ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಹಕಾರವಿಲ್ಲದ ಸಹಕಾರ ಕ್ಷೇತ್ರ:ಯಮನೂರ ಎಂ.ಸಿಂಗನಾಳ

ಕೊಪ್ಪಳ:ಸಮಾಜದಲ್ಲಿ ಸಹಕಾರದ ಅವಶ್ಯಕತೆ ಇದೆ, ಮನುಷ್ಯನು ಸಮಾಜ ಜೀವಿ,ಪರಸ್ಪರ ಸಹಕಾರವಿಲ್ಲದೆ ಸಮಾಜವಿಲ್ಲ ಅಂತೆಯೇ ಪ್ರಾಚೀನ ಕಾಲದಿಂದಲೂ ಮಾನವನು ಪರಸ್ಪರ ಸಹಕಾರದಿಂದಲೇ ಜೀವಿಸುತ್ತಾ ಬಂದಿರುತ್ತಾನೆ.
ನಿರ್ದಿಷ್ಟವಾದ ಸಾಮಾಜಿಕ ಉದ್ದೇಶ ಸಾಧನೆಗಾಗಿ ಜನರು ಒಂದು ಗೂಡಿ,ಕಾರ್ಯ ಪ್ರವೃತ್ತರಾಗುವುದೇ ಸಹಕಾರ,ಒಬ್ಬ ವ್ಯಕ್ತಿ ತನ್ನ ಸ್ವಂತ ಬಲ ಅಥವಾ ಸಾಮರ್ಥ್ಯದಿಂದ ಸಾಧಿಸಲಾಗದಂತಹ ಕಾರ್ಯವನ್ನು ಇತರರ ಸಹಕಾರ ಹಾಗೂ ನೆರವಿನಿಂದ ಸಾಧಿಸಬಲ್ಲ. ಹಾಗೆಯೇ ನಾಲ್ವರು ಜೊತೆಗೂಡಿ ಕೈಗೊಂಡ ಕಾರ್ಯದಿಂದ ಅವರೆಲ್ಲರ ಆರ್ಥಿಕ,ಸಾಮಾಜಿಕ ಕಲ್ಯಾಣ ಸಾಧಿಸಬಹುದು.ಇದನ್ನೇ ಆರ್ಥಿಕ ಜೀವನದಲ್ಲಿ ಸಹಕಾರ ಎನ್ನಬಹುದು,ಆದರೆ ಈಗಿನ ಕರಾಟಗಿ ತಾಲೂಕಿನ ರಾಜಕೀಯ ಪ್ರಚೋದನೆಯಲ್ಲಿ ಸಹಕಾರ ಸಂಘಗಳು ಅಂತ್ಯಗೊಳ್ಳುತ್ತಿವೆ, ರಾಯಚೂರು ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಯ ಹಾಲು ಒಕ್ಕೂಟದ ಅಡಿಯಲ್ಲಿರುವ ಸಹಕಾರ ಸಂಘಗಳು ಇಂದು ನಶಿಸುತ್ತಿವೆ,ಇದಕ್ಕೆ ಕಾರಣ ಖಾಸಿಗೆ ಡೈರಿಗಳ ಪ್ರಜೋದಿಕರಣ,ಅದಕ್ಕೆ ಕಾರಣ ಗ್ರಾಮದ ಹಗಸಿಯ ಕಟ್ಟೆಯ ಹಿರಿಯರು,ರಾಜಕೀಯ ಬೆಳವಣಿಗೆ ಮತ್ತು ಜಾತಿಯ ಬೆಳವಣಿಗೆಯಲ್ಲಿ ಇಂದು ಸಹಕಾರ ಸಂಘಗಳನ್ನು ಅತ್ತಿಕ್ಕಲು ಗ್ರಾಮದ ಕೆಲ ಹಿರಿಯರು ಇದಕ್ಕೆ ಸಾಕ್ಷಿಯಾಗಿದ್ದಾರೆ,ಕಾರಟಗಿ ತಾಲೂಕಿನ ಸಿಂಗನಾಳ,ಕೋಟೆ ಕ್ಯಾಂಪು,ಗುಂಡೂರು ಗ್ರಾಮದಲ್ಲಿ ಜಾತಿ ಮತ್ತು ರಾಜಕೀಯ ದುರುದ್ದೇಶದಿಂದ ಮೂರು ಖಾಸಗಿ ಡೇರಿಗೆ ಸುಮಾರು ದಿನಗಳಿಂದ ನಡೆಯುತ್ತಿವೆ.