ತುಮಕೂರು:ರುಡ್ ಸೆಟ್ ಸಂಸ್ಥೆಯ ವತಿಯಿಂದ ಮೊಬೈಲ್ ರಿಪೇರಿ ಮತ್ತು ಸೇವೆ ಕುರಿತ 30 ದಿನಗಳ ಉಚಿತ ತರಬೇತಿಗೆ ಮೇ 8ರಂದು ನೇರ ಸಂದರ್ಶನ ನಡೆಯಲಿದ್ದು ಜಿಲ್ಲೆಯ ಗ್ರಾಮೀಣ ಭಾಗದ ಆಸಕ್ತ ನಿರುದ್ಯೋಗಿ ಯುವಕ ಯುವತಿಯರು ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.
ಆಸಕ್ತರು 18ರಿಂದ 45 ವರ್ಷದವರಾಗಿರಬೇಕು ಮತ್ತು ಆಸಕ್ತ ಯುವಕ ಯುವತಿಯರು ಕನ್ನಡ ಓದಲು ಮತ್ತು ಬರೆಯುವ ಕೌಶಲ್ಯವನ್ನು ಹೊಂದಿರಬೇಕು ಸಂದರ್ಶನಕ್ಕೆ ಬರುವ ಯುವಕ ಯುವತಿಯರು ಆಧಾರ್ ಕಾರ್ಡ್.ಪ್ಯಾನ್ ಕಾರ್ಡ್.ಜಾಬ್ ಕಾರ್ಡ್.ರೇಷನ್ ಕಾರ್ಡ್.ವೋಟರ್ ಐಡಿ ಕಡ್ಡಾಯವಾಗಿ ಹೊಂದಿರಬೇಕು ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ ಯುವತಿಯರಿಗೆ ಮೊದಲಾದ್ಯತೆಯನ್ನು ನೀಡಲಾಗುತ್ತದೆ.
ವರದಿ ಕೊಟ್ಟ ಕರಿಯಣ್ಣ



















