“ಮಗಾ ಕಷ್ಟದಲ್ಲಿರುವವರಿಗೆ ಯಾವತ್ತೂ ಸಹಾಯ ಮಾಡಬೇಕು..” ಅವನು ತನ್ನ 10 ವರ್ಷದ ಮಗನಿಗೆ ಹೇಳುತ್ತಿದ್ದ..
ಮರುದಿನ ಮಗನ ಜೊತೆ ಮಾರ್ಕೆಟ್ ಹೋದಾಗ, ಅಲ್ಲೊಬ್ಬ ಕೈ ಕಾಲುಗಳಿಲ್ಲದ ಕೊಳಕು ಬಟ್ಟೆಯ ವೃದ್ಧನೊಬ್ಬ ಭಿಕ್ಷೆ ಬೇಡುತ್ತಿರುವುದು ಕಂಡ ಮಗನು ತನ್ನ ಕೈಯಲ್ಲಿರುವ ತಿಂಡಿ ಪೊಟ್ಟಣವನ್ನು ಅವನಿಗೆ ನೀಡಲು ಹೋದ..ಅದನ್ನು ಕಂಡ ತಂದೆ, “ಛೀ…ಛೀ ಅವನ ಹತ್ತಿರ ಹೋಗಬೇಡ. ಕೊಳಕು…” ಎಂದು ಮಗನನ್ನು ಎಳೆದುಕೊಂಡು ಹೋದ…!
✍🏻ಮನು ಎಸ್ ವೈದ್ಯ