ಇದು ಒಂದೇ ಗ್ರಾಮದಲ್ಲಿ ಅಲ್ಲ ಜಿಲ್ಲಾಧ್ಯಂತ ಖಾಸಗಿ ಡೈರಿಗಳು ಪ್ರಚೋದನೆ ಆಗುತ್ತಿದ್ದರು,ಆದರೂ ಇಲ್ಲಿಯ ಗ್ರಾಮದ ಮುಖ್ಯಸ್ಥರು ಸಹಕಾರ ಸಂಘದ ಬಗ್ಗೆ ಕಾಳಜಿ ವಹಿಸುತ್ತಿಲ್ಲ.ಒಂದು ವೇಳೆ ಕಾಳಜಿ ವಹಿಸಿದರು ಅದಕ್ಕೆ ರಾಜಕೀಯ ಜಾತಿಯ ಅಡ್ಡಗಾವಲಾಗುತ್ತಿವೆ,ಖಾಸಗಿ ಡೈರಿಗಳು ಸರಕಾರದ ಹಾಗೂ ಒಕ್ಕೂಟದ ನಿಯಮವನ್ನು ಉಲ್ಲಂಘಿಸಿ ಹಾಲು ಸಂಗ್ರಹಣೆ ಮಾಡುತ್ತಿವೆ,ಆದರೂ ಆಹಾರ ಮತ್ತು ನಾಗರಿಕ ಇಲಾಖೆಯ ಅಧಿಕಾರಿಗಳು ಗೊತ್ತಿದ್ದು ಗೊತ್ತಿಲ್ಲದಂತೆ ಮುಸುಕಿನಲ್ಲಿ ತಿರುಗಾಡುತ್ತಿದ್ದಾರೆ.ಖಾಸಗಿ ಡೈರಿಯ ಜಿಲ್ಲೆಗಳಲ್ಲಿ ಕಲಬೇರಿಕೆ ಹಾಲು ಸಂಗ್ರಹಣೆ ಮಾಡುತ್ತಿದ್ದರು, ಬಳ್ಳಾರಿ ಹಾಲು ಒಕ್ಕೂಟವು 3.5 ಪ್ಯಾಟ್ 8.5 ಎಸ್.ಎನ್.ಎಫ್ 30.50 ಪೈಸೆ ರೈತರಿಗೆ ದರ ನೀಡುತ್ತಿದೆ,ಇದಕ್ಕಿಂತ ಕಡಿಮೆ ಫ್ಯಾಟ್ ಎಸ್ಎಂಎಫ್ ಬಂದರೆ,ಸರಕಾರದ ಲೀಟರಿಗೆ ಐದು ರೂಪಾಯಿ ಪ್ರೋತ್ಸಾಹ ಧನ ಬರುವುದಿಲ್ಲ,ಮಾನವ ಜೀವನ ಚಕ್ರದ ವಿಧಾನದಲ್ಲಿ ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆಯನ್ನು ಕಾಯಿದೆಯು ಒದಗಿಸುತ್ತದೆ,ಜನರು ಘನತೆಯಿಂದ ಜೀವನ ನಡೆಸಲು ಮತ್ತು ಅದಕ್ಕೆ ಸಂಬಂಧಿಸಿದ ಅಥವಾ ಪ್ರಾಸಂಗಿಕ ವಿಷಯಗಳಿಗೆ ಕೈಗೆಟುಕುವ ಬೆಲೆಯಲ್ಲಿ ಗುಣಮಟ್ಟದ ಆಹಾರದ ಸಾಕಷ್ಟು ಪ್ರಮಾಣದ ಪ್ರವೇಶವನ್ನು ಖಾತ್ರಿಪಡಿಸುತ್ತದೆ.
[2013 ರ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (NFSA) ಭಾರತದ ಎಲ್ಲಾ ರಾಜ್ಯಗಳು ಮತ್ತು UTಗಳಲ್ಲಿ ಜಾರಿಗೆ ತರಲಾಗುತ್ತಿದೆ.IAS ಪರೀಕ್ಷೆಯ GS-II ಅಡಿಯಲ್ಲಿ ವಿಷಯವು ಮಹತ್ವದ್ದಾಗಿದೆ .
