ಕೊಪ್ಪಳ/ಕಾರಟಗಿ:ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಕಾರಟಗಿ ಪಟ್ಟಣದಲ್ಲಿ ಮೇ 10ರಂದು ಶುಕ್ರವಾರ 21 ಜೋಡಿ ಉಚಿತ ಸಾಮೂಹಿಕ ಮದುವೆ ನಡೆಯುವವು ಎಂದು ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಯಲ್ಲಪ್ಪ ಕಟ್ಟಿಮನಿ ತಿಳಿಸಿದ್ದಾರೆ.ಭಗವಾನ್ ಬುದ್ಧ ವಿಶ್ವಗುರು ಬಸವಣ್ಣ ಭಾರತ ರತ್ನ ಡಾ.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ್ ರಾಮ್ ಜಯಂತಿ ಅಂಗವಾಗಿ ಸಾಮೂಹಿಕ ಮದುವೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದ ಶ್ರೀ ಸಿದ್ದೇಶ್ವರ ರಂಗಮಂದಿರದ ಆವರಣದಲ್ಲಿ ಸಾಮೂಹಿಕ ಮದುವೆ ಮೇ 10ರಂದು ನಡೆಯುವವು.ಭಾಜಾ ಭಜಂತ್ರಿಗಳೊಂದಿಗೆ ದಾರ್ಶನಿಕರ ಭಾವಚಿತ್ರದ ಮೆರವಣಿಗೆ ಪಟ್ಟಣದ 18ನೇ ವಾರ್ಡ್ ಇಂದಿರಾನಗರದ ವಿರುಪಣ್ಣ ತಾತನ ದೇವಸ್ಥಾನದಿಂದ ಸಾಮೂಹಿಕ ಮದುವೆ ಕಾರ್ಯಕ್ರಮ ನಡೆಯುವ ವೇದಿಕೆ ತನಕ ತೆರಳಲಿದೆ.
