ಕೊಪ್ಪಳ:ಸಾಮೂಹಿಕ ವಿವಾಹಗಳನ್ನು ಮಾಡುವ ಮೂಲಕ ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ಬಡವರ ಪಾಲಿಗೆ ವರದಾನವಾಗಿವೆ ಇಂದು ೧೫ ಜೋಡಿ ಮದುವೆ ಮಾಡಿರುವ ಸೋಂಪೂರ ಗ್ರಾಮದ ಪುರಾಣ ಸಮಿತಿಯ ಹಿರಿಯರ ಕಾರ್ಯ ಶ್ಲ್ಯಾಘನೀಯವಾದದು ಎಂದು ಶ್ರೀ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ತುಲಾಭಾರ ಸ್ವೀಕರಿಸಿ ಅವರು ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿನಲ್ಲಿರುವ ಸೊಂಪೂರ ಗ್ರಾಮದಲ್ಲಿ ಮಹಾಮಹಿಮ ಕಲಬುರ್ಗಿ ಶ್ರೀ ಶರಣಬಸವೇಶ್ವರ ೫೭ ನೇ ಜಾತ್ರಾ ಮಹೋತ್ಸವ,ಸಾಮೂಹಿಕ ವಿವಾಹ,251 ಮುತ್ತೈದಿಯರಿಗೆ ಉಡಿ ತುಂಬುವ ಕಾರ್ಯಕ್ರಮ,ತುಲಾಭಾರ ಕಾರ್ಯಕ್ರಮದಲ್ಲಿ ಮಾತನಾಡಿ,ಸತಿ ಪತಿಗಳು ತಮ್ಮ ಸಂಸಾರದ ಬದುಕನ್ನು ಸುಂದರವಾಗಿ ನಡೆಸಿಕೊಂಡು ಹೊಗುವ ಹೊಣೆಗಾರಿಕೆ ನಿಮ್ಮ ಮೇಲಿದೆ,ಒಬ್ಬರ ಎಡಕ್ಕೆ,ಬಲಕ್ಕೆ ಹೊಗಲಾರದೆ,ಆದರ್ಶ ದಾಂಪತ್ಯ ಜೀವನ ನಿಮ್ಮದಾಗಬೇಕು ಎಂದರು.ಬೆದವಟ್ಟಿಯ ಶಿವಸಂಗಮೇಶ್ವರ ಸ್ವಾಮೀಜಿ ಸಾನಿಧ್ಯವಹಿಸಿದ್ದರು. ಚೆನ್ನಯ್ಯ ಸ್ವಾಮಿ ಹಿರೇಮಠ ಪೂಜಾ ಕಾರ್ಯ ವಿಧಾನಗಳನ್ನು ನೇರವೇರಿಸಿದರು,ಪ್ರವಚನಕಾರ
ಗುಂಡಣ್ಣ ಶರಣರು ಹುಣಶ್ಯಾಳ,ಪುರಾಣ ಪಠಣ ಹಾಗೂ ಸಂಗೀತ ಬಳಗದ ಬನ್ನಿಕೊಪ್ಪದ ಮಹಮ್ಮದಶರೀಫಸಾಬ ಯಲಿಗಾರ,ಡೋಣಿಯ ಸಂಜೀವಕುಮಾರ್ ಗುರಿಕಾರ ಸಂಗೀತ ಸೇವೆ ನೀಡಿದರು.ಈ ವೇಳೆ ಸಮಿತಿಯ ಸರ್ವ ಪದಾಧಿಕಾರಿಗಳು,ಯುವಕರು ಮತ್ತು ಮಹಿಳೆಯರ ಕುಂಭ ಕಳಸದೊಂದಿಗೆ ಮೇರವಣಿಗೆ ಸಾಗಿ ನಂತರ ಅನ್ನ ಸಂತರ್ಪಣೆ ಜರುಗಿತು.ಸೋಮನಗೌಡ್ರ ಕಾರ್ಯಕ್ರಮ ನಿರೂಪಿಸಿದರು.ಸಂಜೆ ೫.೩೦ ಕ್ಕೆ ಶ್ರೀ ಶರಣಬಸವೇಶ್ವರರ ಮಹಾರಥೋತ್ಸವ ಜರುಗಿತು ಸುತ್ತಮುತ್ತಲಿನ ಅಪಾರ ಭಕ್ತರು ಭಾಗವಹಿಸಿ ಉತ್ತತ್ತಿ ಅರ್ಪಿಸಿ ದರ್ಶನಾರ್ಶಿವಾದ ಪಡೆದುಕೊಂಡರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.