ಆಹಾರ ಭದ್ರತೆಯ ಪರಿಕಲ್ಪನೆಯು ಕಾಲಾನಂತರದಲ್ಲಿ ವಿಕಸನಗೊಂಡಿತು.ಆಹಾರ ಭದ್ರತೆಯ ನಾಲ್ಕು ಸ್ತಂಭಗಳೆಂದರೆ ಲಭ್ಯತೆ,ಪ್ರವೇಶ,ಬಳಕೆ ಮತ್ತು ಸ್ಥಿರತೆ. [4] ಜೊತೆಗೆ ಇನ್ನೂ ಎರಡು ಆಯಾಮಗಳು ಪ್ರಮುಖವಾಗಿವೆ:ಸಂಸ್ಥೆ ಮತ್ತು ಸಮರ್ಥನೀಯತೆ ಆಹಾರ ಭದ್ರತೆಯ ಈ ಆರು ಆಯಾಮಗಳು ಆಹಾರದ ಹಕ್ಕಿನ ಪರಿಕಲ್ಪನಾ ಮತ್ತು ಕಾನೂನು ತಿಳುವಳಿಕೆಗಳಲ್ಲಿ ಬಲಪಡಿಸಲಾಗಿದೆ [5] [6] 1996 ರಲ್ಲಿ ವಿಶ್ವ ಆಹಾರ ಶೃಂಗಸಭೆಯು “ಆಹಾರವನ್ನು ರಾಜಕೀಯ ಮತ್ತು ಆರ್ಥಿಕ ಒತ್ತಡಕ್ಕೆ ಸಾಧನವಾಗಿ ಬಳಸಬಾರದು” ಎಂದು ಘೋಷಿಸಲಾಗಿದೆ [7] [8]
ಆದರೆ ಖಾಸಗಿ ಡೈರಿಗಳಿಗೆ ಪ್ಯಾಟ್ ಮತ್ತು ಎಸ್ಎಂಎಸ್ ಲೆಕ್ಕಿಸದೆ ಮತ್ತು ಸರಕಾರದ ಯಾವುದೇ ನಿರ್ಬಂಧವಲ್ಲದೆ ಕಲಬೆರಿಕೆ ಹಾಲು ಸಂಗ್ರಹಣೆ ಮಾಡುತ್ತದೆ,ಮೊಸರು ಮತ್ತು ಹಾಲು ಮಾರಾಟದಲ್ಲಿ, ಕೆಎಂಎಫ್,ಎರಡು ದಿನ ಮಾತ್ರ ಮಾರಾಟಕ್ಕೆ ಕಾಲಾವಕಾಶ ಇದೆ,ಆದರೆ ಖಾಸಿಗಿಯ ದೊಡ್ಡ ಇನ್ನಿತರ ಮಾರುಕಟ್ಟೆ ಆಹಾರ ಭದ್ರತೆಯನ್ನು ಕಾಯ್ದಿರಿಸುತ್ತಿಲ್ಲ, 15 ದಿನದವರೆಗೆ ಮೊಸರು ಮತ್ತು ಹಾಲನ್ನು ಮಾರಾಟ ಮಾಡಬಹುದು,ಇದಕ್ಕೆ ಸರಕಾರವಾಗಲಿ ಸರಕಾರದ ಆಡಳಿತ ಅಧಿಕಾರಿಗಳಾಗಲಿ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ,ಗ್ರಾಮದ “ಹಿರಿಯರು ಹಾಗೂ ಸರಕಾರದ ಸಹಕಾರ ಇಲ್ಲದಂತೆ ಆಗಿದೆ.” ರೈತರ ಜೀವನ ಹಿಂಡಿ”ಯಾಕೆ ಇಲ್ಲಿ ರಾಜಕೀಯ ಮತ್ತು ಜಾತಿಯ ಪ್ರಚೋದನೆ ಹೆಚ್ಚು ಕಾಣುತ್ತಿದೆ ಎಂದು ಹಾಲು ಉತ್ಪಾದಕರ ಸಹಕಾರ ಸಂಘದ ಸಹಾಯಕರಾದ ಯಮನೂರ ಎಂ ಸಿಂಗನಾಳ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