ಕೊಪ್ಪಳ:ಮಹನೀಯರ ಜಯಂತಿಗಳು ಕೇವಲ ಆಚರಣೆಗೆ ಸೀಮಿತವಾಗದೇ ಅವರ ಆದರ್ಶ ಗುಣಗಳನ್ನು ನಾವು ನೀವೆಲ್ಲರೂ ಕೂಡಾ ಮೈಗೂಡಿಸಿಕೊಂಡು ಬದುಕು ಸಾಗಿಸಬೇಕು ಎಂದು ಮಾಜಿ ಸಚಿವ ಅಮರೇಗೌಡ ಬಯ್ಯಾಪೂರ ಅವರು ಕುಕನೂರ ತಾಲೂಕಿನ ತಳಕಲ್ ಗ್ರಾಮದಲ್ಲಿ ಹಮ್ಮಿಕೊಂಡ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ಹಾಗೂ ಮಹಾಯೋಗಿ ವೇಮನ ಮತ್ತು ಬಸವಣ್ಣನವರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಿದ್ದಿ ಸಮಾಜಗಳಲ್ಲಿರುವ ಪಿಡುಗುಗಳನ್ನು ತೊಲಗಿಸಲು ಶಿವಶರಣರು, ಶರಣೆಯರು ತಮ್ಮ ವಚನ ಸಾಹಿತ್ಯದ ಮೂಲಕ ಮನುಕುಲದ ಏಳ್ಗೆ ಮಾಡಿದ್ದಾರೆ ಎಂದರು.ಬಳಿಕ ಸಿ.ಎಂ ಆರ್ಥಿಕ ಸಲಹೆಗಾರ,ಶಾಸಕ ಬಸವರಾಜ ರಾಯರಡ್ಡಿ ಅವರು ಮಾತನಾಡಿ ಧರ್ಮಗಳ ಹೆಸರಿನಲ್ಲಿ ಶೋಷಣೆಗಳು ನಡೆದವು.ಕೆಲವೊಂದು ಧರ್ಮಗಳಲ್ಲಿ ಜಾತಿ,ಕಂದಾಚಾರ,ಮೌಢ್ಯಗಳನ್ನು ನಡೆಯುತ್ತಿದ್ದವು ಅವುಗಳನ್ನು ತೊಡೆದು ಹಾಕಲು ಸಮಕಾಲೀನ ಶಿವ ಶರಣರು ಮನುಷ್ಯರಲ್ಲಿ ಐಕತ್ಯೆ, ಹಾಗೂ ಸಮಾನತೆ ನೀಡುವಲ್ಲಿ ಮಹಾ ಮಹಿಮರಾದವರು ಜಗಜ್ಯೋತಿ ಬಸವೇಶ್ವರ ಎಂದು ಮಾತನಾಡಿ,ವೇಮನ ಒಬ್ಬ ಯೋಗಿಯಾಗಿದ್ದು ಆತ ವೈಷ್ಣವ ಪದ್ದತಿಯಂತೆ ಪೂಜೆ ಇದ್ದು ಹೇಮರಡ್ಡಿ ಮಲ್ಲಮ್ಮನವರ ಶೈವ ಪದ್ದತಿಯವರಾಗಿದ್ದು ಮಲ್ಲಮ್ಮನವರ ಸಮಕಾಲೀನವರು ವೇಮನರಲ್ಲ, ಅವರು ಮಲ್ಲಮ್ಮನವರ ನಂತರ 200ವರ್ಷಗಳ ನಂತರದವರಾಗಿದ್ದು ಅವರದು ವೈಷ್ಣವ ಪದ್ದತಿ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಾನಿಧ್ಯವನ್ನು ವಹಿಸಿ ಅರಳಿಹಳ್ಳಿ ರಾಜರಾಜೇಶ್ವರಿ ಶ್ರೀಗಳು ಮಾತನಾಡಿ ಪ್ರತಿಯೊಬ್ಬ ಮಹಿಳೆಯರು ಹೇಮರಡ್ಡಿ ಮಲ್ಲಮ್ಮನವರ ಜೀವನ ಶೈಲಿ ಅಳವಡಿಸಿಕೊಂಡು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಮೂಲಕ ಸಮಾಜದಲ್ಲಿ ಸುಸಂಸ್ಕೃತರನ್ನಾಗಿಸಬೇಕು ಎಂದು ಮಹಿಳೆಯರಿಗೆ ಕಿವಿ ಮಾತನ್ನು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ಸಂಗಪ್ಪ ವಕ್ಕಳದ ವಹಿಸಿ ಮಾತನಾಡಿ ರೆಡ್ಡಿ ಕುಟುಂಬದವರು ರೈತಾಪಿ ವರ್ಗದವರು ಕುಟುಂಬಗಳಾಗಿದ್ದು ಸ್ವಾಸ್ಥ ಸಮಾಜವನ್ನು ನಿರ್ಮಾಣ ಮಾಡಲು ಮಹಿಳೆಯರ ಪಾತ್ರ ಪ್ರಮುಖವಾದುದು ಅದರ ಜೊತೆಯಲ್ಲಿ ನಮ್ಮ ಸಮಾಜದಿಂದ ಬೇರೆ ಬೇರೆ ಸಮಾಜದ ಪ್ರತಿಭೆಗಳನ್ನ ಗುರುತಿಸಿ ಇಂತ ವೇದಿಕೆಯಲ್ಲಿ ಸನ್ಮಾನಿಸಬೇಕು ಹಾಗೂ ಸಮಾಜದಿಂದ ಮುಂದಿನ ದಿನಗಳಲ್ಲಿ ಹೇಮರಡ್ಡಿ ಮಲ್ಲಮ್ಮನವರ ದೇವಸ್ಥಾನ,ಶಿಕ್ಷಣ ಮಂಡಳಿ,ಕಲ್ಯಾಣ ಮಂಟಪ ಮಾಡಲು ತೀರ್ಮಾನ ಮಾಡಿದ್ದು ಸಮಾಜದ ಮುಖಂಡರು ಆರ್ಥಿಕ ಸಹಕಾರದೊಂದಿಗೆ ಕಾರ್ಯ ಪ್ರಗತಿಯಲ್ಲಿದೆ ಮುಂದೆ ನಮ್ಮ ಸಮುದಾಯವಲ್ಲದೇ ಎಲ್ಲರಿಗೂ ಅನೂಕೂಲವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಾನಿಧ್ಯವನ್ನು ದದೇಗಲ್ ಆತ್ಮಾನಂದ ಭಾರತಿ ಶ್ರೀಗಳು ವಹಿಸಿದ್ದರು,ಈ ವೇಳೆ ರಡ್ಡಿ ಸಮಾಜದ ರಾಜ್ಯಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ,ಮುಖಂಡರಾದ ಜಗದೀಶ ಸಿಂಗನಾಳ,ಸಿ.ವಿ.ಚಂದ್ರಶೇಖರ್,ಆರ್.ಪಿ.ರಡ್ಡಿ’ , ಮಾಜಿ ತಾ.ಪಂ ಸದಸ್ಯೆ ಗೌರಮ್ಮ ನಾಗನೂರ, ಗಂಗಮ್ಮ ಗುಳಗಣ್ಣವರ್,ಝಹೀರಾ ಬೇಗಂ ಕೊಪ್ಪಳ,ಮಂಜುಳಾ ಕರಡಿ,ಗಂಗಮ್ಮ ಗಡಗಿ , ಯಂಕಣ್ಣ ಯರಾಶಿ,ಬಿ.ಎಮ್.ಶಿರೂರ,ಶಿವಕುಮಾರ ಆದಾಪೂರ,ಚಂದ್ರಶೇಖರಯ್ಯ ಹಿರೇಮಠ,ತಿಮ್ಮಣ್ಣ ಚೌಡಿ ಕಾರ್ಯಕ್ರಮ ನಿರ್ವಹಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.