ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹಡಪದ ಕ್ಷೌರಿಕ ಸಮಾಜದ ಕಾಯಕಯೋಗಿ ಡಾ.ಎಂ ಬಿ.ಹಡಪದ ಸುಗೂರ ಎನ್ ಗೆ ವಿಶ್ವರತ್ನ ಸಮ್ಮಾನ್ ಪ್ರಶಸ್ತಿ ‌


ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಗೂರ ಎನ್ ಗ್ರಾಮದ ಈ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ನಿಸ್ವಾರ್ಥಿಯ ಸಮಾಜ ಸೇವಕನಿಗೆ ಹಡಪದ ಅಪ್ಪಣ್ಣ ಸಮಾಜದ ಸೇವೆಯಲ್ಲಿ ಉತ್ತರ ಪ್ರದೇಶದ ಲಕ್ನೋದ ವರ್ಥ್ಲಿ ವೆಲ್ಲನ್ನೇಸ್ ಫೌಂಡೇಶನ್ ‌ವತಿಯಿಂದ 2024 ನೇ ಸಾಲಿನಲ್ಲಿ ವಿಶ್ವ ರತ್ನ ಸಮ್ಮಾನ್ ಎಕ್ಸ್ಕಿಸಿವ್ ಗ್ಲೋಬಲ್ ಪ್ರಶಸ್ತಿ ಯ ಸರ್ಟಿಫಿಕೇಟ್ ನೀಡಿ ಗೌರವಿಸಲಾಯಿತು. ‌ ಕಷ್ಟಗಳು ಮೆಟ್ಟಿ ನಿಂತರೆ ಸಾಧನೆ ಸುಲಭ ಸಾಧ್ಯ:ಡಾ.ಎಂ ಬಿ.ಹಡಪದ ಸುಗೂರ ಎನ್

ಪ್ರತಿಫಲ ಅಪೇಕ್ಷೆ ಇಲ್ಲದೆ ಮಾಡುವುದೇ ನಿಜವಾದ ಸೇವೆ ಡಾ.ಎಂ.ಬಿ ಹಡಪದ ಸುಗೂರ ಎನ್ ನಿರ್ಗತಿಕರ ಹಿರಿಯ ವೃದ್ಧಾಶ್ರಮ ಹಾಗೂ ಹಿರಿಯ ವೃದ್ಧಾಶ್ರಮದ ಸೇವೆಯ ಪರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ,ನಾವು ಒಂದು ದಿನ ಬೆಳಗ್ಗೆಯಿಂದ ಸಾಯಂಕಾಲದವರೆಗೂ ವೃದ್ಧಾಶ್ರಮದಲ್ಲಿ ಇದ್ದು ಅವರ ಜೊತೆ ಒಂದು ದಿನ ಕಾಲ ಕಳೆದಲ್ಲಿ ಈ ಇಳಿ ವಯಸ್ಸಿನಲ್ಲಿ ಅವರಿಗೆ ಸ್ಪೂರ್ತಿ ತುಂಬಿದಂತಾಗುತ್ತದೆ ಎಂದು ತಿಳಿಸಿದರು.ಸೇವೆಯ ಪ್ರತಿಫಲ ಸೇವೆಯೇ;ಎಂದೂ ತನಗಾಗಿ ಬದುಕುವುದು ನಿಜವಾದ ಬದುಕಲ್ಲ ಇತರರಿಗೆ ಬದುಕುವುದೇ ನಿಜವಾದ ಬದುಕು ಹಾಗಾಗಿ ಮನುಷ್ಯ ಹುಟ್ಟಿದ ಮೇಲೆ ಕೆಲವೊಂದು ಋಣಗಳನ್ನು ತೀರಿಸಬೇಕಾಗುತ್ತದೆ. ಆ ನಿಟ್ಟಿನಲ್ಲಿ ಸಮಾಜ ಸೇವೆಯೂ ಒಂದಾಗಿದೆ. ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಮಾಡುವುದೇ ನಿಜವಾದ ಸೇವೆ.