ಸಿಂಧನೂರು ತಾಲೂಕಿನ ಇಜೆ ಹೊಸಳ್ಳಿ ಕ್ಯಾಂಪ್ ನ ನವಲಳ್ಳಿ ದುರ್ಗಾದೇವಿ ದೇವಾಲಯದ ಹತ್ತಿರ ವನಸಿರಿ ಫೌಂಡೇಶನ್ ವತಿಯಿಂದ ಪಕ್ಷಿಗಳ ಅರವಟ್ಟಿಗೆ ಕಾರ್ಯಕ್ರಮ ನಡೆಯಿತು.
ವನಸಿರಿ ಫೌಂಡೇಶನ್ ಹಲವಾರು ವರ್ಷಗಳಿಂದ ಪರಿಸರ ಸಂರಕ್ಷಣೆಗಾಗಿ ದಿನನಿತ್ಯ ಕಾಯಕದಲ್ಲಿ ತೊಡಗಿದೆ.ಸಾರ್ವಜನಿಕರಿಗೆ ಪರಿಸರ ಜಾಗೃತಿ ಮೂಡಿಸಲಾಗುತ್ತಿದೆ ಅದೇ ರೀತಿ ಬೇಸಿಗೆ ಕಾಲದಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರಿನ ದಾಹ ತೀರಿಸಲು ರಾಜ್ಯಾದ್ಯಂತ ಪಕ್ಷಿಗಳ ಅರವಟ್ಟಿಗೆ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ.ಇದರಿಂದ ಪಕ್ಷಗಳಿಗೆ ನೀರಿನ ದಾಹವನ್ನು ತೀರಿಸಿದಂತಾಗುತ್ತದೆ. ಇದನ್ನರಿತು ಮಕ್ಕಳು,ಮಹಿಳೆಯರು,ಪಕ್ಷಿಗಳಿಗೆ ನೀರುಣಿಸಲು ಮುಂದಾಗುತ್ತಿದ್ದಾರೆ ಅದೇ ಸಾಲಿನಲ್ಲಿ ಇಂದು ಸಿಂಧನೂರು ತಾಲೂಕಿನ ಹೊಸಳ್ಳಿ ಇಜೆ ಕ್ಯಾಂಪ್ ಯುವಕರು,ಮುದ್ದು ಮಕ್ಕಳು ಪಕ್ಷಿಗಳಿಗೆ ನೀರಿನ ದಾಹ ತೀರಿಸಲು ಮುಂದಾಗಿದ್ದಾರೆ ಇದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಇದೇರೀತಿ ಎಲ್ಲಾ ಸಾರ್ವಜನಿಕರು ಪಕ್ಷಿಗಳ ನೀರಿನ ಅರವಟ್ಟಿಗೆ ನಿರ್ಮಾಣ ಮಾಡಿ ನಿಮ್ಮ ಮನೆ,ಹಿತ್ತಲಿನ ಗಿಡಮರಗಳಿಗೆ ಕಟ್ಟಿ ಪ್ರಾಣಿ ಪಕ್ಷಿಗಳಿಗೆ ನೀರಿನ ದಾಹ ತೀರಿಸಲು ಮುಂದಾಗಬೇಕು ಎಂದು ವನಸಿರಿ ಫೌಂಡೇಶನ್ ಸದಸ್ಯ ಮುದುಕಪ್ಪ ಹೊಸಳ್ಳಿ ಕ್ಯಾಂಪ್ ಅವರು ಸಾರ್ವಜನಿಕರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಬಸವರಾಜ ಸಂತೋಷ್,ರಮೇಶ, ಮುದುಕಪ್ಪ,ಹನುಮಂತ,ಗ್ರಾಮದ ಹಿರಿಯರು, ಮಹಿಳೆಯರು ಮತ್ತು ಮುದ್ದು ಮಕ್ಕಳು ಉಪಸ್ಥಿತರಿದ್ದರು.