ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ದೇಶದ ಭದ್ರತೆ ಉಳಿವಿಗಾಗಿ ಬಿಜೆಪಿ ಪಕ್ಷದ ಅಭ್ಯರ್ಥಿ ಕೆ.ಬಸವರಾಜ ಪರ ಮತಯಾಚನೆ

ಕೊಪ್ಪಳ/ಯಲಬುರ್ಗಾ:ದೇಶದ ಉಳಿವಿಗಾಗಿ, ಸುರಕ್ಷಿತ ರಕ್ಷಣೆ,ಭದ್ರತೆ,ಅಭಿವೃದ್ಧಿಗಾಗಿ ಮತ್ತು ನರೇಂದ್ರ ಮೋದಿಯವರ ಉತ್ತಮ ಆಡಳಿತಕ್ಕಾಗಿ ಬಿಜೆಪಿ ಪಕ್ಷದ ಅಭ್ಯರ್ಥಿ ಕೆ.ಬಸವರಾಜ ಅವರಿಗೆ ಮತವನ್ನು ನೀಡಬೇಕು ಎಂದು ಯಲಬುರ್ಗಾ ವಿಧಾನ ಸಭಾ ಕ್ಷೇತ್ರದ ಬೇವೂರ,ಕರಮುಡಿ ವಣಗೇರಿ,ಸಂಕನೂರ,ಯಲಬುರ್ಗಾ ಸೇರಿದಂತೆ ವಿವಿಧ ಭಾಗದಲ್ಲಿ ಮಾಜಿ ಸಚಿವ ಹಾಲಪ್ಪ ಆಚಾರ ಅವರು ಪಕ್ಷದ ಗೆಲುವಿಗಾಗಿ ಮತಯಾಚನೆ ಮಾಡಿ, ಭ್ರಷ್ಟಚಾರ ಭಯೋತ್ಪಾದನೆ ಕೊಟ್ಟಿರುವ ಕಾಂಗ್ರೇಸ್ ಪಕ್ಷವನ್ನು ವಿರೋಧಿಸಿ ಬಿಜೆಪಿ ಪಕ್ಷವನ್ನು ಬೆಂಬಲಿಸಬೇಕು ಎಂದರು.
ಮತ್ತೊಮ್ಮೆ ಮೋದಿಯವರ ಆಡಳಿತವನ್ನು ನೋಡಿ ಮತವನ್ನು ಹಾಕುವಂತೆ ಸಚಿವ ಎಸ್.ಕೆ.ಬೇಳ್ಳೂಬಿ ಅವರು ಮಾತನಾಡಿ,ಯಲಬುರ್ಗಾ ಕ್ಷೇತ್ರದ ರೈತರ ಹಿತವನ್ನು ಕಾಪಡುವಲ್ಲಿ ಕೆರೆ ತುಂಬಿಸುವ ಯೋಜನೆ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸ ಕಾರ್ಯವನ್ನು ಮಾಡಿರುವ ಮಾಜಿ ಸಚಿವ ಹಾಲಪ್ಪ ಆಚಾರ ಅವರ ಕೆಲಸ ಕಾರ್ಯಗಳನ್ನು ನೋಡಿ ಬಿಜೆಪಿ ಪಕ್ಷಕ್ಕೆ ಮತ ನೀಡಬೇಕು ಎಂದು ಮನವಿ ಮಾಡಿದ ಬಳಿಕ ನಮ್ಮ ಪಕ್ಷದಲ್ಲಿ ಅಧಿಕಾರವನ್ನು ಉಂಡು,ಉಂಡ ಮನೆಗೆ ದ್ರೋಹ ಮಾಡಿದ ವ್ಯಕ್ತಿಗಳ ಮಾತನ್ನು ನಂಬಬೇಡಿ,ರಾಜಕಾರಣದಲ್ಲಿ ಇಂತವರು ಇರುತ್ತಾರೆ ಎಂದು ಮತದಾರ ಅವರ ಗಮನಕ್ಕೆ ಕಿವಿಮಾತನ್ನು ತಿಳಿಸಿದರು.
ಈ ವೇಳೆ ಜಿಲ್ಲಾಧ್ಯಕ್ಷ ನವೀನಕುಮಾರ ಗುಳಗಣ್ಣನವರ,ಮುಖಂಡರಾದ ಶಿವಶಂಕರ ದೇಸಾಯಿ,ಬಸಲಿಂಗಪ್ಪ ಭೂತೆ,ಸಿ.ಎಚ್.ಪೊಲೀಸ್ ಪಾಟೀಲ,ಅರವಿಂದಗೌಡ ಪಾಟಲ್,ಬಸವರಾಜ ಗೌರಾ,ಮಲ್ಲನಗೌಡ ಕೋನನಗೌಡ್ರ,ಕೆಂಚಪ್ಪ ಹಳ್ಳಿ, ಶರಣಪ್ಪ ಈಳಗೇರ,ರಂಗನಾಥ ವಲಂಕೊಂಡಿ, ಮಾರುತಿ ಗಾವರಾಳ,ಶೀವಲೀಲಾ ದಳವಾಯಿ,ಶಕುಂತಲಾ ಮಾಲಿ ಪಾಟೀಲ,ಕವಿತಾ ಉಳ್ಳಾಗಡ್ಡಿ,ಅಂದಮ್ಮ ಬಳಿಗೇರಿ ಸೇರಿದಂತೆ ಬಿಜೆಪಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಭಾಗವಹಿಸಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