ಸಮಾಜ ಸೇವೆಯ ಮೂಲಕ ಸಮಾಜದ ಋಣವನ್ನು ತೀರಿಸಬಹುದು, ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚುವುದು, ನೊಂದವರ ನೋವಿಗೆ ಸ್ಪಂದಿಸುವುದು,ಇತರರಿಗೆ ತನ್ನ ಕೈಲಾದಷ್ಟು ಸಹಾಯ ಮಾಡುವುದು,ಇದ್ದವರೆಲ್ಲಾ ಇಲ್ಲದವರಿಗೆ ನೀಡುವುದು,ಕಷ್ಟದಲ್ಲಿರುವವರಿಗೆ ನಾಲ್ಕು ಸಾಂತ್ವನದ ಮಾತನ್ನು ಹೇಳುವುದ.,ಹೀಗೆ ಹಲವು ವಿಧದಲ್ಲಿ ಸಮಾಜ ಸೇವೆ ಮಾಡಬಹುದು ಸಮಾಜಸೇವೆ ಮಾಡಲು ಹಣವೇ ಇರಬೇಕೆಂದಿಲ್ಲ ಹಣವಿಲ್ಲದಿದ್ದರೂ ಸಮಾಜಸೇವೆ ಮಾಡಬಹುದು. ಅನಾಥರಿಗೆ,ವೃದ್ಧರಿಗೆ,ದುರ್ಬಲರಿಗೆ,ಶೋಷಿತರಿಗೆ ಸಹಾಯ ಮಾಡುವ ಗುಣವನ್ನು ಎಲ್ಲರೂ ಹೊಂದಬೇಕಾಗಿದೆ.ಯಾರ ಮನಸ್ಸಿಗೂ ನೋವು ಮಾಡದಂತೆ ಬದುಕಬೇಕಾಗಿದೆ.ಬೇರೆಯವರ ದಾರಿಗೆ ಹೂವಾಗದಿದ್ದರೂ ಪರವಾಗಿಲ್ಲ ಮುಳ್ಳಾಗದಿದ್ದರೆ ಅಷ್ಟೇ ಸಾಕೆಂದು ಈ ಸಂದರ್ಭದಲ್ಲಿ ಡಾ.ಮಲ್ಲಿಕಾರ್ಜುನ ಬಿ ಹಡಪದ.ಸುಗೂರ ಎನ್ ಕಲಬುರಗಿ ಜಿಲ್ಲೆಯ ಸಂಘಟನಾ ಕಾರ್ಯದರ್ಶಿಗಳು ಮತ್ತು ಸಮಾಜದ ಸೇವಕರು ತಿಳಿಸಿದರು.ಉತ್ತರ ಪ್ರದೇಶದ ಲಕ್ನೋದ ವರ್ಥ್ಲಿ ವೆಲ್ಲನ್ನೆಸ್ ಫೌಂಡೇಶನ್ ಸಂಸ್ಥೆಯ ವತಿಯಿಂದ ಸದಾ ಒಂದಲ್ಲ ಒಂದು ಸಮಾಜಮುಖಿ ಕಾರ್ಯವನ್ನು ಮಾಡುತ್ತಾ ಬಂದಿರುವ ಕಾಯಕಯೋಗಿ ಮತ್ತು ಸಮಾಜ ಸೇವಕ. ಕಡು ಬಡತನದ ಜೀವನದಲ್ಲಿ ಹುಟ್ಟಿ ಬಡವರಿಗೆ ಸೇವೆ ಮಾಡುವ ಯುವ ಮುಖಂಡರಾದ ಡಾ.ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರಿಗೆ ಈ 2024 ರ ಸಾಲಿನ ಪ್ರಶಸ್ತಿ ಯನ್ನು ಕೊಡುತ್ತಿರುವ ಉತ್ತರ ಪ್ರದೇಶದ ಲಕ್ನೋದ ವರ್ಥ್ಲಿ ವೆಲ್ಲನ್ನೆಸ್ ಫೌಂಡೇಶನ್ ಸಂಸ್ಥೆ ಕಡೆಯಿಂದ ‘ ವಿಶ್ವ ರತ್ನ ಸಮ್ಮಾನ್ ಪ್ರಶಸ್ತಿ ಸರ್ಟಿಫಿಕೇಟ್ ಯನ್ನು ಇವರ ಸಮಾಜದ ಸೇವೆಯನ್ನು ಗುರುತಿಸಿ ಇದೇ 2024 ರಲ್ಲಿ ಇವರ ಸಮಾಜದ ಹಾಗೂ ಈ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕರ್ನಾಟಕ ರಾಜ್ಯದ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಗೂರ ಎನ್ ಗ್ರಾಮದ ಡಾ.ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರಿಗೇ ‘ಕ್ಷೌರಿಕ ವೃತ್ತಿಪರ ‌‌‍ಕಾಯಕ ಸಮಾಜದಲ್ಲಿ
ಇವರ ಸೇವೆಯನ್ನು ಗುರುತಿಸಿ.ಈ ಸರ್ಟಿಫಿಕೇಟ್ ನೀಡಿದೆ.ಡಾ.ಮಲ್ಲಿಕಾರ್ಜುನ ಬಿ.ಹಡಪದ ಸುಗೂರ ಎನ್ ಅವರು ತುಂಬಾ ಬಡವರಿಗೆ ಸೇವೆ ಸಲ್ಲಿಸಿದ್ದಾರೆ. ಅವರು ಸಹ ಬಡತನ ಜೀವನದಲ್ಲಿ ಹುಟ್ಟಿ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ವತಿಯಿಂದ ಸಮಾಜದ ಸಂಘಟನೆಯ ಜೊತೆಗೂಡಿ ಈ ರೀತಿಯ ವಿಭಿನ್ನ ರೀತಿಯಲ್ಲಿ ಸಮಾಜದ ಸೇವೆ ಸಲ್ಲಿಸುತ್ತಿದ್ದಾರೆ. ಅನಾಥರಿಗೆ.,ಅಂಧರಿಗೆ,ನಿರ್ಗತಿಕರಿಗೆ,ಕಟ್ಟಡ ಕಾರ್ಮಿಕರಿಗೆ,ಸಾಧು-ಸಂತರಿಗೆ, ಮೂಕರಿಗೆ, ವೃದ್ದರಿಗೆ,ಅನಾಥ ಶಾಲಾ ಮಕ್ಕಳಿಗೆ,ವಿಶೇಷ ಚೇತನರಿಗೆ ಮತ್ತು ಶಾಲೆಯ ಸಣ್ಣ ಮಕ್ಕಳಿಗೆ,ಪೌರ ಕಾರ್ಮಿಕರಿಗೆ,ಕಿವುಡರಿಗೆ,ಹಿರಿಯ ವೃದ್ದರಿಗೆ ಸೇರಿದಂತೆ ಇಲ್ಲಿಯವರೆಗೊ ಒಟ್ಟು ಹನ್ನೆರಡು ಕಡೆಯಲ್ಲೂ ಸೇರಿ ಅನಾಥಶ್ರಾಮ,ವೃದ್ದಾಶ್ರಮ,ನಿರ್ಗತಿಕರ ಕೇಂದ್ರ ಶಾಲೆಗಳು ತಮ್ಮ ಕ್ಷೌರಿಕ ಅಂಗಡಿಗಳಲ್ಲಿ ಮತ್ತು ಸುಗೂರ ಎನ್ ಮಠದ ಶ್ರೀ ಭೋಜಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಶಾಲಾ ಮಕ್ಕಳಿಗೆ ಸಿಂದಗಿ ತಾಲೂಕಿನ ಹಂದಿಗನೂರ ಗ್ರಾಮದಲ್ಲಿ ಇರುವ ಹಡಪದ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಸೇರಿದಂತೆ ಒಟ್ಟು 1285 ಕ್ಕೊ ಹೆಚ್ಚು ಅನಾಥ ನಿರ್ಗತಿಕ ಜನತೆಗೆ (ಉಚಿತವಾಗಿ) ಹೇರ್ ಕಟಿಂಗ್ ಮಾಡುವ ಈ ಹಡಪದ ಸಮಾಜದ ಸೇವಕ ಡಾ.ಮಲ್ಲಿಕಾರ್ಜುನ ಬಿ.ಹಡಪದ ಸುಗೂರ‌ ಎನ್.