ಬಾಗಲಕೋಟೆ ಜಿಲ್ಲೆಯ ರಬಕವಿ ಬನಟ್ಟಿ ತಾಲೂಕಿನ ಬನಹಟ್ಟಿ ನಗರದಲ್ಲಿ ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ್ ಅವಳ ಹತ್ಯೆಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಗಜ ಸೇನೆ ತಾಲೂಕ ಘಟಕ ವತಿಯಿಂದ ಭಾರಿ ಪ್ರತಿಭಟನೆ ನಡೆಸಿದರು.
ನಗರದ ಮಹಾತ್ಮ ಗಾಂಧಿ ವೃತ ಹತ್ತಿರ ಕರವೇ ಗಜ ಸೇನೆಯ ಕಾರ್ಯಕರ್ತರು ಭಾರಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದಲ್ಲದೆ ಕೆಲವು ಕಾಲ ರಸ್ತೆ ತಡೆದು ವಾಹನ ಸಂಚಾರವನ್ನು ಬಂದ್ ಮಾಡಿದ್ದರು.
ಈ ಪ್ರತಿಭಟನೆಯ ಸಂದರ್ಭದಲ್ಲಿ ಮೌಲಾನಾ ಮೋಹಸಿನ್ಅಹಮದ್ ಗೋಕಾಕ್ ಮಾತನಾಡಿ ಹುಬ್ಬಳ್ಳಿಯಲ್ಲಿ ನಡೆದಂತಹ ನೇಹಾ ಹಿರೇಮಠ ಅವರ ಭೀಕರ ಹತ್ಯೆಯನ್ನು ಖಂಡಿಸುತ್ತೇವೆ ಇಂತಹ ಘಟನೆ ನಿಜಕ್ಕೂ ದುರಂತ ಇಂತಹ ಪರಿಸ್ಥಿತಿಯಲ್ಲಿ ನೇಹಾ ಹಿರೇಮಠ ಅವರ ತಂದೆ ರಂಜನ್ ಹಿರೇಮಠ ಅವರ ದುಃಖದಲ್ಲಿ ನಾವು ಸಹ ಭಾಗಿಯಾಗುತ್ತೇವೆ ಹಾಗೂ ಎಂದೆಂದಿಗೂ ನಿಮ್ಮ ಜೊತೆ ನಾವು ಇರಲು ಬಯಸುತ್ತೇವೆ ಎಂದು ಹೇಳಿದರು ಸರ್ಕಾರದ ಕಾನೂನು ಸುವ್ಯವಸ್ಥೆಯ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿ ಪೃವೃತ್ತರಾಗಬೇಕು.ಈ ಘಟನೆ ಒಂದು ಎರಡು ಅಲ್ಲ ರುಕ್ಸಾನಾ ಎಂಬ ಯುವತಿಯನ್ನು ಕೂಡಾ ಸುಟ್ಟು ಹಾಕಿದ ಆರೋಪಿ ಪ್ರದೀಪ್,ಇದೇ ರೀತಿ ಹಿಂದೆ ಉಡುಪಿಯಲ್ಲಿ ನಡೆದ ಘಟನೆಯಲ್ಲಿ ನಾಲ್ಕು ಜನ ಮುಸ್ಲಿಂ ಅಮಾಯಕರನ್ನು ಬರ್ಬರವಾಗಿ ಹತ್ಯಮಾಡಿದ ಆರೋಪಿ ಪ್ರವೀಣ್ ಚೌಗುಲೆ ಇವನನ್ನು ಕೂಡ ಗಲ್ಲಿಗೇರಿಸಬೇಕು ಎಂದು ಹೇಳಿದರು . ನಡೆದಂತ ಘಟನೆ ಸರ್ಕಾರವು ಇಂತಹ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಇಲ್ಲವಾದರೆ ಕಾನೂನಿನ ಭಯ ಇರುವುದಿಲ್ಲ ಹತ್ಯೆ ಮಾಡಿದವರು ಯಾರೇ ಆಗಲಿ ಫಯಾಜ್ ಆಗಿರಲಿ ಅವರಪ್ಪನೇ ಆಗಿರಲಿ ಇಂತಹ ಅಮಾನುಷ ಬರ್ಬರ ಹತ್ಯೆ ಸಾರ್ವಜನಿಕರ ಎಲ್ಲರ ಕಣ್ಣ ಮುಂದೆ ನಡೆಯುತ್ತಿರುವಾಗ ತಮಾಷೆಯನ್ನಾಗಿ ನೋಡುತ್ತ ಮಗ್ನರಾಗಿದ್ರು ಈ ನೋಡುವಂತಹ ಯುವಕರಿಗೆ ಹೇಳಲು ಇಷ್ಟಪಡುತ್ತೇನೆ ಇಂತಹ ಬರ್ಬರ ಅಮಾನುಷ ಹತ್ಯೆ ನಡೆಯುತ್ತಿರುವ ಸಂದರ್ಭದಲ್ಲಿ ನೀವು ಕೂಡಾ ಅದು ತಡೆಯಬಹುದಾಗಿತ್ತು ಎಂದು ವಿಷಾದ ವ್ಯಕ್ತಪಡಿಸಿದರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಗಜ ಸೇನೆ ವೇದಿಕೆ ಮುಖಾಂತರ ಮನವಿ ಮಾಡಿಕೊಳ್ಳುವುದು ಇಷ್ಟೇ ನೇಹಾ ಹಿರೇಮಠ ಅವರ ಆರೋಪಿ ಫಯಾಜ್ ಆಗಲಿ ಈ ಹಿಂದೆ ಉಡುಪಿಯಲ್ಲಿ ನಡೆದಂತಹ ಘಟನೆಯ ಆರೋಪಿ ಪ್ರವೀಣ್ ಚೌಗಲೆ ಆಗಲಿ ಹಾಗೂ ಪ್ರದೀಪ್ ಅನ್ನುವಂತ ಆರೋಪಿ ಈ ಎಲ್ಲಾ ಆರೋಪಿಗಳನ್ನು ಕೂಡಲೇ ಗಲ್ಲು ಶಿಕ್ಷೆ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು .
ಈ ಪ್ರತಿಭಟನೆಯ ಸ್ಥಳಕ್ಕೆ ಆಗಮಿಸಿದ ರಬಕವಿ ಬನಹಟ್ಟಿ ತಾಲೂಕ ತಹಶೀಲ್ದಾರ್ ಅವರಿಗೆ ಕರವೇ ಗಜಸೇನೆ ವತಿಯಿಂದ ಮನವಿ ಸಲ್ಲಿಸಿದರು.
ಈ ಪ್ರತಿಭಟನೆಯಲ್ಲಿ ರಬಕವಿ ಬನಹಟ್ಟಿ,ಮುಸ್ಲಿಂ ಧಾರ್ಮಿಕ ಮೌಲ್ವಿಗಳು ಕೂಡ ಸಾತ ನೀಡಿದ್ದು ವಿಶೇಷವಾಗಿತ್ತು.ಈ ಸಂದರ್ಭದಲ್ಲಿ
ಕರವೇ ಗಜಸೇನೆ ಜಿಲ್ಲಾಧ್ಯಕ್ಷ ಚನ್ನಪ್ಪ ಪಾಟೀಲ , ರಬಕವಿ ಬನಹಟ್ಟಿ ತಾಲೂಕು ಅಧ್ಯಕ್ಷ ಮಹಮ್ಮದ್ ಹುಸೇನ್ ಲೆಂಗ್ರೆ,ಶಹನೂರು ಗೋಲಬಾವಿ , ಮೌಲಾನಾ ಮೋಸಿನಅಹಮದ್ ಗೋಕಾಕ,ಯುನುಸ ನಿಪ್ಪಾಣಿ,ಬುಡನ ಜಮಾದಾರ, ಶಾನೂರ ಮಾಲದಾರ , ಶ್ರೀ ಮತಿ ಅನುರಾಧಾ ಶಿರಗುಪ್ಪಿ,ಶ್ರೀ ಮತಿ ರೇಣುಕಾ ಗಾಡಿವಡ್ಡರ,ಮೌಲಾನ ಹಸನ ಝಾರೆ,ಇರ್ಷಾದ ಮೊಮಿನ ಇನ್ನೂ ಹಲವಾರು ಮುಖಂಡರುಗಳು ಹಾಗೂ ಕರವೇ ಗಜಸೇನೆ ಕಾರ್ಯಕರ್ತರು ಹಾಗೂ ಯುವಕರು,ಮಹಿಳೆಯರು ಇನ್ನೂ ಅನೇಕರು ಜೊತೆಗಿದ್ದರು.
ವರದಿ:ಮಹಿಬೂಬ ಎಂ ಬಾರಿಗಡ್ಡಿ