ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದ ನಿವಾಸಿಯಾದ ರವಿ ರಾಠೋಡ ಅವರು ದುಬೈಯಲ್ಲಿ ಖಾಸಗಿ ಕಂಪನಿಯಲ್ಲಿ ಕಾರ್ಯನಿವಹಿಸುತ್ತಿದ್ದು ಮತದಾನ ನಮ್ಮ ಹಕ್ಕು ಎನ್ನುವಂತೆ ಮತ ಚಲಾಯಿಸಲು ದುಬೈಯಿಂದ ಬಂದು ತಮ್ಮ ಕುಟುಂಬ ಪರಿವಾರದೊಂದಿಗೆ ಮತ ಚಲಾಯಿಸಿ ತಮ್ಮ ಮನೆಯಲ್ಲಿ ಇರುವ ಅಜ್ಜಿಯ ಜೊತೆ ಮತದಾನ ಮಾಡಿದ ಸೆಲ್ಪಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುವ ಮೂಲಕ ಯುವಕರಿಗೆ ಸ್ಪೂರ್ತಿಯಾದರು.