ಅವರು ಸಮಾಜದ ಸಂಘಟನೆಯ ಜೊತೆ ಜೊತೆಯಲ್ಲಿ ಈ ರೀತಿಯ ವಿಭಿನ್ನ ಸೇವೆ ಮಾಡುತ್ತಿದ್ದಾರೆ ಅವರ ನಿಸ್ವಾರ್ಥ ಸೇವೆಗೆ ಅನೇಕ ಜಿಲ್ಲಾ ಹಾಗು ತಾಲೂಕ ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದ ಹಾಗೂ ರಾಷ್ಟ್ರ ಮಟ್ಟದ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳ ಜೊತೆಗೆ ಈ ಪ್ರಶಸ್ತಿಯೂ ಸೇರಿದೆ.ನಮ್ಮ ಜೊತೆಯಲ್ಲಿ ನಮ್ಮ ಸಮಾಜದ ಜನತೆಯ ಸಹಕಾರದಿಂದ ಈ ಉಚಿತ ಕ್ಷೌರ ಸೇವೆಯನ್ನು ಸಾಧಿಸಲು ನಮಗೇ ಈ ಕ್ಷೌರಿಕ ವೃತ್ತಿಯಲ್ಲಿಯೇ ಈ ರೀತಿಯ ಸಾಧನೆ ಮಾಡಲು ನಮಗೆ ಅನೇಕರು ಸಹಕರಿಸಿದರು.‌
ಇದೇ ಕರ್ನಾಟಕ ರಾಜ್ಯದ ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಸುಗೂರ‌ ಎನ್ ಗ್ರಾಮದಲ್ಲಿ ಹುಟ್ಟಿದ ಈ ಅಪರೂಪದ ಸಮಾಜದ ಸೇವಕ ಡಾ.ಮಲ್ಲಿಕಾರ್ಜುನ ಬಿ.ಹಡಪದ ಸುಗೂರ ಎನ್ ಅವರು ಬಡತನ ಜೀವನದಲ್ಲಿ ಹುಟ್ಟಿ ಬಡವರ ಸೇವೆ ಮಾಡುತ್ತಾ ಸಮಾಜದ ಸೇವೆಯಲ್ಲಿ ತೊಡಗಿದ್ದಾರೆ. ಅವರ ಈ ರೀತಿಯ ಅನಾಥರಿಗೆ ಸೇರಿದಂತೆ ಒಟ್ಟು 1285 ಕ್ಕೊ ಹನ್ನೆರಡು ಬಾರಿ ನಿರ್ಗತಿಕ ಜನತೆಗೆ ಉಚಿತ ಕ್ಷೌರ ಸೇವೆ ಮಾಡುತ್ತಾ ಬಡತನದಲ್ಲಿ ಅವರು ತಮ್ಮ ಕ್ಷೌರಿಕ ವೃತ್ತಿಯಲ್ಲಿಯೇ ಜೀವನ ಸಾಗಿಸುತ್ತಾ ಬಂದಿದ್ದು.ಅನೇಕ ಸಮುದಾಯಕ್ಕೆ ಮಾದರಿಯಾಗಿ. ಈ ರೀತಿಯ ಸಮಾಜದ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಅವರನ್ನು ಈ ಕ್ಷೌರಿಕ ಸೇವೆಯಲ್ಲಿ ಗುರುತಿಸಿ ಅನೇಕರು ಸಹ ಹರ್ಷ ವ್ಯಕ್ತಪಡಿಸಿದ್ದಾರೆ.ಮತ್ತು ಈ ಸಮಾಜದ ಸೇವಕ ಮಲ್ಲಿಕಾರ್ಜುನ ಬಿ.ಹಡಪದ ಸುಗೂರ ಎನ್ ಗೇ ಅನೇಕ ಸಮುದಾಯದ ಹಾಗೂ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಮುಖಂಡರು. ಹಾಗೂ ಸಮಾಜದ ಶ್ರೀಗಳು ಸೇರಿದಂತೆ ಅನೇಕರು ಶುಭ ಹಾರೈಸಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