ತಾಯಿಯ ಈ ಸ್ಫೂರ್ತಿದಾಯಕವಾದ ಮಾತಿನಿಂದ ತಂದೆಯನ್ನು ಕಳೆದುಕೊಂಡೆ ಎಂದು ಚಿಂತಿಸದೆ ಮನೆ ಜವಾಬ್ದಾರಿಯನ್ನು ತನ್ನ 13ನೇ ವಯಸ್ಸಿನಲ್ಲಿ ಹೊತ್ತುಕೊಂಡು ನಾಲ್ಕಾರು ಎಮ್ಮೆಗಳನ್ನು ಸಾಕಿ ತನ್ನ ಕುಟುಂಬಕ್ಕೆ ನೆರವಾಗುತ್ತಿದ್ದ.
ಪ್ರತಿದಿನ ಮುಂಜಾನೆ ಎದ್ದು ಕೂಡಲೇ ದನಕರುಗಳಿಗೆ ಮೇವು ಹುಡುಕಾಟದಲ್ಲಿ ಜೀವನವೇ ಸಾಕೆನಿಸುತ್ತಿತ್ತು ಏಕೆಂದರೆ ಸ್ವಂತ ಜಮೀನು ಇಲ್ಲ ಯಾರ್ ಹೊಲಕ್ಕೆ ಹೋದರೆ ಯಾರು ಬರುತ್ತಾರೋ ಎಂಬೆಲ್ಲಾ ಆತಂಕದಲ್ಲೇ ಜೀವನ ಸಾಗಿಸುತಿದ್ದ ಚಿಕ್ಕ ವಯಸ್ಸಿನಲ್ಲಿ ಜವಾಬ್ದಾರಿಗಳು ಹೆಚ್ಚಿದಂತೆಲ್ಲಾ ಮುಖದ ಮೇಲಿನ ಮಂದಹಾಸಗಳು ಕುಗ್ಗುತ್ತಾ ತೊಡಗಿದವು.
ಇದೇನಪ್ಪ ಜೀವನ ಈ ನರಕದ ಜೀವನ ಯಾರಿಗೂ ಬರಬಾರದು ಎಂದು ಯಾರೂ ಇಲ್ಲದ ಸ್ಥಳಕ್ಕೆ ಹೋಗಿ ಕಣ್ಣೀರು ಚಿಮ್ಮಿಸುತಿದ್ದ.ಆಗ ಅವನು 8ನೇ ತರಗತಿ ಓದುತಿದ್ದ ಸರದಿಯ ಗೆಳೆಯರು ಮನಸ್ಸಿಗೆ ಬಂದಂತೆ ಕುಣಿಯುವುದು ನಲಿಯುವುದು ಮೋಜು ಮಸ್ತಿಯಲ್ಲಿ ತೊಡುವುದು ನೋಡಿದಾಗೆಲ್ಲಾ ಕಣ್ಣಲ್ಲಿ ನೀರು ಜಾರುವುದು 9ನೇ ತರಗತಿಗೆ ಬಂದಾಗ ತನ್ನಿಬ್ಬರ ಅಕ್ಕಂದಿಯರನ್ನು ವಿವಾಹ ಮಾಡಿಕೊಡುವುದು ಮತ್ತು ತನ್ನ ತಂಗಿಯನ್ನು ಚೆನ್ನಾಗಿ ಓದಿಸುವುದು ಇವನ ಹೆಗಲ ಮೇಲೆ ಬಿದ್ದಿತು ಈ ಪುಟ್ಟ ಬಾಲಕನ ಜವಾಬ್ದಾರಿಗಳನ್ನು ಕಂಡರೆ ಎಂತಹ ಕಟುಕನಿಗೂ ಕಣ್ಣಲ್ಲಿ ನೀರು ಬರುತ್ತದೆ ಒಬ್ಬನೇ ಮಗ ಸುಖದ ಸಪ್ಪತ್ತಿಗೆಯಲ್ಲಿ ಬೆಳೆಯ ಬೇಕಾದ ಮಗ ಚಿಕ್ಕ ವಯಸ್ಸಿನಲ್ಲೇ ಮನೆ ಜವಾಬ್ದಾರಿ ಹೊತ್ತನೆಂದು ತಾಯಿ ಮನದೊಳಗೆ ಮರುಗುತ್ತಿದ್ದಳು ಇಂಥ ಪರಿಸ್ಥಿತಿಯಲ್ಲಿ ತಾಯಿ ಎದೆಗುಂದಲಿಲ್ಲ ಬದಲಿಗೆ ಸ್ಪೂರ್ತಿದಾಯಕವಾದ ಮಾತುಗಳನ್ನು ಹೇಳಿ ಮಗನನ್ನು ಶಾಲೆಗೆ ಕಳಿಸ್ತಿದ್ದಳು.