“ಥೂ ಚಾಂಡಾಲ….ಇವತ್ತೂ ಕುಡಿದು ಬಂದಿದೀಯಾ… ನಿನ್ನ ಹೆಂಡ್ತಿ ಮಕ್ಕಳ ಬಗ್ಗೆ ಒಂಚೂರು ಕಾಳಜಿ ಇಲ್ವಾ ನಿನಗೆ…?” ಅವಳು ಕೋಪದಿಂದ ಅರಚಿದಳು..
“ಲೇ… ನಂಗೆ ಹೇಳ್ತೀಯಾ…ಇರು ನಿಂಗೆ ಮಾಡ್ತೀನಿ…” ಎನ್ನುತ್ತಾ ಆತ ಅವಳಿಗೆ ಹೊಡೆಯಲು ಶುರು ಮಾಡಿದ… ಇದನ್ನೆಲ್ಲಾ ನಿತ್ಯವೂ ನೋಡಿ ಬೇಸತ್ತಿದ್ದ ಅವರ 12 ವರ್ಷದ ಮಗ ಅಲ್ಲೇ ಇದ್ದ ಚೂರಿಯನ್ನು ಕೈಗೆತ್ತಿಕೊಂಡ…!
✍🏻ಮನು ಎಸ್ ವೈದ್ಯ