ಮಹಾರಾಷ್ಟ್ರ/ಸೊಲ್ಲಾಪುರ : ಜಿಲ್ಲೆಯ ಅಕ್ಕಲಕೋಟ ವಿರಕ್ತ ಮಠದ ಪೀಠಾಧಿಪತಿ ಪರಮ ಪೂಜ್ಯ ಶ್ರೀ.ಮ.ನಿ.ಪ್ರ. ಬಸವಲಿಂಗ ಮಹಾಸ್ವಾಮಿಗಳ ೨೬ನೇ ಪಟ್ಟಾಭೀಷೆಕ ವಾರ್ಷಿಕೋತ್ಸವ, ವಿಶ್ವಗುರು ಬಸವಣ್ಣನವರ ಜಯಂತಿ ಹಾಗೂ ಲಿಂ.ಶಿವಾನಂದ ಶಿವಯೋಗಿ ಶ್ರೀಗಳ ಪುಣ್ಯಸ್ಮರಣೋತ್ಸವ ಅಂಗವಾಗಿ ಮೇ ೨ ರಿಂದ ಮೇ ೧೨ ರ ವರೆಗೆ ಅಕ್ಕಲಕೋಟ ಪಟ್ಟಣದ ವಿರಕ್ತಮಠದಲ್ಲಿ ‘ಚಲ್ಯಾಣ ಸದ್ಗುರು ಸಿದ್ಧಲಿಂಗ ಶ್ರೀಗಳ’ ಪುರಾಣ ಪ್ರವಚನ ಹಾಗೂ ತುಲಾಭಾರ ಕಾರ್ಯಕ್ರಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ವಿರಕ್ತ ಮಠದ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದರು.
ಕಾರ್ಯಕ್ರಮ ವಿವರ :ಮೇ ೨ ರಂದು ಬೆಳಿಗ್ಗೆ ೭ ರಿಂದ ೯ರ ವರೆಗೆ ಬಸವಲಿಂಗೇಶ್ವರ ಗದ್ದುಗಿಗೆ ರುದ್ರಾಭಿಷೇಕ, ಮುಂಜಾನೆ ೯ ಗಂಟೆಗೆ ಹತ್ತಿಕಣಬಸ ವಿರಕ್ತಮಠದ ಪೂಜ್ಯ ಪ್ರಭುಶಾಂತ ಮಹಾಸ್ವಾಮಿಗಳು ಷಟಸ್ಥಲ ಧ್ವಜಾರೋಹಣವನ್ನು ನೆರವೇರಿಸುವರು.ತದನಂತರ ಪ್ರತಿದಿನ ಸಾಯಂಕಾಲ ೫ ರಿಂದ ೭ ರ ವರೆಗೆ ಕಲಬುರಗಿ ಜಿಲ್ಲೆಯ ಧುತ್ತರಗಾಂವದ ಶ್ರೀ ವೇ. ಪಂಡಿತ ಶಿವಕುಮಾರ ಶಾಸ್ತ್ರಿ ಅವರು ‘ಚಲ್ಯಾಣ ಸದ್ಗುರು ಸಿದ್ಧಲಿಂಗ ಶ್ರೀಗಳ’ ಕುರಿತು ನಡೆಯುವ ಪುರಾಣ-ಪ್ರವಚ ಕಾರ್ಯಕ್ರಮಕ್ಕೆ ಗಾಯಕ ಕಲ್ಲಿನಾಥ ಹಿರೆಮಠ ಮತ್ತು ತಬಲಾ ವಾದಕ ಸುಭಾಷ ಚೌಡಾಪುರ ಸಾಥ್ ನೀಡಲಿದ್ದಾರೆ. ಸೊಲ್ಲಾಪುರ ಸಂಸದ ಹಾಗೂ ಗೌಡಗಾಂವ ಹಿರೇಮಠದ ಪೂಜ್ಯ ಡಾ|| ಜಯಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಸಿಂದಗಿಯ ಪೂಜ್ಯ ಶಿವಾನಂದ ಶ್ರೀಗಳು ಸಾನಿಧ್ಯ ವಹಿಸುವರು.
