ ಶಸ್ತ್ರ ಚಿಕಿತ್ಸೆ ಮಾಡಲು ಸುಮಾರು ಎರಡು ಲಕ್ಷ ರೂಪಾಯಿ ಖರ್ಚಾಗುತ್ತದೆ.
ನಾವು ಬಡವರಾದ ಕಾರಣ ಅಷ್ಟೊಂದು ಹಣ ಒದಗಿಸುವುದು ಹೇಗೆ ಸಾಧ್ಯ?ಬಡವರ ಪಾಲಿನ ಆಶಾಕಿರಣ,ಸರಕಾರಿ ಆಸ್ಪತ್ರೆಗಳು ಮತ್ತು ಅಲ್ಲಿನ ವೈದ್ಯರೆ ಜೀವಾಳವಾಗಿದ್ದು,ಡಾ||ಯಲ್ಲಪ್ಪ ಪಾಟೀಲ್ ನಂತಹ ವೈದ್ಯರಿಂದ ನನ್ನ ಮಗಳಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ.ಆದರೆ ಶಹಾಪುರ ತಾಲೂಕಿನ ಸುತ್ತಮುತ್ತಲಿನ ಗ್ರಾಮಸ್ಥರು ನಿಮಗೆ ಏನು ತೊಂದರೆ ಇದ್ದರೆ ಡಾ||ಯಲ್ಲಪ್ಪ ಸರ್ ಹತ್ತಿರ ಹೋಗಿ ಅವರು ಬಹಳ ಒಳ್ಳೆಯ ಡಾಕ್ಟರ್ ಯಾರೇ ಅವರ ಹತ್ತಿರ ಹೋದರೆ ಸಾಕು ಅವರು ಬಂದ ರೋಗಿಗಳಿಗೆ ಚೆನ್ನಾಗಿ ಮಾತನಾಡಿ,ನಿಮಗೆ ಏನಾಗಿದೆ ಎಂದು ಬಹಳ ವಿನಯದಿಂದ ಕೇಳಿ,ಏನೇ ಸಮಸ್ಯೆ ಇದ್ದರೂ ಭಯಪಡಬೇಡ ಎಂದು ಆಸ್ಪತ್ರೆಗೆ ಬಂದ ರೋಗಿಗಳಿಗೆ ಧೈರ್ಯ ತುಂಬುತ್ತಾರೆ ಎಂದು ಸಾನಿಯಾ ಬೇಗಂ ತಂದೆ ಹುಸೇನ್ ಪಾಟೀಲ್ ಸಿಂಗನಹಳ್ಳಿ ಅವರು ತಮ್ಮ ಮನದಾಳದ ಮಾತು ಹಂಚಿಕೊಂಡರು.
ವರದಿ ರಾಜಶೇಖರ ಮಾಲಿ ಪಾಟೀಲ್