ಕುಟುಂಬದ ಜವಾಬ್ದಾರಿ ಹೊತ್ತ ಮಗ ಅಮ್ಮ ನಾನು ಶಾಲೆಗೆ ಹೋಗುವುದು ಬೇಡ ನನಗೆ ಓದಲು ಬರೆಯಲು ಬರುತ್ತೆ ಜೀವನ ನಡೆಸಲು ರಟ್ಟೆಯಲ್ಲಿ ಶಕ್ತಿ ತಲೆಯಲ್ಲಿ ಯುಕ್ತಿ ಇದ್ದರೆ ಸಾಕಮ್ಮ ಎಂದು ಮಾತನಾಡುತ್ತಿದ್ದ ಈ ಮಾತುಗಳನ್ನು ಕೇಳಿದ ತಾಯಿ ಒಳಗೊಳಗೇ ಮರಗುತಿದ್ದಳು ಮಗನನ್ನು ಶಾಲೆ ಬಿಡಿಸಿ ಕುಟುಂಬದ ಜವಾಬ್ದಾರಿ ಹೊರಿಸುವುದು ಅವಳಿಗೆ ಕೂಡ ಕಳವಳ ಎನಿಸುತ್ತಿತ್ತು ಮಗನ ಮಾತಿಗೂ ಬೆಲೆಕೊಟ್ಟು ತನ್ನ ಆಸೆಯನ್ನು ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ಬಲೆ ಮಗನೇ ನೀನು ಚಲಗಾರ ನಿನ್ನಲ್ಲಿ ಅಗಾಧವಾದ ಶಕ್ತಿ ಇದೆ ನೀನು ಪ್ರಯತ್ನಪಟ್ಟರೆ ಎಲ್ಲವನ್ನು ಸಾಧಿಸುವ ಛಲವಿದೆ ನಿಮ್ಮ ತಂದೆಯ ಆಸೆಯನ್ನು ಈಡೇರಿಸು ಎಂದು ಬಲವಾಗಿ ಹೇಳಿದ ಕಾರಣ ಅವನ ಮನಸ್ಸಿನ ಮೇಲೆ ಅಗಾಧವಾದ ಪರಿಣಾಮ ಬೀರಿ ಶಾಲೆಗೆ ಹೋಗುವ ಸಮಯದಲ್ಲೇ ತನ್ನ ಎಲ್ಲಾ ಕೆಲಸ ಮುಗಿಸಿ ಶಾಲೆಯನ್ನು ಆಗಾಗ ಬಿಟ್ಟು ತನ್ನ ಮನೆಯ ಕೆಲಸದಲ್ಲಿ ತೊಡಗುತ್ತಿದ್ದ.10ನೇ ತರಗತಿಗೆ ಕಲಿಟ್ಟಂತೆ ಮನೆಯ ಜವಾಬ್ದಾರಿಗಳು ಬಾಣಂತಿಯರಾದ ಅಕ್ಕಂದಿಯರು ಮನೆಗೆ ಬಂದಾಗ ಇನ್ನೂ ಕೆಲಸದ ಒತ್ತಡಗಳು ಹೆಚ್ಚಾದವು ಇದರ ನಡುವೆ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಸಮೀಪಿಸುತ್ತಿದ್ದಂತೆ ಅಭ್ಯಾಸ ಮಾಡೋಕೆ ಸಮಯವೇ ಸಿಗುತ್ತಿರಲಿಲ್ಲ ಹೇಗೋ ದೇವರ ದಯದಿಂದ ಪರೀಕ್ಷೆ ಬರೆದು 56ಫಲಿತಾಂಶ ಬಂದ ಕೂಡಲೇ ತನ್ನ ತಾಯಿಯ ಆಶೀರ್ವಾದವನ್ನು ಪಡೆದು ತದನಂತರ ಎಲ್ಲಾ ದೇವರಿಗೂ ಕೈಮುಗಿದು ನಮಸ್ಕರಿಸಿ ಮಂದಹಾಸದ ನಗುವಿನ ಮೂಲಕ ಕಂಗೊಳಿಸತೊಡಗಿದ.
