ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಮುದ್ಗಲ್ ಹೋಬಳಿಯ ಸರ್ವೆ ನಂಬರ್ 199/1/2 ರ ವಿಸ್ತೀರ್ಣ 4 ಎಕರೆ ಲೇಔಟ್ ನಲ್ಲಿ ಪ್ಲಾಟ್ ಖರೀದಿ ಮಾಡಿದ ಶಿವಮ್ಮ ಗಂಡ ಮುತ್ತಪ್ಪ,ಮುತ್ತಪ್ಪ ತಂದೆ ಸಿದ್ದಪ್ಪ,ಸುಮಿತ್ರಾ ಗಂಡ ಶರಣಪ್ಪ,ಶೃತಿ ಗಂಡ ಮಂಜುನಾಥ ಚಲವಾದಿ ಮುಂತಾದವರು ಲಿಂಗಸುಗೂರಿನ ಸಬ್ ರಿಜಿಸ್ಟರ್ ಆಫೀಸ್ನಲ್ಲಿ ಪ್ಲಾಟ್ ರಿಜಿಸ್ಟ್ರೇಷನ್ ಮಾಡಿಸಿಕೊಂಡಿರುತ್ತಾರೆ ನಂತರ ಪುರಸಭೆ ಕಾರ್ಯಾಲಯದಲ್ಲಿ ಮುಟೇಶನ್ ಗಾಗಿ ಅರ್ಜಿ ಸಲ್ಲಿಸಿರುತ್ತಾರೆ.ಆದರೆ ಆರು ತಿಂಗಳಾದರೂ ದುರುದ್ದೇಶದಿಂದ ಮುಟೇಶನ್ ವಿಭಾಗದ ಸಿಬ್ಬಂದಿಗಳು ಮುಟೇಶನ್ ಮಾಡಿರುವುದಿಲ್ಲ.ಅರ್ಜಿದಾರರು ಅರ್ಜಿಯನ್ನು ಕೊಟ್ಟು 45 ದಿನಗಳವರೆಗೂ ಆಗಬೇಕಾದ ಕೆಲಸವನ್ನು ಆರು ತಿಂಗಳಾದರೂ ಮುಟೇಶನ್ ಮಾಡದ ಸಿಬ್ಬಂದಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅರ್ಜಿದಾರರೊಂದಿಗೆ ಮೇಲಾಧಿಕಾರಿಗಳಿಗೆ ದೂರು ನೀಡಲಾಗುವುದೆಂದು ಪತ್ರಿಕೆಯ ಮೂಲಕ ನಾಗರಾಜ್ ತಳವಾರ್ ಎಚ್ಚರಿಸಿದರು.
ವರದಿ-ಬಸವರಾಜ್ ಬಡಿಗೇರ್