ಮೇ ೧೦ ರಂದು ಸಾಯಂಕಾಲ ೫ ಗಂಟೆಗೆ ವಿಶ್ವಗುರು ಬಸವಣ್ಣನವರ ಜಯಂತಿ ಉತ್ಸವ ನಿಮಿತ್ತ ಪ್ರತಿಮೆ ಪೂಜೆ ಮತ್ತು ಪ್ರವಚನ ಕಾರ್ಯಕ್ರಮ ಜರುಗಲಿದೆ. ಮೇ ೧೧ ರಂದು ಲಿಂ.ಶಿವಾನAದ ಶಿವಯೋಗಿ ಶ್ರೀಗಳ ಪುಣ್ಯಸ್ಮರಣೋತ್ಸವ ನಿಮಿತ್ತ ಗದ್ದುಗಿಗೆ ರುದ್ರಾಭಿಷೇಕ ಕಾರ್ಯಕ್ರಮ ಜರುಗಲಿದೆ.
ಮೇ ೧೨ ರಂದು ವಿರಕ್ತ ಮಠದ ಪರಮ ಪೂಜ್ಯ ಶ್ರೀ.ಮ.ನಿ.ಪ್ರ ಬಸವಲಿಂಗ ಮಹಾಸ್ವಾಮಿಗಳ ೨೬ನೇ ಪಟ್ಟಾಭೀಷೆಕ ವಾರ್ಷಿಕೋತ್ಸವ ನಿಮಿತ್ತ ಗುರುಗಳ ಪಾದಪೂಜೆ, ತುಲಾಭಾರ, ಮಹಾಪ್ರಸಾದ ಹಾಗೂ ಧರ್ಮಸಭಾ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರಿಗೆ ಸನ್ಮಾನ ಸಮಾರಂಭ ನಡೆಯಲಿದೆ. ಅಂದು ಬೆಳಿಗ್ಗೆ ೭ ರಿಂದ ೯ರ ವರೆಗೆ ಬಸವಲಿಂಗೇಶ್ವರ ಗದ್ದುಗಿಗೆ ರುದ್ರಾಭಿಷೇಕ, ಮುಂಜಾನೆ ೧೦ ಗಂಟೆಗೆ ಪುರಾಣ ಸಮಾರೋಪ ಸಮಾರಂಭ ನಡೆಯಲಿದೆ. ಶಾಸಕ ಸಚಿನ್ ಕಲ್ಯಾಣಶೆಟ್ಟಿ, ಮಾಜಿ ಸಚಿವ ಸಿದ್ಧರಾಮ ಮೇತ್ರೆ, ಆಳಂದ ಶಾಸಕ ಹಾಗೂ ಮುಖ್ಯಮಂತ್ರಿಗಳ ಸಲಹೆಗಾರರಾದ ಬಿ.ಆರ್.ಪಾಟೀಲ, ಮಾಜಿ ಶಾಸಕ ಸಿದ್ರಾಮಪ್ಪ ಪಾಟೀಲ ಸೇರಿದಂತೆ ಹಲವಾರು ಗಣ್ಯರು ಮತ್ತು ವಿವಿಧ ಮಠದ ಶ್ರೀಗಳು ಸಮಾರಂಭದಲ್ಲಿ ಪಾಲ್ಗೋಳಲ್ಲಿದ್ದಾರೆ.
ಪ್ರಸಾದ ಸೇವೆ : ಲಿಂ.ವಿರಕುಮಾರ ಭೀಮಾಶಂಕರ ಪಸಾರೆ ಗುರೂಜಿ ಇವರ ಸ್ಮರಣಾರ್ಥವಾಗಿ ಜನಕಲ್ಯಾಣ ಸಂಸ್ಥೆಯ ಅಧ್ಯಕ್ಷೆ ಮಲ್ಲಮ್ಮಾ ಪಸಾರೆ ಅವರು ಮಹಾಪ್ರಸಾದ ಸೇವೆ ಸಲ್ಲಿಸುವರು.