ಕಷ್ಟ ದುಃಖಗಳು ಯಾರಿಗೆ ಇಲ್ಲ ಪ್ರತಿಯೊಬ್ಬರಿಗೂ ಒಂದಿಲ್ಲ ಒಂದು ರೀತಿಯ ಕಷ್ಟ ನೋವುಗಳು ಪರಿಪಾಲಿಸುತ್ತಿರುತ್ತವೆ ಯಾವುದಕ್ಕೂ ಹೆದರದೆ ಮುಂದೆ ಹೆಜ್ಜೆ ಇಡುತ್ತಾ ಸಾಗಬೇಕು.ನಾವು ಮಾಡುತ್ತಿರುವ ಕರ್ಮಗಳ ಫಲವಾಗಿ ಒಳ್ಳೆಯದು ಕೆಟ್ಟದು ಲಭಿಸುತ್ತೆ.ಉದಾಹರಣೆಗೆ ಒಂದು ದಿನ ಅರ್ಜುನ ಮತ್ತು ಕೃಷ್ಣ ವಿಹಾರಕ್ಕೆಂದು ಸುತ್ತುತ್ತಿರುವ ಸಂದರ್ಭದಲ್ಲಿ ಬ್ರಾಹ್ಮಣನೊಬ್ಬನು ಭಿಕ್ಷೆ ಬೇಡುತ್ತಾ ನಿಂತಾಗ ಇದನ್ನು ಅರಿತ ಅರ್ಜುನ ಬಂಗಾರದ ನಾಣ್ಯಗಳು ತುಂಬಿದ ಒಂದು ಚೀಲವನ್ನು ಕೊಡುತ್ತಾನೆ.ಆ ಚೀಲನೊಬ್ಬ ಕಳ್ಳ ಕದ್ದುಕೊಂಡು ಹೋದಾಗ ಮತ್ತೆ ಮರುದಿನ ಬ್ರಾಹ್ಮಣ ಭಿಕ್ಷೆ ಬೇಡುತ್ತಾ ನಿಂತಿದ್ದನ್ನು ಕಂಡು ಅರ್ಜುನ ವಿಚಾರಿಸಿದಾಗ ಕಳ್ಳನೊಬ್ಬ ಕಿತ್ತುಕೊಂಡು ಹೊಯ್ದ ಎನ್ನುತ್ತಾನೆ ಆಗ ಮತ್ತೆ ಅರ್ಜುನ ಎರಡು ವಜ್ರದ ಮುತ್ತುಗಳನ್ನು ನೀಡುತ್ತಾನೆ.ಬ್ರಾಹ್ಮಣ ಆ ಮುತ್ತುಗಳನ್ನು ತೆಗೆದುಕೊಂಡು ನೀರು ತುಂಬುವ ಬಿಂದಿಗೆಯಲ್ಲಿ ಇಡುತ್ತಾನೆ.ಬ್ರಾಹ್ಮಣನ ಪತ್ನಿ ಮಣ್ಣಿನ ಬಿಂದಿಗೆಯನ್ನು ತೆಗೆದುಕೊಂಡು ನೀರು ತುಂಬಲು ಹೋದಾಗ ಆ ಮುತ್ತುಗಳು ನದಿಯಲ್ಲಿ ಜಾರಿ ಬೀಳುತ್ತವೆ ಬ್ರಾಹ್ಮಣ ಆಲೋಚನೆ ಮಾಡುತ್ತಾ ನನ್ನ ಸಮಯವೇ ಸರಿ ಇಲ್ಲ ಎಂದು ಕುಗ್ಗಿ ಮನದೊಳಗೆ ಯೋಚಿಸುತ್ತಾ ಮತ್ತೆ ಭಿಕ್ಷೆ ಬೇಡುತ್ತಾ ನಿಂತಿರುತ್ತಾನೆ ಇದನ್ನು ಕಂಡ ಬ್ರಾಹ್ಮಣ ನಡೆದ ಪ್ರಸಂಗವನ್ನು ವಿಚಾರಿಸಿದಾಗ ಅರ್ಜುನ ಮತ್ತೆ ಎರಡು ನಾಣ್ಯಗಳನ್ನು ಕೊಡುತ್ತಾನೆ.ಆ ನಾಣ್ಯಗಳನ್ನು ಜೋಪಾನವಾಗಿ ತೆಗೆದುಕೊಂಡು ಹೋಗುವ ಸಮಯದಲ್ಲಿ ಮೀನುಗಾರನೊಬ್ಬ ಮೀನು ಹಿಡಿದುಕೊಂಡು ಹೋಗುತ್ತಿರುತ್ತಾನೆ ಆ ಮೀನುಗಳ ಮರುಗಾಟ ನೋಡಿದ ಬ್ರಾಹ್ಮಣ ಎರಡು ನಾಣ್ಯಗಳನ್ನು ಕೊಟ್ಟು ಎರಡು ಮೀನುಗಳನ್ನು ತೆಗೆದುಕೊಂಡು ನದಿಯಲ್ಲಿ ಬಿಡುವ ಸಮಯದಲ್ಲಿ ಎರಡು ಮೀನಿನ ಬಾಯಲ್ಲಿದ್ದ ವಜ್ರದ ಮುತ್ತುಗಳು ಹೊರಬಂದವು ಆಗ ಬ್ರಾಹ್ಮಣ ಸಿಕ್ತು….ಸಿಕ್ತು… ಸಿಕ್ತು…ಮುತ್ತುಗಳು ಸಿಕ್ತು…ಎಂದು ಸಂಭ್ರಮ ಪಟ್ಟಾಗ ಅಲ್ಲೇ ಪಕ್ಕದಲ್ಲಿದ್ದ ಕಳ್ಳ ಈ ಬ್ರಾಹ್ಮಣಿಗೆ ನಾನೇ ಕಳ್ಳ ಎಂದು ಗೊತ್ತಾಗಿದೆ ಎಂದು ತಿಳಿದು ಬಂಗಾರ ತುಂಬಿದ ಚೀಲವನ್ನು ಬ್ರಾಹ್ಮಣನಿಗೆ ಎಸೆದು ಓಡಿ ಹೋಗುತ್ತಾನೆ. ಬ್ರಾಹ್ಮಣನ ಒಳ್ಳೆಯ ವಿಚಾರದಿಂದ ಕಳೆದುಕೊಂಡ ಎಲ್ಲಾ ವಸ್ತುಗಳು ದೊರಕಿದವು.ನಮ್ಮ ನಡೆ-ನುಡಿ, ಸಹಾಯ ಸಹಕಾರ ಒಳ್ಳೆಯ ಮನೋಭಾವನೆ ನಮ್ಮಲ್ಲಿದ್ದರೆ ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ದೇವರು ನಮ್ಮಣ್ಣ ಕೈಬಿಡುವುದಿಲ್ಲ ಎಂಬುವುದಕ್ಕೆ ಒಂದು ಚಿಕ್ಕ ಉದಾಹರಣೆಯಾಗಿದೆ.
ಲೇಖನ:ಆನಂದ ಬಿರಾದಾರ,ಲೇಖಕರು-ಅಥಣಿ